ಏನು ಇಲ್ಲದ ಊರಿನಲ್ಲಿ
ಯಾರು ಇಲ್ಲದ ಮನೆಯ ಒಳಗೆ
ಅರ್ಧ ತೂಗುವ ಕುರ್ಚಿ ಮೇಲೆ
ಏಕಾಂತ ಸವಿಯುತ ಕೂತೆನು |
ಎಲ್ಲ ಜನರು ಎಲ್ಲಿ ಹೋದರು
ಬೇಕೆಂದಾಗ ಯಾರೂ ಬರರು
ನನ್ನ ಒಳಗಡೆ ಎಲ್ಲರು
ಎಲ್ಲರೊಳಗಡೆ ನಾನು ಯಾರು? |
ಗುಪ್ತ ಗಾಮಿನಿ ಮನಸು ಸುಡುಗಾಡು
ಮನದ ಕಡಲ ಒಳಗೆ ಮರಳುಗಾಡು
ವಿಷಕಾರುವ ಸಂಸಾರ ಕಾಡು
ಬಿಳಿ ಸರ್ಪಗಳ ಹಾಳು ಬೀಡು |
ಜೊತೆಗಿರುವನೆಂದ ಅವನೆಲ್ಲಿ
ನಾ ರಕ್ತಬಸೆದು ಉಳಿಸಿದ ಇವಳೆಲ್ಲಿ
ಅಲ್ಲಿ ಇಲ್ಲಿ ಮೀರಿ ಎಲ್ಲೆಗಳಲ್ಲಿ
ಯಾರು ಇಲ್ಲದ ಜಗದಲಿ
ನಾ ಪೈಪೋಟಿ ಮಾಡಿದೆ ನನ್ನಲಿ |
-ಸುರೇಂದ್ರ ನಾಡಿಗ್
No comments:
Post a Comment