ಪ್ರಶ್ನೆಯಾದೆ ನಾನು, ನನಗೆ
ತೀಕ್ಷ್ಣವಾದ ಮರುಳ ಬಗೆ
ಶಿಷ್ಠೆಯಾದೆ ನಾನು, ಜಗಕೆ
ಎಂದು ತೀರದ ಕನವರಿಕೆ
ತಿಳಿಯದ ಅರೆ ಸೊಬಗೆ
ತಿಳಿಯದಾದೆ ನಾನು, ಜನಕೆ
ಹಾಗೆ ಕಾಡುವ ಬೇಸರಿಕೆ
ನಾನೇಕೆ ಬೇಕೇ ನನಗೆ
ಮುಚ್ಚಿರುವ ಕೆಂಡದ ಹಾಗೆ
ಮುನ್ನೆಡೆ ಮನಸೇ ನೀನು
ಜೊತೆಗಿರುವೆ ನಿನ್ನೆಡೆ ನಾನು
ಜಗದಂಚಿಗೆ, ಯುಗದಂಚಿಗೆ
ನೀ ಕೋರಿದ ಸಾಧನೆಗೆ!
ಹೆದರದಿರು ನಶ್ವರಕೆ
ನೆಡೆಯುತಿರು ಕ್ಲಿಷ್ಟಕೆ
ದಿನವೊಂದಿದೆ, ಅದು ಮುಂದಿದೆ
ನಾ ನಿನ್ನದೇ ಎಂದಿದೆ!!
-ಸುರೇಂದ್ರ ನಾಡಿಗ್
No comments:
Post a Comment