Saturday, March 20, 2021

ನಾ ಬುದ್ಧನಾಗಿರುವೆ!

ಬರೆಯದಾದೆ ನಾನು ಬದುಕು ಏನೆಂದು
ತಿಳಿದಿರುವತನಕ ಸಾವು ಮುಂದೆಂದು
ಯಕ್ಷಪ್ರಶ್ನೆ ನಾನು ನನಗೆಂದು
ಉತ್ತರವೇ ಇಲ್ಲದ ಜಗನಂದು 

ಈ ಕ್ಷಣಕೆ ಏಕೋ ಕೋಪ ಪ್ರತಾಪ
ಮರುಕ್ಷಣಕೆ ಬದಲಾದ ರೂಪ
ಜೀವನವು ಸುಖವ ಹುಡುಕುವ ನಿಕ್ಷೇಪ
ಆದಿಯಲೇ ನೆಡೆಯುವ ಸಮಾರೋಪ

ಬಗೆದಷ್ಟೂ ಆಳಕೆ ಇಳಿಯುವ ಒಲವೇ
ನೀ ಧೃತಿಚಿತ್ತವೇ? ನನ್ನ ಆತ್ಮಬಲವೇ?
ದೂರ ಸರಿದರು ಕಾಡಲೇಕೆ ಬರುವೆ
ನಿನ್ನ ಮೀರಿ ನಾ ಬುದ್ಧನಾಗಿರುವೆ!

-ಸುರೇಂದ್ರ

No comments:

Post a Comment