Monday, November 16, 2020

ನಾ ಎಂತ?!


ನಾನೊಬ್ಬ ಪರಕೀಯ, ಪರರಿಲ್ಲದ ಜಗದೊಡಯ
ಕನಸಿನ ನಡೆಯ, ನಿಜವೆಂಬ ಮಡೆಯ
ನಾ ಭಿಕ್ಕುಬೀಗುವ ಸಮಯ
ಎಲ್ಲೋ ಕೊನೆಯ ಬೀಡೆಯ ಭಯ!


ಸಾವೇಕೆ ಸುತ್ತಿದೆ ಸುತ್ತ, ಬರದೆ ನನ್ನತ್ತ
ಏಕಿಂತ ಅಂತ, ಜಗವೆ ದುರಂತ
ಸಮಯವ ದೂರುತ್ತ, ಹತ್ತಿರ ಬರುತ್ತ
ಕೊರಗಿದೆ ನಾ ಬರಿ ಸಾವಂತ? ನಾ ಎಂತ?!


ನನ್ನೊಳಗೆ ನಾನೊಬ್ಬ, ಅವನೊಳಗೆ ಇನ್ನೊಬ್ಬ
ಬಿದ್ದು ಏಳುವನೊಬ್ಬ, ಸಾವಿನೆಡೆ ಮತ್ತೊಬ್ಬ
ಮೋಹ ಧಿಕ್ಕರಿಸಿ ನೆಡೆ ಗುರಿಯಿಲ್ಲದೆಡೆ ಎನುವನೊಬ್ಬ
ತಾಳಿ ಬಾಳು ಎನುವ ಈ ಮನಸು ಅಬ್ಬಬ್ಬಾ!!


ತಿಳಿಯದಾದೆ ಬದುಕೆ! ಪ್ರಶ್ನೆಯಾ ನೀ? ಉತ್ತರವ ನೀ?
ಜವಕಂಜಿ ಬೆದರುವ ಹೇಡಿಯ ನೀ? ಮರ್ಮವಾ ನೀ?
ಸದಾ ಉಪದ್ರವಿಸೋ ಹ್ಹೇ ನನ್ನಂತರ್ಧ್ವನಿ
ಮೃತ್ಯುವನು ಮಣಿಸುವ ಅವಸನ ನೀ!!

-ಸುರೇಂದ್ರ ನಾಡಿಗ್


No comments:

Post a Comment