Saturday, July 10, 2021

ಒಂದೇ ಒಂದು ಲೋಕ ನೀನೇ

¶ನನ್ನ ಒಂದೇ ಒಂದು ಲೋಕ ನೀನೇ
ಲೋಕಕೆಲ್ಲ ಅಂದ ನೀನೇ
ಅಂದಕ್ಕೆಲ್ಲ ಹೃದಯ ನೀನೇ
ನೀ ನನಗೆ ಸ್ವಂತನೆ!?

ಚಂದದ ಮುಂಗೋಪ ನೀನೇ
ಕೋಪತಂದ ದೀಪ ನೀನೇ
ದೀಪದ ಹೊಳಪು ನೀನೇ
ನನ್ನ ಪ್ರಾಣನ ಬೆಳಗಿಸಿದೆ

ನಿನ್ನ ನಿನ್ನಂತೆ ಪ್ರೀತಿಸಲಾ?
ನನ್ನ ನಿನಗಾಗಿ ಅರ್ಪಿಸಲಾ?
ಪ್ರತಿಕ್ಷಣದಲ್ಲೂ ನಿನ್ನ ಕೂಡಿರಲಾ?
ಜನ್ಮ ಜನ್ಮಕು ಜೊತೆಯಾಗಲಾ?¶

ಕಣ್ಣಿನಲ್ಲೇ ನಿತ್ಯವೂ ನಿನ್ನೆ ಅಪ್ಪಿಕೊಳ್ಳಲ?
ಕಾಲವೆಲ್ಲ ನಾನು ನಿನಗೆ ಕಾವಲಾಗಲ?
ನೀ ಮರೆತ ಸಂತೋಷವ ನಾ ಮತ್ತೆ ಹಂಚಲ?
ಎಂದೆಂದಿಗೂ ನೆನೆವಂತೆ ಸಂತೋಷದಿ ಮುಳುಗಿಸಲ?
ಕಿರುನಗೆಯನ್ನೇ ಕಾಲ್ಗೆಜ್ಜೆಮಾಡಿ ಕಟ್ಟಲ?

ಕ್ಷಣಕೆ ನೀನು ಕಾಣದಿದ್ದರು ನಾನು ತಡೆಯೆನೆ
ಒಂದು ಹೆಜ್ಜೆ ದೂರಹೋದರು ನನ್ನುಸಿರಾಡದೆ
ಬಿಸಿಲು ನಿನ್ನ  ಸ್ಪರ್ಶಿಸಿದರೆ ನಾ ಬೆವರುವೆ
ಚಳಿ ನಿನ್ನು ತಾಕಿದರೆ, ನನ್ನಲಿ ನಡುಕವೇ
ದೇಹ ನಿನದೆ, ನಿನ್ನ ಪ್ರಾಣ ನಾನೇನೆ

-ಸುರೇಂದ್ರ ನಾಡಿಗ್

ಹಾಡು: ಒಕೆ ಒಕ ಲೋಕಮ್ (ಶಶಿ)
ತೆಲುಗು ಸಾಹಿತ್ಯ: ಚಂದ್ರ ಬೋಸ್

Saturday, March 20, 2021

ನಾ ಬುದ್ಧನಾಗಿರುವೆ!

ಬರೆಯದಾದೆ ನಾನು ಬದುಕು ಏನೆಂದು
ತಿಳಿದಿರುವತನಕ ಸಾವು ಮುಂದೆಂದು
ಯಕ್ಷಪ್ರಶ್ನೆ ನಾನು ನನಗೆಂದು
ಉತ್ತರವೇ ಇಲ್ಲದ ಜಗನಂದು 

ಈ ಕ್ಷಣಕೆ ಏಕೋ ಕೋಪ ಪ್ರತಾಪ
ಮರುಕ್ಷಣಕೆ ಬದಲಾದ ರೂಪ
ಜೀವನವು ಸುಖವ ಹುಡುಕುವ ನಿಕ್ಷೇಪ
ಆದಿಯಲೇ ನೆಡೆಯುವ ಸಮಾರೋಪ

ಬಗೆದಷ್ಟೂ ಆಳಕೆ ಇಳಿಯುವ ಒಲವೇ
ನೀ ಧೃತಿಚಿತ್ತವೇ? ನನ್ನ ಆತ್ಮಬಲವೇ?
ದೂರ ಸರಿದರು ಕಾಡಲೇಕೆ ಬರುವೆ
ನಿನ್ನ ಮೀರಿ ನಾ ಬುದ್ಧನಾಗಿರುವೆ!

-ಸುರೇಂದ್ರ

Monday, November 16, 2020

ಗುಪ್ತ ಗಾಮಿನಿ ಮನಸು


ಏನು ಇಲ್ಲದ ಊರಿನಲ್ಲಿ
ಯಾರು ಇಲ್ಲದ ಮನೆಯ ಒಳಗೆ 
ಅರ್ಧ ತೂಗುವ ಕುರ್ಚಿ ಮೇಲೆ 
ಏಕಾಂತ ಸವಿಯುತ ಕೂತೆನು | 

ಎಲ್ಲ ಜನರು ಎಲ್ಲಿ ಹೋದರು 
ಬೇಕೆಂದಾಗ ಯಾರೂ ಬರರು 
ನನ್ನ ಒಳಗಡೆ ಎಲ್ಲರು 
ಎಲ್ಲರೊಳಗಡೆ ನಾನು ಯಾರು? |

ಗುಪ್ತ ಗಾಮಿನಿ ಮನಸು ಸುಡುಗಾಡು 
ಮನದ ಕಡಲ ಒಳಗೆ ಮರಳುಗಾಡು
ವಿಷಕಾರುವ ಸಂಸಾರ ಕಾಡು
ಬಿಳಿ ಸರ್ಪಗಳ ಹಾಳು ಬೀಡು |

ಜೊತೆಗಿರುವನೆಂದ ಅವನೆಲ್ಲಿ
ನಾ ರಕ್ತಬಸೆದು ಉಳಿಸಿದ ಇವಳೆಲ್ಲಿ
ಅಲ್ಲಿ ಇಲ್ಲಿ ಮೀರಿ ಎಲ್ಲೆಗಳಲ್ಲಿ
ಯಾರು ಇಲ್ಲದ ಜಗದಲಿ 
ನಾ ಪೈಪೋಟಿ ಮಾಡಿದೆ ನನ್ನಲಿ |

-ಸುರೇಂದ್ರ ನಾಡಿಗ್

ನಾ ಎಂತ?!


ನಾನೊಬ್ಬ ಪರಕೀಯ, ಪರರಿಲ್ಲದ ಜಗದೊಡಯ
ಕನಸಿನ ನಡೆಯ, ನಿಜವೆಂಬ ಮಡೆಯ
ನಾ ಭಿಕ್ಕುಬೀಗುವ ಸಮಯ
ಎಲ್ಲೋ ಕೊನೆಯ ಬೀಡೆಯ ಭಯ!


ಸಾವೇಕೆ ಸುತ್ತಿದೆ ಸುತ್ತ, ಬರದೆ ನನ್ನತ್ತ
ಏಕಿಂತ ಅಂತ, ಜಗವೆ ದುರಂತ
ಸಮಯವ ದೂರುತ್ತ, ಹತ್ತಿರ ಬರುತ್ತ
ಕೊರಗಿದೆ ನಾ ಬರಿ ಸಾವಂತ? ನಾ ಎಂತ?!


ನನ್ನೊಳಗೆ ನಾನೊಬ್ಬ, ಅವನೊಳಗೆ ಇನ್ನೊಬ್ಬ
ಬಿದ್ದು ಏಳುವನೊಬ್ಬ, ಸಾವಿನೆಡೆ ಮತ್ತೊಬ್ಬ
ಮೋಹ ಧಿಕ್ಕರಿಸಿ ನೆಡೆ ಗುರಿಯಿಲ್ಲದೆಡೆ ಎನುವನೊಬ್ಬ
ತಾಳಿ ಬಾಳು ಎನುವ ಈ ಮನಸು ಅಬ್ಬಬ್ಬಾ!!


ತಿಳಿಯದಾದೆ ಬದುಕೆ! ಪ್ರಶ್ನೆಯಾ ನೀ? ಉತ್ತರವ ನೀ?
ಜವಕಂಜಿ ಬೆದರುವ ಹೇಡಿಯ ನೀ? ಮರ್ಮವಾ ನೀ?
ಸದಾ ಉಪದ್ರವಿಸೋ ಹ್ಹೇ ನನ್ನಂತರ್ಧ್ವನಿ
ಮೃತ್ಯುವನು ಮಣಿಸುವ ಅವಸನ ನೀ!!

-ಸುರೇಂದ್ರ ನಾಡಿಗ್


Monday, December 23, 2019

ಅಂತರಂಗದಲ್ಲಿ


ಪ್ರಶ್ನೆಯಾದೆ ನಾನು, ನನಗೆ
ತೀಕ್ಷ್ಣವಾದ ಮರುಳ ಬಗೆ
ಶಿಷ್ಠೆಯಾದೆ ನಾನು, ಜಗಕೆ
ಎಂದು ತೀರದ ಕನವರಿಕೆ

ಅಚ್ಚರಿ ನಾನು, ನಿನಗೆ
ತಿಳಿಯದ ಅರೆ ಸೊಬಗೆ
ತಿಳಿಯದಾದೆ ನಾನು, ಜನಕೆ
ಹಾಗೆ ಕಾಡುವ ಬೇಸರಿಕೆ

ನಾನೇಕೆ ಬೇಕೇ ನನಗೆ
ಮುಚ್ಚಿರುವ ಕೆಂಡದ ಹಾಗೆ
ಮುನ್ನೆಡೆ ಮನಸೇ ನೀನು
ಜೊತೆಗಿರುವೆ ನಿನ್ನೆಡೆ ನಾನು
ಜಗದಂಚಿಗೆ, ಯುಗದಂಚಿಗೆ
ನೀ ಕೋರಿದ ಸಾಧನೆಗೆ!

ಹೆದರದಿರು ನಶ್ವರಕೆ
ನೆಡೆಯುತಿರು ಕ್ಲಿಷ್ಟಕೆ
ದಿನವೊಂದಿದೆ, ಅದು ಮುಂದಿದೆ
ನಾ ನಿನ್ನದೇ ಎಂದಿದೆ!!

-ಸುರೇಂದ್ರ ನಾಡಿಗ್

Wednesday, July 27, 2016

ಗಿರ್ ಗಿಟ್ಲೆ ಕಣ್ಣಲಿ...

!! ಗಿರ್ ಗಿಟ್ಲೆ ಕಣ್ಣಲಿ, ಗುರುಗುರುನೆ ನೋಡುವೆ
ಕಾರಂಜಿ ಕೈಯಲಿ ಮುಂಗುರುಳ ತೀಡುವೆ !!

ನೀ ಬೇಡದಾಗ ಏಕೆ ಮುಂದೆ ಬಂದು ಹೋಗುವೆ
ಹೇಳು, ಸಂಜೆ ಬಂದು ಮನಸಿನಲ್ಲೆ ವಾರ್ತೆ ಓದುವೆ
ನಾ ನಿನ್ನ ನೋಡದಿದ್ದರೆ ಸಾದ ಆಳಾಗುವೆ
ನೀ ಕಂಡ ಕ್ಷಣದಲಿ ರಾಜನಾಗುವೆ!!
!!ನಾ ರಾಜನಾಗುವೆ!!

ಹಳೆಯ ನೆನೆಪುಗಳ ನೀ ಇಣುಕಿ ತೆರೆಯುವೆ
ಹೃದಯದ ಮಾತನು ನೀ ಹುಡುಕಿ ಹಿಡಿಯುವೆ

ಸೀತಾಳೆ ಸಿಡುಬು ನನ್ನ ಸಿಟ್ಟಲ್ಲಿ ಕುಟುಕ್ಕುವೆ
ಆಮೇಲೆ ಅಕ್ಕರೆಯಿಂದ ಆರೈಕೆ  ಮಾಡುವೆ
ಜೋಡಿಯಾಗು ನೀ ನನಗೆ, ಕೈ ಬೀಸಿ ಏಕೆ ಹೋಗುವೆ?
ಸಾಂಬ್ರಾಣಿ ಹೊಗೆಯಂತೆ ಸುತ್ತಿಸುತ್ತಿ ಮತ್ತೆ ಬರುವೆ!
ನೋಡಬೇಡ ನನ್ನ ಹೀಗೆ...
ನಿನ್ನ ನೋಡಿ ನಾ ಜಾರಲಿ ನಿದಿರೆಗೆ ಹೇಗೆ??

ಚಂದವಾಗಿ ಬಳುಕಿ ನನ್ನ ಹೃದಯಕ್ಕೆ ಚುಚ್ಚುವೆ
ಅಂದವಾಗಿ ನಕ್ಕು ನನ್ನ ಉಸಿರೆ ನಿಲ್ಲಿಸುವೆ!
ತಂಗಾಳಿಯಂತೆ ಬಂದು ಮನದಲ್ಲೆ ಬೀಸುವೆ
ಮುಸ್ಸಂಜೆ ಮಳೆಯಂತೆ ಮುತ್ತನು ಸುರಿಸುವೆ!!
ಕಾಲ ನೇರ ನೋಡದೆಯೆ ಹೇಳುವೆನು ನಿನ್ನ ಹೆಸರೆ
ಕೋಟಿದೇವ್ರ ಮೇಲಾಣೆ, ನೀ ದೇವತೆ ನನ್ನುಸಿರೆ
ತಾಕಬೇಡ ನನ್ನ ಹೀಗೆ..
ನಿನ್ನ ಸ್ಪರ್ಶಿಸಿ ನಾ ಬದುಕಲಿ ಹೇಗೆ??


- ಸುರೇಂದ್ರ ನಾಡಿಗ್

Monday, October 13, 2014

ಮುಗಿಯದಿರು ದಾರಿ...


ಮುಗಿಯದಿರು ದಾರಿ, ನಿನ್ನ ಮೇಲೆ ಹೊಂಟಿಹೆನು ಸವಾರಿ
ಬೆಟ್ಟಗುಡ್ಡಗಳ ಏರಿ, ಇಳಿ ಬಂಡೆಗಳ ಜಾರಿ
ಹೊಂಬಿಸಿಲ ಬುಟ್ಟಿಯಲಿ ನಾ ನೆಡೆದದೆ ದಾರಿ!!
ಮಾಯ ಮರ್ಕಟವೇರಿ, ಹಸಿರು ಕಾನನವ ಹಾರಿ
ನೀಲಿ ಸಾಗರ ಪಾರಿ, ಮರುಭೂಮಿಯ ಸವರಿ
ನಾನು ನನ್ನಿಚ್ಚೆಯಲಿ ಗಮ್ಯ ತಿಳಿಯದ ಅಲೆಮಾರಿ!!

ಯಾರು ಇಲ್ಲದ ಜಗದಲಿ, ನನ್ನನ್ನಾಳುವ ನನ್ನಲಿ
ಹಂಗಿರಲಿ, ಅಹಂ ಇರಲಿ, ಕಾಣದ ಖುಷಿಯಿರಲಿ
ಉಪ್ಪಿರಲಿ, ಸೊಪ್ಪಿರಲಿ, ಅನುಭವಿಸೊ ರುಚಿಯಿರಲಿ!!
ಜೊತೆಗೆ ಬಂದವರಿರಲಿ, ಎಲ್ಲೊ ನಿಂತವರಿರಲಿ
ಚಳಿಯಿರಲಿ, ಮಳೆಯಿರಲಿ, ತೊಯ್ಯದಿರು ಕಡೆಯಲಿ
ಬಿಸಿಲಿರಲಿ, ಬಿರುಗಾಳಿ ಬರಲಿ, ತಳ್ಳದಿರು ಜವರಲಿ!!

ಕನಸುಗಳ ಸಂತೆಯಿದೆ, ಕಟ್ಟುಪಾಡುಗಳ ಚಿತೆಯಿದೆ
ತಣಿವಿದೆ, ತ್ರುಷೆಯಿದೆ ಕನಸಿನ ಹಿಂದೆ
ನಿಂತ ಅರಿವಿದೆ, ಕೊಳ್ಳಿಹಿಡಿದಿದೆ, ಚಿತೆಯೇರಿದೆ!!
ಹೊಸ ಹುರುಪಿದೆ, ಯುಗಳ ಚಿಮ್ಮಿದೆ
ನ್ಯೂನ್ನತೆಯ ಲಕ್ಷ್ಯವಿದೆ, ಅಜ್ಞಾತ ತತ್ತ್ವವಿದೆ
ಎಲ್ಲ ತಿಳಿವಿದೆ ಮುಂದೆ ಮುಗಿಯದ ದಾರಿಯಿದೆ!!
                       -ಸುರೇಂದ್ರ ನಾಡಿಗ್

Tuesday, May 13, 2014

ಎಲ್ಲಿ ಹೋದೆ ಇಂದು?


ಕೇಳಲಿಲ್ಲ ಇಂದು ನಿನ್ನ ಪಿಸುಮಾತು
ನಿನ್ನ ನೋಡದೇನೆ ಒಂದು ಸಂಜೆಯಾಯ್ತು
ನಿನ್ನ ದನಿಗೆ ನಾ ಮನಸೋತು
ಕಾದಿರುವೆ ನಿನಗೆ ಇಲ್ಲೆ ಕೂತು ಕೂತು

ಊರು ಕೇರಿ ತಿರುಗಿ ಬಂದೆ ನೀ ಸಿಗುವೆ ಎಂದು
ಅಜ್ಜಿ ಅಂಗಡಿಲಿ ಬತ್ತಾಸು ಕೊಂಡುಕೊಂಡು
ಬಾವಿ ಕಟ್ಟೆ ಮೇಲೆ ಕುಂತೆ, ಕೊಡವ ಹಿಡಿದು ಕೊಂಡು
ಎಲ್ಲಿ ಹೋದೆ ಇಂದು? ಬೇಗ ಬಂದು ನೋಡು

ಮಲಗಿರುವೆಯ ನೀನು? ಜ್ವರ ಬಂದು?
ತಪ್ಪು ಮಾಡಿದೆ ಏನು? ಅಪ್ಪ ಸಿಡುಕಿದರೇನು?
ತಾಳಲರೆ ಇನ್ನು! ನಿನ್ನ ಮನೆಗೆ ಹೊರಟೆ ನಾನು!
ತಾಳು, ತಾಳು! ನಿನ್ನಮ್ಮ ಕೇಳಿದರೆ ನಾ ಉತ್ತರಿಸಲೇನು?

ಮೂಲೆ ಬೀದಿ ಮಾರಮ್ಮನ ಗುಡಿಗೆ ಕೈ ಮುಗಿದು
ಕೋಟೆ ಆಂಜನೇಯನಿಗೆ ಕಾಯಿ ಒಡೆದು
ನಮ್ಮಪ್ಪ ಗಣಪನಿಗೆ ಹರಕೆ ಕಟ್ಟಿಕೊಂಡು
ಹೆಜ್ಜೆ ಹೆಜ್ಜೆಗೂ ಹೆದರಿಕೊಂಡು, ನಿನ್ನ ಮನೆಗೆ ಬಂದೆ ನೋಡು

ಏಕೆ ಇಷ್ಟು ಜನರು? ಮನೆಯಲಿ ಹಬ್ಬವೇನು?
ನಮ್ಮಪ್ಪ ನಿಂತಿಹರು ಹೊಗೆ ಸರಿಸಿಕೊಂಡು
ಅಲ್ಲಿ, ಮಧ್ಯದಲಿ ಮಲಗಿರುವುದು ನೀನೇನು?
ನಿನ್ನುಸಿರು ಇರದೆ.... ನಿಂತಿತು ನನ್ನೆದೆಯ ಗೂಡು

   -ಸುರೇಂದ್ರ ನಾಡಿಗ್
ಎಲ್ಲಿ ಹೋದೆ ಇಂದು? (Female Version)




Sunday, October 13, 2013

ಪ್ರೀತಿಸುವೆಯ ನೀನು? ಒಮ್ಮೆ ಕೇಳಿಬಿಡಲೇನು??


ಕಣ್ಣಲಿ ಕನಸು, ನಿನ್ನಲ್ಲೆ ಮನಸು
ಏನಿಂತ ಸೊಗಸು, ನನ್ನನೆ ರಮಿಸು
ನಿನ್ನ ಕಂಡ ದಾರಿಯಲ್ಲೆ ನಾನು ಕಳೆದುಹೋದೆನು
ಬೇಡಿದೆ ವಯಸು, ಕಾಡಿದೆ ಉರುಸು
ನನ್ನೆ ವರಿಸು, ಇಲ್ಲ ಮರೆಸು
ನಿನ್ನ ಕಂಡ ಕ್ಷಣದಲೆ ನಾ ಉಳಿದುಹೋದೆನು

ಪ್ರೀತಿಸುವೆಯ ನೀನು????
ಒಮ್ಮೆ ಕೇಳಿಬಿಡಲೇನು?
ಪ್ರೀತಿಸುವೆಯ ನೀನು????
ಒಮ್ಮೆ ಕೇಳಿಬಿಡಲೇನು..?
ಪ್ರೀತಿಸುವೆಯ ನೀನು..????
ನಿನ್ನೆ ಕೇಳಿಬಿಡಲೇನು......?

ನನ್ನ ಮನಸು ಒಂಥರ ಮರುಭೂಮಿಯಂತೆ
ನಿನ್ನ ಒಂದು ನಗುವಿಗೆ ಹಸಿರಹಾಸಿತಂತೆ
ನೀ ಯಾವ ಊರ ರಾಜಕುಮಾರಿ?
ಕೊಳ್ಳೆಹೊಡೆದು ಹೋದೆ ನನ್ನೆದೆಯ ಕೇರಿ
ಏಲ್ಲ ಮರೆತು ನಾ ನಿನ್ನ ಹಿಂದೆ ಬಂದೆನು
ಏನು.. ಮಾಡಲಿ ಈಗ.. ತಿಳಿಯದಾದೆನು !

ಪ್ರೀತಿಸುವೆಯ ನೀನು????
ಒಮ್ಮೆ ಕೇಳಿಬಿಡಲೇನು?
ಪ್ರೀತಿಸುವೆಯ ನೀನು????
ಒಮ್ಮೆ ಕೇಳಿಬಿಡಲೇನು..?
ಪ್ರೀತಿಸುವೆಯ ನೀನು..????
ನಿನ್ನೆ ಕೇಳಿಬಿಡಲೇನು......?

ಕತ್ತಲಲಿ ಕನವರಿಸಿ, ನಿನಗಾಗಿ ಹಪಹಪಿಸಿ
ಮನದಲೆ ಆದರಿಸಿ, ನಿನ್ನ ಹಬ್ಬ ಆಚರಿಸಿ
ಬಂದೆ ಈಗ ನಾನು, ಮುಂದೆ ಮಾಡಲೇನು?
ನಿನ್ನನೆ ಧ್ಯಾನಿಸಿ, ಪೂಜಿಸಿ ಪರವಶಿಸಿ
ನೀ ನನ್ನನು ಆವರಿಸಿ, ಆಳಿಬಿಡು ನನ್ನರಸಿ...

ಪ್ರೀತಿಸುವೆಯ ನೀನು????
ಒಮ್ಮೆ ಕೇಳಿಬಿಡಲೇನು?
ಪ್ರೀತಿಸುವೆಯ ನೀನು????
ಒಮ್ಮೆ ಕೇಳಿಬಿಡಲೇನು..?
ಪ್ರೀತಿಸುವೆಯ ನೀನು..????
ನಿನ್ನೆ ಕೇಳಿಬಿಡಲೇನು......?


                       -ಸುರೇಂದ್ರ ನಾಡಿಗ್

Monday, June 24, 2013

ಒಲವೆ ನೀ ದೇವರ ವರವ? ಸೋಜಿಗ.... ಅಲ್ಲವ ??



ಮೊದಮೊದಲ ಮೋಹದ ನೋಟ
ಕಣ್ಣಲ್ಲೆ ನೀ ಮಾಡಿದೆ ಮಾಟ
ಒಲವೆ ನೀ ದೇವರ ವರವ
ಸೋಜಿಗ.... ಅಲ್ಲವ ??

ಇದು ತುಂತುರು ಹನಿಗಳ ಲೋಕ
ಹನಿ ಹನಿಯಲ್ಲು ನಿನ್ನದೆ ಶ್ಲೋಕ
ಒಲವೆ ನೀ ತೋರಿದೆ ಜಗವ
ಒಡ್ಡೋಲಗ.... ಅಲ್ಲವ ??


ಮುಂಜಾವಲಿ ನಿನ್ನದೆ ಕನಸು
ಮುಸ್ಸಂಜೆಗೆ ಕಾದಿದೆ ಮನಸು
ಇದು ಸಾವಿರ ದೇವರ ಕೊಸರು
ನೀನಿದ್ದರೆ ಕೋಟಿ ನೆಸರು
ನಿನ್ನ ನಗುವಿಗೆ ಮರೆತೆನು ಕ್ಷಣವ
ವ್ಯಪಕ.... ಅಲ್ಲವ ??

ಕಿವಿ ತುಂಬಿದೆ ನಿನ್ನದೆ ಮಾತು
ಕಣ್ಣಲ್ಲಿ ನಿನದೇ ಜಾಹಿರಾತು
ಮನಸಲ್ಲಿ ಏನಿದು ಕದನ
ನಾಚಿಕೆ ಬಿಟ್ಟಾಗಿದೆ ಸದನ
ನೀ ಹೂಬುಗ್ಗೆಯಲಿ ಚಿಮ್ಮಿ ಬರುವ
ಅಚ್ಚರಿ.... ಅಲ್ಲವ ??

   -ಸುರೇಂದ್ರ ನಾಡಿಗ್

Wednesday, July 4, 2012

ಮಗುವಂತ ಮನಸೀಗು ಮಕ್ಕ್ಳಾಗಿದೆ !!


ಪರಪಂಚ ಇಂದೇಕೊ ಹಾಳಾಗಿದೆ
ಮೆಷೀನು ಲೈಫು ಬಾಳಾಗಿದೆ
ಈಗೀಗ ಲವ್ವು ಓಲ್ಡಾಗಿದೆ
ನನ್ನ ಮಗುವಂತ ಮನಸೀಗು ಮಕ್ಕ್ಳಾಗಿದೆ !!
ಹುಡುಕಿದರು ಇಷ್ಕು ಇಲ್ಲವಾಗಿದೆ
ಮಗುವಂತ ಮನಸೀಗು ಮಕ್ಕ್ಳಾಗಿದೆ !!

ಹೆಣ್ಮಕ್ಕ್ಳ ವಿಚಾರ ಬೋರಾಗಿದೆ
ಗಂಡೈಕ್ಳ ಸಹವಾಸ ಸಾಕಾಗಿದೆ
ಒಬ್ಬೋಬ್ಬನೆ ಕೂತಾಗ ಸಾವಾಗಿದೆ
ನನ್ನ ಮಗುವಂತ ಮನಸೀಗು ಮಕ್ಕ್ಳಾಗಿದೆ !!
ಗೆಲುವೆಂಬ ಕುದುರೆ ಕನಸಾಗಿದೆ
ಮಗುವಂತ ಮನಸೀಗು ಮಕ್ಕ್ಳಾಗಿದೆ !!

ಯಾವನೊ ಬೇಡಿದಾ ಅಂತ ಮತಹಾಕಿದೆ
ನೋಡೊಕ್ಕೆ ಹಾನೆಸ್ಟು ಎಂದೆನಿಸಿದೆ
ಗೆದ್ದೆತ್ತು ಕೂಡ ಗೆಲುವಾಗಿದೆ
ಹಿಂಡಿ ಹಾಕ್ದೋರ ಮರೆತೋಗಿದೆ
ಈಗ ವೋಟಿಗೊಂದರಂತೆ ಸ್ಕ್ಯಂಡಲ್ ಇದೆ
ಮಗುವಂತ ಮನಸೀಗು ಮಕ್ಕ್ಳಾಗಿದೆ !!

ಮದುವೆಗೆ ಮೂರ್ ತಿಂಗಳ ಡೈವೊರ್ಸಿದೆ
ಕ್ರೆಡಿಟ್ ಕಾರ್ಡ್ ಗೆ ಇ.ಮ್.ಐ ಆಫರ್ ಇದೆ
ಲಿವ್-ಇನ್ನು, ನೈಟ್-ಸ್ಟ್ಯಂಡು ಕಾಮನ್ನಾಗಿದೆ
ನನ್ನ ಮಗುವಂತ ಮನಸೀಗು ಮಕ್ಕ್ಳಾಗಿದೆ !!
ಕಲ್ಚರ್ರು ಬುಕ್ಕಲ್ಲಿ ಸೇಫಾಗಿದೆ
ಮಗುವಂತ ಮನಸೀಗು ಮಕ್ಕ್ಳಾಗಿದೆ !!

ಶಾಂತಿನ ಸೇಲ್ ಮಾಡೋ ಸ್ಕೂಲು ಇದೆ
ಸೆಮಿಸ್ಟ್ರು ಜ್ಞಾನನ ನೂಂಗಾಕಿದೆ
ಹಿಸ್ಟರಿ ಬರೆದೋಂದೆ ಫ಼ೇಲ್ ಆಗಿದೆ
ನನ್ನ ಮಗುವಂತ ಮನಸೀಗು ಮಕ್ಕ್ಳಾಗಿದೆ !!
ಸಾಕಾಯ್ತು ಈ ಚೇಂಜು ಎಂದೆನಿಸಿದೆ
ಮಗುವಂತ ಮನಸೀಗು ಮಕ್ಕ್ಳಾಗಿದೆ !!

                             -ಸುರೇಂದ್ರ ನಾಡಿಗ್

Monday, April 16, 2012

ಹಸಿವು


ಯಾರೊ ಕರೆದ ಕರೆ ನಿನಗೆ ಕೇಳಿತೆ? 
ಹಸಿದು ಕೂಗುತಿರುವುದು ನನಗೆ ಕೇಳಿತೆ...
ಹುಟ್ಟಿಸಿದ ದೈವವು ಹುಲ್ಲನ್ನು ಕೊಡದೆ
ಹಸಿವಾಗಿ ಬಂದು ಕಾಡುತಿಹನೆ

ತಿಳಿದಿರುವೆಯ ನೀನು ಹಸಿವಿನ ನೋವನು?
ನೂರಂತಸ್ತಿನ ಮಹಡಿಯಲ್ಲಿ ಕುಳಿತ ನಿನಗೆ ಹೇಗೆ ತಿಳಿವುದು..
ಕಿತ್ತು ತಿನ್ನೊ ಬಡತನ, ಅದಕು ನಿನ್ನ ಒಡೆತನ
ಪ್ರೀತಿಯ ಆತ್ಮಾಹುತಿಗೆ ನಿನ್ನ ಸಿರಿವಂತಿಯೆ ಸೋಪಾನ

ಸೂರು ನೆರಳಿಲ್ಲದೆ ನರಳಿ ನಡುಗುತಿಹರು
ಹುಟ್ಟಿನಿಂದ ಸಾವಿನೊರೆಗು ನಲಿವೆ ಕಾಣರು
ಗಂಧದ ಕೊರಡಂತೆ ತೆಯ್ಯುವೆ ನೀನು
ಅವರ ಪ್ರತಿ ಬೆವರ ಹನಿ ಸುಮ್ಮನೆ ಬಿಡದು

ನಿನ್ನ ಕಣ್ಣಮುಂದೆಯೆ ನೆತ್ತರು ಹರಿವುದು
ಅವರ ಜೀವ ತಿನ್ನುವ ನಿನಗೆ ಹಸಿವು ತಿಳಿಯದು
ಹಸಿವನು ಹಸಿ-ಹಸಿಯಾಗಿ ಕಂಡಿರುವರು ಅವರು
ಸಿರಿಯ ಮೆಟ್ಟಿ ನಿಲ್ಲೊ ಶಕ್ತಿ ಹಸಿವಿಗಿರುವುದು

                                     -ಸುರೇಂದ್ರ ನಾಡಿಗ್ ೨೦೦೨

Saturday, March 3, 2012

ನಿನ್ನ ಭಾಷೆಯು ಬಾ ಎಂದು ಕರೆದಿದೆ ಬಾ ಕನ್ನಡಿಗ..!!

"ನಿನ್ನ ಪುಟ್ಟ ಮನದಲ್ಲಿ,
ಆಚೆ ಎಲ್ಲೊ ದೂರದಲಿ,
ಈ ಕೂಗು ಕೆಳದ ನಿನಗೀಗಾ..??
ನಿನ್ನ ಭಾಷೆಯು ಬಾ ಎಂದು ಕರೆದಿದೆ ಕೇಳೋ ಕನ್ನಡಿಗ
ನಿನ್ನ ಭಾಷೆಯು ಬಾ ಎಂದು ಕರೆದಿದೆ ಬಾ ಕನ್ನಡಿಗ"


ಈ ನಾಡಿದು ನಿನ್ನಿಂದ
ಸವಿ ಸಂಪಿಗೆ ಪದದಿಂದ
ಕೋಂಚವು ನಿನಗೆ ನೆನಪಿಗೆ ಬರದ??
ಇದು ಸಾವಿನ ಆಚೆಗು ಬಿಡಿಸಲಾಗದ ಬಂಧ


ಮರೆವೆನೆಂದರು ಆಗದೆಯೆ
ಇರಲಾಗದು ಕನ್ನಡ ನುಡಿಯದೆ
ಜಗವನ್ನೆ ಗೆದ್ದರು ನೀನು, ಕರುನಾಡೇ ನಿನ್ನ ತಾಯಿನಾಡು
ಎಲ್ಲಿ ಹೇಗೆ ಇದ್ದರು ನೀನು
ಕನ್ನಡಾಂಬೆ ಕಾಯುವಳು
ಪುಣ್ಯಭೂಮಿ ಈ ಮಣ್ಣು, ಕಣ್ಣು ಮುಚ್ಚಿ ಮರೆವುದೇನು??


"ನಿನ್ನ ಪುಟ್ಟ ಮನದಲ್ಲಿ,
ಆಚೆ ಎಲ್ಲೊ ದೂರದಲಿ,
ಈ ಕೂಗು ಕೆಳದ ನಿನಗೀಗಾ..??
ನಿನ್ನ ಭಾಷೆಯು ಬಾ ಎಂದು ಕರೆದಿದೆ ಕೇಳೋ ಕನ್ನಡಿಗ
ನಿನ್ನ ಭಾಷೆಯು ಬಾ ಎಂದು ಕರೆದಿದೆ ಬಾ ಕನ್ನಡಿಗ"


ಕಾವೇರಿ ಇಲ್ಲಿ ಹರಿದಿಹಳು
ತುಂಗೆ ನಿನ್ನ ತೊಳೆದಿಹಳು
ಸಹ್ಯಾದ್ರಿ ಹಸಿರು ತುಂಬಿಹುದು
ಪ್ರತಿದಿನವು ನುಡಿಜಾತ್ರೆ ನೆಡೆದಿಹುದು
ನೀ ಕಣ್ಣಾಮುಚ್ಚೆ ಆಟ ಕಲಿತು
ಟಪ್ಪಂಗುಚ್ಚಿ ಆಡಿ ನಲಿದು
ಮರಕೋತಿಯಾಡಿ ಕಾಲು ಮುರಿದು
ಏನು ತಿಳಿಯದಂತೆ ಎಲ್ಲ ಮರೆತು
ಈಗ ಎನೊ ತಿಂದು, ಎಲ್ಲೊ ಮಲಗುವುದು ಒಂದು ಬದುಕ...???


"ನಿನ್ನ ಪುಟ್ಟ ಮನದಲ್ಲಿ,
ಆಚೆ ಎಲ್ಲೊ ದೂರದಲಿ,
ಈ ಕೂಗು ಕೆಳದ ನಿನಗೀಗಾ..??
ನಿನ್ನ ಭಾಷೆಯು ಬಾ ಎಂದು ಕರೆದಿದೆ ಕೇಳೋ ಕನ್ನಡಿಗ
ನಿನ್ನ ಭಾಷೆಯು ಬಾ ಎಂದು ಕರೆದಿದೆ ಬಾ ಕನ್ನಡಿಗ"


ಕೇಳು ನಿನ್ನ ಹೃದಯವನು,
ಕನ್ನಡವು ನಿನ್ನ ಕರೆದಿಹುದು
ಆಡಲು ಸಾವಿರ ಭಾಷೆಗಳಿರಬಹುದು
ನಿನ್ನ ಮನಸಿನ ಕನ್ನಡ ಭಾಷೆಯಿದು
ಕನ್ನಡಾಂಬೆ ಕಣ್ಣೀರೊರೆಸೊ ಕೈಗಳಾಗು
ಎದುರು ಬಂದವರ ಮೆಟ್ಟೊ ಶಕ್ತಿಯಾಗು
ಕನ್ನಡಕ್ಕೆ ಕೈಯೆತ್ತಿ ನೀ ಮುನ್ನೆಡೆ
ಈ ನಾಡು ಬರುವುದು ನಿನ್ನಾ ಹಿಂದೆ
ಈ ತಾಯಿನಾಡು ನಿನ್ನ ಕರೆದಿದೆ... ಕನ್ನಡಿಗ


"ನಿನ್ನ ಪುಟ್ಟ ಮನದಲ್ಲಿ,
ಆಚೆ ಎಲ್ಲೊ ದೂರದಲಿ,
ಈ ಕೂಗು ಕೆಳದ ನಿನಗೀಗಾ..??
ನಿನ್ನ ಭಾಷೆಯು ಬಾ ಎಂದು ಕರೆದಿದೆ ಕೇಳೋ ಕನ್ನಡಿಗ
ನಿನ್ನ ಭಾಷೆಯು ಬಾ ಎಂದು ಕರೆದಿದೆ ಬಾ ಕನ್ನಡಿಗ"

                                                       -ಸುರೇಂದ್ರ ನಾಡಿಗ್

Monday, February 13, 2012

ಒಲವು ಅತಿಯಾಗಿ ಮಿತಿಮೀರಿದೆ..


ಸವಿ ಕನಸು ಮೂಡಿದ ಗಳಿಗೆ ಇದಾಗಿದೆ
ನಿನ್ನ ನಗುವ ನೋಡಿ ಮನಸಿಗೆ ಹಾಯಾಗಿದೆ
ಏನಾಗಿದೆ? ಏನೋ ಆಗಿದೆ...
ನಿನ್ನ ಹೆಸರು ಕೂಗೊ ಬಯಕೆ ಮನಕೆ
ಮಿತಿ ಮೀರಿ ಅತಿಯಾಗಿದೆ
ಹೇಗೊ ಆಗಿದೆ.. ಹೇಗೇಗೊ ಆಗಿದೆ
ನಿನ್ನದೆನೊ ಸೆಳೆವು, ಬಾರಿ ಒಲವು ಮನದಿ
ಅತಿಯಾಗಿ ಮಿತಿಮೀರಿದೆ


ಯಾವ ಸೀಮೆ ದೇವತೆ ನೀನು, ಒಲವ ವರ್ಷ ಸುರಿಸಿದೆ
ಢವ ಢವ ಹೃದಯಕೆ ಇನ್ನು ಸಾಲದೆಂದು ನಾ ಬೇಡಲು ಬಂದೆ
ಕೋವಿಯನ್ನು ಮುಂದೆ ಇರಿಸಿ ಸುಡುವುದೇನು ಪ್ರೇಮವೆಂದೆ
ಸಾವಿಗು ಮಂಪರು ಬಡಿದು ಪೀತಿಗೆ ಪರವಶನಾದೆ
ಏನಾಗಿದೆ? ಏನೋ ಆಗಿದೆ...
ನಿನ್ನ ಜೊತೆಗೆ ಗಳಿಗೆ ಕಳೆಯೋ ಹರಕೆ ಮನಕೆ
ಮಿತಿ ಮೀರಿ ಅತಿಯಾಗಿದೆ
ಹೇಗೊ ಆಗಿದೆ.. ಹೇಗೇಗೊ ಆಗಿದೆ
ನಿನ್ನದೆ ಹರೆಯ ಕರೆಯ ಕೇಳೊ ಆಸೆ ಮನದಿ
ಅತಿಯಾಗಿ ಮಿತಿಮೀರಿದೆ


ನನ್ನೋಲವು ಊರಿದು ಗೆಳತಿ, ನೀ ಏಂದೊ ಇದರ ರಾಣಿಯಾದೆ
ಪ್ರತಿ ಅಣುವಿನಲ್ಲು ನಾ ಬರೆದ ಹೆಸರು ನಿಂದೆ
ಸುಡುಗಾಡು ಮರಳುಗಾಡು ಮಲೆನಾಡಗಿದೆ
ನೀ ಎರೆದ ಒಲವಲಿ ಬೆರೆತು ನಾನೇ ಕಡಲಾದೆ
ಏನಾಗಿದೆ? ಏನೋ ಆಗಿದೆ...
ನಿನ್ನನೆ ಸೇರೊ ಬಯಕೆ ಮನಕೆ
ಮಿತಿ ಮೀರಿ ಅತಿಯಾಗಿದೆ
ಹೇಗೊ ಆಗಿದೆ.. ಹೇಗೇಗೊ ಆಗಿದೆ
ನಿನ್ನದೆ ನಗುವು, ಮನದಿ ನಲಿವ ಒಲವು
ಅತಿಯಾಗಿ ಮಿತಿಮೀರಿದೆ


                                   -ಸುರೇಂದ್ರ ನಾಡಿಗ್

Wednesday, January 18, 2012

ಅಕಾರ ವಿಕಾರ ನನ್ನಂತರಾಳ


ಕನಸು ಕಾಣುವ ಕರ್ಮ
ಸಾವು ತಿಳಿದು ಬಾಳುವ ಜನ್ಮ
ಅಕಾರ ವಿಕಾರ ನನ್ನಂತರಾಳ


ಕುದಿಸಿದ ಹಾಲು ಕಳೆದು ಹುಳುವಾದಂತೆ
ದಿನಗಳೆದಂತೆ ನನ್ನ ಮನಸು ಹೊಲಸು
ಕಾಯಿಸಿದ ಕಬ್ಬಿಣವು ಕಳೆಗುಂದಿದಂತೆ
ಚೂರು ಚೂರು ನನ್ನಿ ಬಿರುಸು ಕನಸು


ಯಾರು ಅರಿಯದ ಮರ್ಮ, ತಿಳಿಯಲಾಗದ ತರ್ಕ
ಬದುಕ ಬಂಡಿಯು ತೆವಳೊ ಪರದೇಶಿ ಪರ್ವ
ಸಾಧನೆಗೂ ಸಂಧಾನ, ಮನಸಿಗೋ ಮಂಥನ
ನೋವು ನಲಿವಿದು ಇಲ್ಲಿ ನಿರಾಳ ನರಕ..!!


ಸರಿ ಕ್ಷಣವು ಏಕೆ ದೇವರನಾಮ, ಹೇಜ್ಜೆಗೊ ಓಮ್ಮೆ ರಾಮ ರಾಮ
ಸ್ಮ್ರುತಿಪಟಲ ಸಖಿಧಾಮ, ಜೊಳ್ಳು ತುಂಬಿದ ದೇಹದಿ ಸತ್ಯಕಾಮ
ತೊರೆಬಡಿದ ತೀರದಲಿ, ತೆರೆಯೆಳೆದ ಮಂಟಪದಿ
ಕುಂದದಾ ಕಂಬನಿಗೆ ಇಲ್ಲ ಕ್ಷಾಮ..!!


ನಶ್ವರತೆಯ ಕಾವಲೇ ಧರ್ಮ?
ಸುರಸ್ಪರ್ಶ ಸಡಿಲಿಪುದೆ ಸಂಘರ್ಷ?
ಅಕಾರ ವಿಕಾರ ನನ್ನಂತರಾಳ


                  - ಸುರೇಂದ್ರ ನಾಡಿಗ್

Monday, December 19, 2011

ನೀ ಕಾಮನಬಿಲ್ಲು, ಯಾವ ಬಣ್ಣವಾಗಲಿ ನಾನು

ನೀ ಕಾಮನಬಿಲ್ಲು, ಯಾವ ಬಣ್ಣವಾಗಲಿ ನಾನು
ಮುಗಿಯದ ಮಳೆ ನೀನು ಯಾವ ಹನಿಯನು ಸೇರಲಿ ನಾನು
ನೀ ಬರೆದ ಕವಿತೆಯಲಿ ಯಾವ ಪದವಾಗಲಿ ನಾನು
ನಿನ್ನನೆ ನೋಡುತ ಮಾತು ಮರೆತ ಮೌನಿ ನಾನು

ನಿನ್ನ ನೆನೆದರೆ ಸಾವಿರ ಬಣ್ಣದ ಹೋಲಿ
ನೀ ನಕ್ಕರೆ ಕಣ್ಣಿಗೆ ಬೆಳಕಿನ ದಿವಲಿ
ಹೇಳಬೇಕು ಇದನು ನಿನ್ನ ಕಿವಿಯಲಿ
ನಾ ಮುಳುಗಿರುವ ಪಾಪಿ ನಿನ್ನ ಪ್ರೀತಿಯಲ್ಲಿ

ಯಾವ ಪರಿ ನೀನು ತುಂಬಿರುವೆ ಹೃದಯವನು
ನನ್ನ ಕಲ್ಪನೆ ನೀನು ಕನಸು ನೀನು
ನಿನಗಾಗೆ ಕಾದು ಕುಳಿತ ನಾನು
ಪದಗಳನೆ ಮರೆತ ಕವಿಯಾದೆನು

Monday, October 31, 2011

ನುಡಿಸಿರಿ ತವರು, ಅಕ್ಷರ ಜಾತ್ರೆಯ ಹಸಿರು
ಪರಿ ಕಬ್ಬಿಗರುಳಿಸಿದ ಪಸಿರು
ಜುಮ್ಮೆನಿಸುವ ರಾಜರ ಕೊಸರು
ಜೇನಲೆಗಳು ಮೂಡಿದ ಕೆಸರು
ಸುಯ್ದಾಡಿದ ದಾಸರ ಕಂಠದ ನೆಸರು
ಕನ್ನಡದೋಕುಳಿ ಮಿಯ್ಯುವ ಸೂರು
ಕನ್ನಡ ಕರಿಮಣಿ ಹೆಮ್ಮೆಯ ಸಾರು
ಅರಿಶಿಣ-ಕುಂಕುಮ ಬಾವುಟ ಎತ್ತರದಲಿ ಹಾರು
ನೀ ಎಲ್ಲಿದ್ದರು ಹೇಗಿದ್ದರು ಕನ್ನಡವನೆ ಸೇರು

Tuesday, April 19, 2011

ಕಾಣದ ಕನ್ನಿಕೆ ನಲ್ಮೆಯ ನಲ್ಲೆ..!!


ಕಾಣದ ಕನ್ನಿಕೆ ನಲ್ಮೆಯ ನಲ್ಲೆ
ನೀ ಬರುವೆ ಎಂದೆ ಕಾದಿರುವೆ
ಮಳೆಯು ಸೋನೆ ಸುರಿಸಿದೆ ಇಲ್ಲೆ
ನೀ ಏಲ್ಲಿಹೆ ಹೇಳು ನಾ ಬರುವೆ
ಮುಚ್ಚಿದ ಚಿಪ್ಪಲಿ ಮುತ್ತಿಡುವಂತೆ
ನನ್ನಿ ಬಂಧದಿ ಬೆಚ್ಚನೆ ಇಡುವೆ


ಇರಚಲು ಹೊಡೆದಿದೆ ತೆಂಕಣದಿಂದ
ಮೇಘವು ಹೊರಳಿದೆ ಬಡಗಣದಿಂದ
ಅರಳಿ ಮರದಡಿ ನಿಂತುಬಿಡು
ನನಗೆಂದು ಸ್ವಲ್ಪವೇ ಜಾಗವಿಡು
ಬೇಗನೆ ಬರುವೆ ನೋಡೊ ಆತುರವಿಹುದು
ಕೈಯಲಿ ಕೆಂಪನೆ ಗುಲಾಬಿಯಿಹುದು


ಕೆರೆಯು ತುಂಬಿದೆ ನಿನಗೇಳಲೆ ಬೇಕು
ಕೋಡಿಯ ಮಧ್ಯಕೆ ನಿನ್ನ ಕರೆತರಬೇಕು
ಬೆದರಿದ ಬೊಂಬೆ ಕಣ್ಮುಚ್ಚುವೆ ನೀನು
ಕಾಲು ನಡುಗಿಸಿ ಜಾರಿಸುವೆನು ನಾನು
ಕೋಟೆ ಮಾರುತಿಯ ನೆನೆದು ನೀನು
ಹಿಡಿದಪ್ಪುವೆ ತೋಳನು, ನನ್ನನ್ನು


ಕಾಣದ ಕನ್ನಿಕೆ ನಲ್ಮೆಯ ನಲ್ಲೆ
ನೀ ಎಲ್ಲೆ ಇರುವೆ ನಾ ಬಂದಿರುವೆ
ಪೇಟೆಬೀದಿಯಲಿ ಮದುವೆಯ ದಿಬ್ಬಣ ಒಂದಿದೆ
ನಾ ಅದನು ದಾಟಿ ಬರುತಿರುವೆ
ನನಗ್ ತಿಳಿಯದ ಮದುವೆ ಯಾವುದೋ ಕಾಣುವೆ
ನೀ ಮಧುಮಗಳಾಗಿ ಕುಂತಿರುವೆ
ನೀ ಮಧುಮಗಳಾಗಿ ಕುಂತಿರುವೆ...

ಕೂಡಕುಂತು ಎದೆಯಲಿ



ಚಲುವಿನ ಅಂಗಳದಲಿ
ನೀ ನನ್ನ ಜೊತೆಯಲಿ
ಕೂತಿರಲು ಕೊನಯಲಿ
ನಗುನಗುತಲಿ


ನಗುತಿರುವೆ ಪಕ್ಕದಿ
ಕೂಡಕುಂತು ಎದೆಯಲಿ
ಮುತ್ತಿಡುವ ಆಸೆಯ
ಬಚ್ಚಿಡುವೆ ಒಡಲಲಿ


ನಿನ್ನ ಉಸಿರು ಬಂದಿದೆ
ನನ್ನ ಸೇರಲೇಂದಿದೆ
ಬೇಡೆನ್ನಲಾರದೆ
ಏನೇನು ತಿಳಿಯದೆ ಸ್ವೀಕರಿಸಿಹೆ


ಏಲ್ಲಿ ಕಳೆದು ಹೋಗುವೆ
ನಾ ಇಲ್ಲೆ ಕುಳಿತು ಕಾಯುವೆ
ನೀ ಎಲ್ಲೆ ಹೋದರು
ಭೂಮಿ ದುಂಡಗಿರುವುದೆ


ನೀನಿರದ ಇರುಳು
ಸುಡುಬಿಸಿಲ ಮಧ್ಯನ್ಹ
ನಿನ್ನದೆ ಕನವು
ಸುಡುತಿಹುದು ಏದೆಯ


ನೇತ್ತರಲ್ಲಿ ಬರೆಯ ಹೋದೆ
ನೆನೆದು ನೆನೆದು ನಿನ್ನ ಹೆಸರ
ಕಂಬನಿಯಲ್ಲಿ ಬೆರೆಸಿ ಬರೆದೆ
ನಿನ್ನ ಚಿತ್ರವ


ಸಿಗಳು ಅವಳು ಎಂದು
ತಿಳಿದು ತಿಳಿದು ಪ್ರೀತಿಸಿಹೆನು
ಏಲ್ಲೊ ದೂರ ಬರುವುದೆಂದು
ಬೆಳ್ಳಿಬೆಳಕೆಂಬ ಭ್ರಮೆಯು


ಕಡಲೊಂದು ನಡುಗಿದೆ
ಒಲವ ಮುತ್ತು ಒಡಲೊಳಗೆ
ಅರಳದಂತೆ ಬಾಡಿತು ಕೊನೆಗು
ನಗುವ ಕೇಳಿಗೆ

ನೀ ಗುನುಗುತಿರುವೆ ಏನು?



ನೀ ಗುನುಗುತಿರುವೆ ಏನು? ನಾ ನುಡಿಯುತಿರುವೆ ನಿನ್ನ ಹೆಸರನು
ನೀ ನೋಡುತಿರುವೆ ಏನು? ನಾ ನಿನ್ನೆ ನೋಡುತಿರುವೆನು
ಹೇಗೆ ಇರಲಿ ಸುಮ್ಮನೆ; ಏದುರು ನಿನ್ನ ನೊಡದೆ
ಏನೊ ಮಾಡಬೇಕಿದೆ; ತಿಳಿಯದಾಗಿದೆ


ಕಣ್ಣು ಮುಚ್ಚಲಾರೆ ನಾನು, ನೀ ಎದುರು ಬಂದರೆ
ಕಣ್ಣ ಮುಚ್ಚಿಬಿಟ್ಟರೆ ಕ್ಷಣಕೆ ಕಾಣದಾಗುವೆ
ಹೇಗೆ ಶುರು ಮಾಡಲಿ? ಮಾತನಾಡಬೇಕಿದೆ
ನಿನ್ನ ನಗುವ ನೋಡಲೆ ಹಂಬಲಿಸಿರುವೆ


ಮೆಟ್ಟಿಲೇರಿ ಬರುವೆ ನಾನು, ಮುಸ್ಸಂಜೆಯಲ್ಲಿ ಬೆಟ್ಟಕೆ
ಕೊಡಲು ಎದೆಯ ಕಟ್ಟೆಯೋಡೆದು ಚೆಲ್ಲುವ ಪ್ರೀತಿ ನಿನಗೆ
ನಿನ್ನ ಹೆಸರ ನೀರ ಮೇಲೆ ಬರೆಯಲಾಗದೆ
ಎದೆಯ ಒಳಗೆ ಅಚ್ಚೆಹುಯ್ದು ಮುಚ್ಚಿಟ್ಟಿರುವೆ


ಬೀಸೊ ತಂಗಾಳಿ ನೀನು, ಸ್ತಭ್ದನಾಗಿ ಹೋದೆನು ನಾನು
ಒಲವನು ನಿನ್ನ ಬಳಿಗೆ ಓಯ್ದು ತರುವೆನು
ನನ್ನ ಪ್ರೇಮ ದೇವತೆ, ವರವ ನೀಡು ಬೇಗನೆ
ಏನು ಮಾಯೆ ಮಾಡಿಹೆ, ಈ ಪಾಪಿಗೆ

Sunday, February 27, 2011

ಮೇಘದ ಮೇಲೇರಿ ಬರುತಾಳೆ ನನ್ನೋಳು..



ಮೇಘದ ಮೇಲೇರಿ ಬರುತಾಳೆ ನನ್ನೋಳು
ಮಾಗಿಯ ಕಾಲದ ಸವಿಜೇನು
ಶ್ರಾವಣದ ಕೋಗಿಲೆಯ ಕಂಠದ ಸಿರಿಯಿವಳು
ನನ್ನಿ ಹೃದಯವೆ ನಿಂಗೆ ಉಡುಗೊರೆಯು


ಸ್ವಾಗತಕೆ ನೂರು ಜನಪದರ ಹಾಡು
ನೀ ನನ್ನ ಮನದ ಲಾಲಿ ಹಾಡು
ನೀಲಿ ಬಾನಲ್ಲಿ, ಹೊಂಗಿರಣದ ರಥದಲ್ಲಿ
ನನ್ನನ್ನೆ ನೋಡುತ್ತ ನಗುತಿಹಳು


ಚೈತ್ರಾದ ಚಿಲುಮೆಯೆ ಸ್ಪೂರ್ತಿಯ ಸೆಲೆಯೆ
ಬಾ ಬೆಳ್ಳಿ ಬಾನ ಸಾಗರಿಯೆ
ರವಿಯ ರಥದಿ ಚಂದ್ರನ ಸಾರಥಿ
ಬಾ ಬೇಗ ನಿನಗಾಗಿ ನಾ ಕಾಯುತ್ತಿಹೆನೆ


ಹಸಿರ ಕಣಿವೆ ನೀಲಿ ಸಾಗರದ ಮೇಲೆ
ಬೆಳದಿಂಗಳ ತಂಪಾಗಿ ಬಾ ಮಡಿಲಿಗೆ
ನನ್ನ ಉಸಿರಿಗೆ ಉಸಿರಾಗಿ, ಜೀವಕ್ಕೆ ಜೊತೆಯಾಗಿ
ಸೇರುಬಾ ನನ್ನ ಹಂಸಕುಲೆ..


                    ಸುರೇಂದ್ರ ನಾಡಿಗ್ ಹೆಚ್. ಎಮ್

ಮದುವೆ



ಮದುವೆಯ ಬಂಧನ
ಹೃದಯಗಳ ಸಂಗಮ
ಜೀವನದ ಗೀತೆಗೆ
ಪ್ರೀತಿಯ ಸರಿಗಮ


ದೂರದ ದಿನಗಳ ಹಿಂದಿಕ್ಕಿ
ಜೊತೆಗೆ ಸಾಗಿವೆ ಜೋಡಿ ಹಕ್ಕಿ
ಸಂಸ್ಕೃತಿ ಸಂಬಂಧ ಬೆಳೆಸುವ ಬಂಧ
ಸಂಸಾರ ಗೀತೆಯ ಸಂಗೀತ ನಾದ


ಓಡೋ ಜೀವಗಳ ಜೋಡಿ ಮಾಡಿ
ಕೋಡುವ ಲೋಕಕೆ ಕೋಡುಗೆಯ..
ಪ್ರೀತಿಯ..

ಮನ ಕತ್ತಲೆಗೆ ಲಗ್ಗೆ




ಮರುಗಿದ ಮನ ಕತ್ತಲೆಗೆ ಲಗ್ಗೆ
ಬೆಳಕ ಕಂಡರೆ ಅದೇ ಸಿಹಿನೀರ ಬುಗ್ಗೆ
ದೀಪ ಬೆಳಗಿದರೆ ಸುತ್ತಲು ಬೆಳಕು
ಆತ್ಮ ಬೆಳಗಿದರೆ ಲೋಕಕೇ ಹುರುಪು

ಗತಕಾಲಗಳ ವೈಭವವ ನನೆದು ನೆನೆದು
ಮುಂದಿರುವ ಕತ್ತೆಲೆಯ ದಾರಿಗೆ
ದೀಪ ಹಚ್ಚುವುದೆ ಮರೆತೆವು

ಧರ್ಮಗ್ರಂಥಗಳ ಲೋಕ ತರ್ಕಗಳ
ಪಠಿಸುವುದ ಈ ಜೀವನ
ವೇದ ಘೋಷದ ನಡುವೆ
ಉಪನಿಷತ್ತುಗಳ ಗೊಡವೆ ಬೇಡ ಬೇಡ

ನಮ್ಮತನವೆಂಬ ಓಡವೆಯ ಮುಚ್ಚಿಡದೆ
ಧರಿಸಿದರೆ ನೀನೆ ಜನನಾಯಕ


Friday, February 25, 2011

ತಿಳಿದಿರುವುದೊಂದೆ.. ಅದು ನೀನೆ..!!



ಇನ್ನು ನೋಡಬೇಕು ನಿನ್ನ
ನೋಡುತಲೆ ಇರುವೆನು ಚಿನ್ನ
ಈ ದೇಹ ಕರಗಿಹೋದರು..
ಕಣ್ಣೊಂದು ಇರಲಿ ನಿನ್ನ ನೋಡಲೇಂದು

ನೀ ನಗುವೆ ಸುಮ್ಮನೆ ಕುಳಿತು
ನಾ ನಿನ್ನ ನೋಡದ ಹೊರತು
ಇರಲಾರೆ ಇನ್ನು ಸಾಕು ಸಾಕು

ಒಲವ ಸೋನೆ ಸುರಿದಿದೆ ಇಂದು
ಪ್ರೀತಿಸುವೆನು ನಿನ್ನನೆ ಎಂದು
ದೂರ ಎಲ್ಲೂ ಓಡದಿರು
ನಿನ್ನ ಪ್ರೇಮ ಬಿಕ್ಷುಕ ನಾನು

ಸಾವಿರಾರು ಮೈಲಿ ದೂರ
ಈಜಿ, ಓಡಿ ಬಂದು ನೇರ
ನಿನ್ನ ಅಪ್ಪಿ ಹೇಳುವೆ ಮಾತೊಂದ..
ಸಾವಿರಾರು ಜನಗಳ ನಡುವೆ
ನೀನು ಮಾತ್ರ ಕಾಣುವೆ ಏಕೆ?
ಏನು ಎಂದು ತಿಳಿಯದು ನಾಳೆ
ತಿಳಿದಿರುವುದೊಂದೆ.. ಅದು ನೀನೆ..!!

                         ಸುರೇಂದ್ರ ನಾಡಿಗ್ ಹೆಚ್ ಎಂ

Thursday, February 24, 2011

ಕದ್ದು ನಿನ್ನ ಕಡೆ ನೋಡುವಾಗಲೇ..

ನೆಡೆ ನೆಡೆ ನೆಡೆದು, ತುಡಿ ತುಡಿ ತುಡಿದು
ತಡವರಿಸಿತು ಹೃದಯ, ನಿನ್ನ ನೋಡಿದಾಗ
ನುಸು ನುಸು ಕನಸು, ಕ್ಷಣ ಕ್ಷಣಕು
ತೇವಗೊಂದಿದೆ ತನುವು, ಈಗ ಜೊತೆಯಾಗು
ಕಾಡಿದೆ ಮತ್ತೆ ಕಾಡಿದೆ, ಪ್ರೀತಿಯು ಶುರುವಾಗಿದೆ
ಕದ್ದು ನಿನ್ನ ಕಡೆ ನೋಡುವಾಗಲೇ, ಏನೊ ಒಂಥರ ಆಗಿದೆ

ಕೆಂದಾವರೆ ತೋಟದ ಒಡೆಯ ನಾನು ಇಲ್ಲಿಹೆ
ಮುದ್ದು ಗುಮ್ಮನಂತೆ ಬಂದು ನೀ ಹೃದಯ ಕದ್ದು ಒಯ್ದಿಹೆ
ಮುಂಜಾವೆದ್ದು ನಿನ್ನ ನನೆದು ನಿದಿರೆಗೆ ಮತ್ತೆ ಜಾರಿದೆ
ಕಣ್ಣಮುಚ್ಚಿ ತೆರೆಯುವ ತನಕ ನಿನ್ನ ಕನಸೆ ತುಂಬಿದೆ
ಮುಗಿಯದ ಮಾಯೆಯಿದು, ಪ್ರೇಮದ ಆಟವಿದು
ನೀ ಯಾರೆಂದು ಕೇಳಿದರೆ ಹೆಸರು ಹೇಳಲಾಗದು

ರಚ್ಚೆ ಹಿಡಿದೆ ನಿನಗಾಗಿ, ಕಚ್ಚಿದೆ ಒಲವು ಹಿತವಾಗಿ
ಮೆಚ್ಚಿರುವ ಮನಸೆ ನಿನ್ನ ನೆಚ್ಚಿರುವೆ ಕನಸೆ
ಕೂಗಿ ಹೇಳಬೇಕೆ ನಾನು? ಈ ಮೌನ ತಿಳಿಸದೇನು?
ನಿನ್ನ ನೆನೆದ ಕತ್ತಲು ಕೂಡ ಹಾಗೆಯೆ ಬೆಳಕಾಯ್ತು
ಗಡಿಯಾರ ನೆಡೆಯದೆ ನಿಂತು, ನೀ ಏಲ್ಲಿ ಏನು ಏಂತು?
ಹೇಳಿದೆ ನನ್ನಲಿ ಬಂದು, ನನ್ನ ಉಸಿರು ನೀನು ಏಂದು

ತಂಗಾಳಿ ನನ್ನ ಮನಸಿಂದು, ಬಿರುಗಾಳಿ ತಂದೆ ನೀನು
ಶಾಂತ ಕಡಲಂತೆ ನಾನು, ಸುನಾಮಿತಂತು ಒಲವು
ಸುಳಿಗೆ ಸಿಕ್ಕ ನಾವಿಕ ನಾನು, ಬದುಕೊ ಆಸೆ ನೀನು
ಪ್ರೇಮವೇ ಜೀವನದ ಮೊದಲ ಪಾಠವೊ..?

ಸುರೇಂದ್ರ ನಾಡಿಗ್ ಹೆಚ್ ಏಂ

Wednesday, February 23, 2011

ಪದಗಳ ಮರೆತ ಕವಿಯಾದೆನು ನಾ..!!

ನಿನ್ನ ಬರುವಿಕೆಗೆ ಕಾದಿರುವೆ, ಕ್ಷಣವು ಪರಿತಪಿಸಿರುವೆ
ಕಡಲ ಅಲೆಯ ಏಣಿಸುತ ತೀರದಿ ಬಿಡರ ಹೂಡಿರುವೆ
ಹೃದಯ ಹುಚ್ಚು ಕುದುರೆಯಂತೆ, ಸಾಗಿದೆ ಸಾಗರದಾಚೆ
ಕಚ್ಚಿದೆ ಒಲವು ಹೃದಯಕ್ಕೆ, ಮಂಪರು ಬಡಿದಿದೆ ಮನಸಿಗೆ

ಚಂದಿರನಿಗೆ ಊಟವ ಉಣಬಡಿಸಿ, ಕಟ್ಟಿರುವೆ ಕಡಲ ತಡಿಯಲ್ಲಿ
ಬಂದು ಕೂರು ಜೊತೆಯಲ್ಲಿ, ಖುಷಿಪಡುವೆನು ನಾನು ನಿನ್ನ ನೋಡಿ
ಹೇಗೆಂದು ಹೇಳಲೆ ಈ ಕ್ಷಣದಲ್ಲಿ
ಒಲವೆ ತುಂಬಿದೆ ಕಣಕಣದಲ್ಲಿ

ಕೋಟಿ ಜನರ ಊರಲಿ, ಏಲ್ಲೆಲ್ಲೂ ನೀನೆ
ಕಾಣದಾದೆ ಏನನು, ನೀ ನನ್ನ ಕಂಡ ಕ್ಷಣದಲೆ
ಮಾಟಗಾತಿ ನೀನು, ಜಗವನ್ನೆ ಮರೆಸಿರುವೆ ನನಗೆ
ನೀ ನೆಡೆದು ಬಂದ ನಿಮಿಷ ನಾ ಮರುಳನಾಗಿಹೇ
ಒಲವ ಬೇಲಿ ಹಾಕಿ ನಿನ್ನ ಹೃದಯ ಕೂಡಿಹಾಕಿದೆ
ಹೋರಗೆ ಬಿಡಲಾರೆ ಏಂದು ಈ ಜೀವ ನಶಿಸುವರೆಗೆ

ನೀರವ ಮೌನ ಜಗದಲ್ಲಿ, ಕೇಳಿದೆ ಎಲ್ಲ ನಿನ್ನ ದನಿಯಾಗಿ
ಸುಮ್ಮನೆ ಏನು ಹಾಡಲಿ ನಾ
ಪದಗಳ ಮರೆತ ಕವಿಯಾದೆನು ನಾ
ಕೇಳದ ಒಂದು ಮಾತಿನಲಿ ಎಲ್ಲ ಹೇಳುವೆ ಕೇಳುವೆಯ..?

ತಂಗಾಳಿ ಬೀಸಿದೆ ಹಿತವಾಗಿ, ಬಿಸಿಯೇರುತ ಎದೆಯ ಒಲವಾಗಿ
ಕಣ್ಣ ಮುಂದೆ ಮಂಜಾಗಿ, ಕರಗಿ ಹೂದೆ ನೀರಗಿ
ಹಿಂದೆ ಹಿಂದೆ ಬಂದರೆ ನಾ, ಮರೀಚಿಕೆ ನೀ ಮರೆಯಾದೆ
ಹೇಗೆಂದು ಹೇಳಲಿ ಒಲವನ್ನು ನಾನು
ಎದೆಯೊಳಗಡೆ ಹೊರಗಡೆ ಎಲ್ಲೇಲು ನೀನು

ಸುರೇಂದ್ರ ನಾಡಿಗ್ ಹೆಚ್.ಎಂ

ಚುಂಬಕ ಚಲುವೆ ಚುಂಬಿಸಲೆ..?

ಚುಂಬಕ ಚಲುವೆ ಚುಂಬಿಸಲೆ..?
ಕರೆಯೊಂದ ನೀಡು.. ನಾ ಬರುವೆ
ಹಗಲೊ ಇರುಳೊ ಆದರೇನು
ನಿನ್ನ ಏದುರು ಬಂದು ನಿಲ್ಲುವೇ
ಏನು ಮಾತನಾಡದೆ ತಬ್ಬಿಹಿಡಿಯುವೆ

ಹೆಚ್ಚು ಕಡಿಮೆ ದಿನ ಪೂರ ಒಂಟಿಯಾಗೆ ಕಳೆದೆನು
ನಿನ್ನ ನೆನಪಿನಲ್ಲಿ ನನ್ನೆ ನಾನು ಮರೆತೆನು
ತಿಳಿದು ತಿಳಿದು ತಿಳಿಯದ ಬುದ್ದಿಮಾಂದ್ಯ ನಾನು
ಏನೆಂದು ಹೇಳಲಿ? ನಿನ್ನದೆ ಹುಚ್ಚು
ನಿನ್ನ ಕೆನ್ನೆ ಗುಳಿಯ ಒಳಗೆ ಏಳೆದು
ನನ್ನ ಕೊಲ್ಲದಿರು

ಬದುಕೆಲ್ಲ ನಿನ್ನ ಮುದ್ದಾಡಲೆಂಬ ಬಯಕೆ
ಬಂದಿರುವುದೇಕೊ ಮನಕೆ, ತಡೆಯಲಾರೆನೆ..
ಅಚ್ಚೆ ಹಾಕಿ ಹೃದಯದ ಮೇಲೆ
ನಿನ್ನ ಹೆಸರೆ ಬರೆದೆ ಕಾರಣವೇನೆ?
ಸ್ವಚ್ಚ ಪ್ರೇಮಿ ನಾನಿರುವೆನು ನಿನಗೆ
ಏಂದೂ ಇರುವೆ ಹೀಗೆ...

ಸುರೇಂದ್ರ ನಾಡಿಗ್ ಹೆಚ್.ಏಂ

Sunday, September 26, 2010

ಸಿಹಿಯಾಗಿದೆ ನಿನ್ನ ನೆನಪಲಿ

ಸಿಹಿಯಾಗಿದೆ ನಿನ್ನ ನೆನಪಲಿ ನರಳಲು
ಕನಸಲ್ಲು ನಿನ್ನ ಹೆಸರನೆ ಹೇಳಲು
ಬೇಕೆನಿಸಿದೆ ನೀನು, ಪ್ರತಿಕ್ಷಣವು
ನಿನ್ನೆ ಬಯಸಿದೆ ನನ್ನ ಅಣು ಅಣುವು
ಹೃದಯ ಏನು ಹುಡುಕಿಹೇ ಹೇಳಿಬಿಡು
ಪ್ರೀತಿಸುವೆಯೆಂದು ಸಾರಿಬಿಡು

ಮೆಚ್ಚಿ ಬರುತಿಹೆನು, ಮುಚ್ಚಿಟ್ಟ ಒಲವ ಒದರಲು
ಸುಗ್ಗಿ ಮಾಡಿಹುದು, ಹೃದಯ ಹಬ್ಬದೂಟಕೆ ಕಾದಿಹುದು
ನಿನ್ನ ಬಳಿಗೆ ಬಂತೆ ನನ್ನ ಹೃದಯ..?
ತಂಟೆ ತರಲೆ ಮಾದಿದೆಯ..?

ನಾ ಪರದೇಸಿ ಪ್ರೀತಿಗೆ

ನಾ ದೂರ ಓಡುವೆ ಗೆಳತಿ, ನಾ ದೂರ ಓಡುವೆ
ಏಕೆ ಕಾಡುವೆ..? ನನ್ನ ಹೀಗೇಕೆ ಕಾಡುವೆ
ನಾ ಬಂದು ಪ್ರೀತಿಸಿದೆ, ಕನಸಲ್ಲು ಆರಾದಿಸಿದೆ
ಇಲ್ಲದ ದೇವರ ನಾ ಬೇಡಿ ಬೇಡಿ ಬಂದೆ
ನಿಲ್ಲದ ನೋವಿಗೆ ಕಣ್ಣು ಮುಚ್ಚಿ ಹಾಡಿದೆ
ಏಂದೂ ಇರದ ಕಂಬನಿ, ಕಣ್ಣಲ್ಲೆ ಮನೆ ಮಾಡಿದೆ

ನೂರಾಸೆ ಎದೆಯನು ತುಂಬಿದೆ, ತುಳುಕಿದೆ
ನಿನ್ನ ಬಯಸಿಯೆ ಹೃದಯ ಕರಪತ್ರ ಹಂಚಿದೆ
ನಿನ್ನ ನೆನೆದರೆ, ಕಣ್ಣೆ ಕಾಣದೆ
ಬರಬೇಡ ನನ್ನ ಗೋಜಿಗೆ
ಹುಚ್ಚ ನಾನು ಭೂಮಿಗೆ, ಪರದೇಸಿ ಪ್ರೀತಿಗೆ

ನನ್ನ ಮೇಲೆ ಮುನಿಸಿದೆ ಒಲವಿಗೆ
ಬೇಡದ ಮಾಯೆಗೆ ಸಿಲುಕಿ ನಾನೆ ನರಳಿಹೆ
ಕೈಯ್ಯಾರೆ ಹೊತ್ತಿಸಿ ಹೃದಯಕೆ ಕೊಳ್ಳಿ ಇಟ್ಟಿಹೆ
ಏನು ಮಾಡಲಾರೆ ನಾನು, ಏನು ಮಾಡದೆ
ಹೆಗ್ಗನಂತೆ ನನ್ನ ನೆರಳ ಕತ್ತಲಲಿ ನಿನ್ನ ಹುಡುಕಿಹೆ

ಎಲ್ಲ ಬಯ್ಯೊ ಪದವಾದೆ...

ನನ್ನವಳು, ನನ್ನವಳು, ಒಮ್ಮೆಗೆ ಕನಸಾದಳು
ಬರೆದ ಎಲ್ಲ ಪ್ರೇಮಪತ್ರ ಖಾಲಿ ಖಾಲಿ ಪುಟಗಳು
ಕೈ ಹಿಡಿದು ನೆಡೆದ ದಾರಿ ತುಂಬಿದೆ ಕಣ್ಣಹನಿಗಳು
ನಿನ್ನ ನಗುವ ನೆನೆದು ನಾನಳುವೆ
ನೀನಿರದ ಕ್ಷಣಗಳು ಬಿಡದೆ ಕಾಡುತಿದೆ

ನಾ ನೊಡದೆ ನಿನ್ನನು ನನ್ನೆ ಮರೆತು ಹೋಗಿಹೆ
ಬೇಡವೆಂದ ಕನಸು ಹಸಿರಾಗಿ ಉಳಿದಿದೆ
ಬೀಸುವ ಗಾಳಿಗೆ ದೀಪವಾದೆ ನಾನು
ಸುರಿಯುವ ಮಳೆಯಲಿ ಕೋಚ್ಚಿಹೋಯ್ತು ಒಲವು
ನೀನಿರದ ಬದುಕಲಿ ನಾ ಹೇಗೆ ಬದುಕಲಿ
ಏನು ಮಾಡೊ ಹೋಂಟಿಹೇನು ತಿಳಿಯದಾದೆನು

ಮನಕೆ ಮೌನ ಆವರಿಸಿ ಶಬ್ದ ಮಾಯವಾಗಿ
ಏನೇ ಬರೆದರು ನಿನ್ನ ಹೆಸರೆ ಕಂಡು ಕೊರಗಿ
ಬಿಟ್ಟು ಬಿಡದೆ ಕಂಬನಿ ಸುರಿಸಿ
ಬೆಚ್ಚಿ ಬೀಳುವೆ ನಿದೆರೆಯಲಿ
ಕೊರಗಿ, ಕರಗಿ ಮನಸಲೆ ಮರುಗಿ
ಎಲ್ಲ ಬಯ್ಯೊ ಪದವಾದೆ

Wednesday, September 22, 2010

ಏನೊ ಮಾಡಿಹೇ....

ಏನೊ ಮಾಡಿಹೇ, ನನಗೇನೊ ಮಾಡಿಹೇ
ನನಗೆ ನನ್ನನೆ ನೀ ಪರಿಚಯ ಮಾಡಿಹೆ
ನಿನ್ನಾ ಪಿಸುಮಾತಿಗೆ ಎದೆಯಲಿ ಮಿಂಚು ಮೂಡಿದೆ
ಕನ್ನಡಿಯಲ್ಲಿಯು ನನ್ನ ಕಣ್ಣು ನಿನ್ನೆ ಕಂಡಿದೆ
ಹೆಣ್ಣೆ.. ಇದು ಕನಸೊ ನಿಜವೊ ನಿನ್ನೆ ಕೇಳಿಹೆನೆ...

ಒಲವೇ.. ಈ ಕ್ಫ಼಼ಣದಿ ಹೃದಯ ಸಿಹಿಯಾಗುತಿದೆ
ಅರರೆ.. ನೀನಿರಲು ಒಡನೆ ತಲೆ ತಿರುಗುತಿದೆ
ನಿನ್ನ.. ಜೊತೆಗೆ ಜಗ ಹೊಸದಾಗಿ ಕಾಣುತಿದೆ

ಏಕೊ ನನ್ನ ಗಡಿಯಾರ ನನ್ನ ಮಾತು ಕೇಳದೇನೆ
ನಿನ್ನ ಕಂಡ ಕ್ಫ಼಼ಣದಲ್ಲೆ ನಿಂತು ನೆಡೆಯದಾಯ್ತೆ
ಇಲ್ಲಿವರೆಗು ಯಾರೆಡೆಗೂ ನನ್ನ ಹೃದಯ ವಾಲದೇನೆ
ಏನು ಮಾಯೆ ಮಾಡಿಹೆಯೊ ನನ್ನಲಿ ನಾನಿಲ್ಲದಾದೆ
ಇದೆನಿದು ಏನಿದು.. ನನ್ನ ನೆರಳೆ ಕಾಣದೇನೆ
ನಿನ್ನ ಹಿಂದೆ ಬಂದಿದೆ.. ತಿರುಗಿ ಬಳಿಗೆ ಬಾರದೆ
ನನ್ನೆ ನಾ ಕೇಳಿದೆ.. ನಿನಗಾಗೆ ನಾನಿರುವೆ
(ಒಲವೇ..)

ಪ್ರೀತಿಸುವ ಹೃದಯಕ್ಕೆ ಪದಗಳೆ ಬೇಡವಾಯ್ತೆ
ಮನದ ಆಸೆ ಹೇಳಲು ಮೌನಕ್ಕಿಂತ ಭಾಶೆ ಬೇಕೆ
ಇಲ್ಲಿವರೆಗು ಇದ್ದಂತೆ ನಾನಿರಲಾರದೆ
ಹೋಸದೇನೊ ಭಾವನೆ ಬೇರೇನು ಹೇಳಲಾರೆ

ನಿನ್ನೆವರೆಗು ಆಗಸದಲ್ಲಿ ಹೋಸದೇನು ಇಲ್ಲದೆ
ಇಂದು ಮನೆಯ ಬಾಗಿಲಿನಲ್ಲೇ ಕಂಡೆ ನಾ ಕಾಮನಬಿಲ್ಲೆ
ಒಂದೆ ಒಂದು ದಿನದಿ ನಾ ಜೀವಿತ ಜೀವಿಸಿದೆ
(ಒಲವೇ..)

ಏನೊ ಮಾಡಿಹೇ, ನನಗೇನೊ ಮಾಡಿಹೇ
ನನಗೆ ನನ್ನನೆ ನೀ ಪರಿಚಯ ಮಾಡಿಹೆ

ಪ್ರೀತಿಸುವೆಯ.

ಸಂಗೀತ: ಏ.ರ್.ರ್‍ಎಹಮಾನ್
ಚಿತ್ರ್‍ಅ: ವಿನ್ಯ್ ತಾಂಡಿ ವರುವಾಯ
ಹಾಡು: ಮನ್ನಿಪಾಯ

ನಿನ್ನ ಉಸಿರಿಗೆ ಉಸಿರಾಗಿರುವೆನು ನಾ
ನಿನಗೆಂದೆ ಒಲವನು ತಂದೆನು ನಾ
ಹಸಿವಿರದೆ ಕೊರಗುತಿಹೆ
ನಾ ಏನು ಮಾಡಲಿ ನೀನಿರದೆ

!!ಹೇಗೆ ಇರಲಿ, ಜೊತೆಗೆ ನೀನಿರದೆ
ನಿನ್ನ ಕನಸು ಕಲ್ಲಾಗಿ ಬಡಿದಿದೆ ಹೃದಯಕ್ಕೆ
ಪ್ರೀತಿಸುವೆಯ.. ನನ್ನ ಪ್ರೀತಿಸುವೆಯ !! !!ಪ್ರ!!

ಸೋನೆ ಮಳೆಯಲ್ಲಿ ನೆನೆದೆ, ಸುಳಿಯಲ್ಲಿ ಈಜಿ ಬಂದೆ
ನಿನಗೆಂದೆ ಏಲ್ಲ ದಾರಿ ತಿರುಗಿರುವೆ
ಏನು ಹೇಳಲಿ ನಾ ನಿನಗೆ ಈಗ
ನೀ ಎದುರಿದ್ದರೆ, ಮಾತು ಮರೆತಿರುವೆ ನಾನೆ
ಬೆಳಕು ಕುರುಡನಾಗಿ..
ನಿನ್ನಲ್ಲೆ ಬೆಳಕು ಕಂಡು ಬಂದಿರುವೆ

ಕೇಳು ಕನಸೇ,, ನಾ ನಿನಗೆ
ಒಡಲ ಒಳಗೆ ಸುಡುತಿರುವೆ
ಮಳೆಯಾಗಿ ಬರಲ ನಿನ್ನ ಬಳಿಗೆ
ಪ್ರೀತಿಸುವೆಯ ಒಲವೆ..?

ಸಿಡಿಲೆ ಏದೆಗೆ ಒರಗಿದೆ ಈಗ
ನೀ ಬಂದು ಬದುಕಿಸು ಬೇಗ
!!ಒಲವೆ ನಿನಗೆ ನನ್ನ ಬದುಕಿದೆ
ನನ್ನ ಒಲವಿದು ನಿನಗಿದೆ!!

ಪ್ರೀತಿಸುವ ಅವನಿನ್ನನು
ಏದೆಯಲಿ ಪೂಜಿಸುವ
ಪ್ರೀತಿಸುವ ಅವನಿನ್ನನು
ನಿನ್ನ ಹೆಜ್ಜೆಯ ಗುರುತಿಗು ನೆರಳಗಿರುವ
ಏನು ಹೇಳಲಾರದೆ ಎದೆಯಲ್ಲಿ
ಮುಚ್ಚಿಟ್ಟು ನಿನ್ನ ಆರಾದಿಸುವ
!!ಈ ಹಾಳು ಜಗದಲಿ ಒಲವೇ ನಿಜ
ಬಾಳಿ ಬದುಕಲು ನಾವು!!

ಹೇಗೆ ಇರುವೆ ನೀನು....ನಾ ಜೊತೆಗಿರದೆ
ನನ್ನ ಕನಸಿಗೆ ಬಂದು ಕಾಡುವೆ ನೀ
ಹಗಲು ರಾತ್ರಿ

ಹಗಲಲಿ ಕಣ್ಮುಚ್ಚಿ ಕುಳಿತಿಹೆ ನಾನು
ಹೃದಯದ ಕದವನು ತೆರೆದು ನಾನು
(ಹೇಗೆ ಇರಲಿ)

Tuesday, September 21, 2010

ಬದುಕೊಕ್ಕೆ ಬರದ ಬಡಜನರು

ತುಳಿಯೋರ ಮುಂದೆ ಬಾಗೊರು

ಹಸಿದೊರ ಮುಂದೆ ಬೇಡೋರು
ಮರ್ಯದೆಗಂಜಿ ಬದುಕೋರು
ಬದುಕೊಕ್ಕೆ ಬರದ ನಾವ್ ಬಡಜನರು

ಎರೆಡೊತ್ತು ಉಂಡು ಮಲಗೋರು
ಅಲೆಮಾರಿಯಂತೆ ತಿರುಗೋರು
ಹಸಿವನ್ನೆ ಹೆತ್ತು ಹೊತ್ತೋರು
ಬದುಕೊಕ್ಕೆ ಬರದ ನಾವ್ ಬಡಜನರು

ಕನಸಲ್ಲೇ ಜೀವನ ಕಾಣೋರು
ಎಚ್ಚೆತ್ತು ನಿಲ್ಲದೆ ಮಲಗೋರು
ಕಿಚ್ಚೆದ್ದು ಸಿಡಿಯದೆ ಮುಲುಗೋರು
ಬದುಕೊಕ್ಕೆ ಬರದ ನಾವ್ ಬಡಜನರು

ಕಂಡೂ ಕಾಣಾದ ಕುರುಡರು
ಹೆದರಿ ಹೆದರಿ ಸಾಯೋರು
ಗೆಲ್ಲೊ ಆಸೆಯ ಮರೆತೋರು
ಬದುಕೊಕ್ಕು ಬರದ ನಾವ್ ಬಡಜನರು

ಏನು ಮಾಡಲಿ ನಾನು, ಮಾಡಲಾಗದೆ ಏನು

ಏನೋ ಮಾಡಲು ಹೋಗಿ ಏನೊ ಮಾಡುವೆವು

ಇರುವುದೊಂದೆ ಬಾಳು, ನಾವೇ ತುಂಬುವೆವು ಗೋಳು

ಮುಚ್ಚಿಡುತ ಸಂತಸವ ನಾಳೆಗೆಂದು

ಬದುಕು ಮುಗಿಯದ ನಾಳೆ, ಓದಲಾಗದ ಹಾಳೆ

ಮುಟ್ಟಿದ ಗುರಿಯ ಮುಂದೆ ಗುರಿಯು ಮತ್ತೆ

ಈ ದೇಹವೊಂದೆ ನಮದು, ಇದನು ಬಿಡದು ಸಾವು

ಕೋಟಿಜೀವಗಳ ನಡುವೆ ನಾವು ಒಂದು

ಓಡುತ ಹಣಕಾಗಿ, ಮಾನವತೆಯ ಮರೆತಿಹೆವು

ಬದುಕು ಬೆಳ್ಳಿಪರದೆ ಪಾತ್ರ್‍ಅ ನಾವು

ಎಚ್ಚೆತ್ತು ಮಾನವತೆ, ದಿನವು ನಗುತಿರಲು

ಏಲ್ಲರೊಡೆ ಕೂಡಿ ಒಂದು ಬಾಳು


vÀAUÁ½ ©Ã¹ ©Ã¹zÉ EAzÀÄ

¤Ã ªÀÄÄAzÉ EgÀ®Ä.

PÁªÉÆðqÀ PÀgÀV ªÀļÉ0iÀiÁVzÉ EAzÀÄ

£Á ¤£Àß »AzÉ EgÀ®Ä.

PÁrzÉ M®ªÀÅ.... ¤Ã E®èzÉ £Á¤gÀ®Ä

£ÀÄr¢zÉ ªÀÄ£ÀªÀÅ.... ¤Ã ¨ÉÃPÉAzÀÄ

KPÉÆ »AwgÀÄVzÉ ¤Ã£ÀÄ

ªÀÄgÉ0iÀÄ° £ÀĸÀÄ£ÀPÀÄÌ

£Á£ÉÆ vÀ¯ÉªÀiÁ¹zÀ wgÀÄPÀ

»AzÉ £ÀqÉzÀÄ §AzÉ£ÀÄ

£À£ÀߣÀUÉ ¤Ã£ÉAzÀÄ.... ºÀUÀ®Ä PÀ£À¸À£ÀÄß

PÁtÄvÀ PÀÄAwºÉ£ÀÄ.... £Á£ÀÄ

¸ÀÄgÉÃAzÀæ £ÁrUï