Wednesday, July 4, 2012

ಮಗುವಂತ ಮನಸೀಗು ಮಕ್ಕ್ಳಾಗಿದೆ !!


ಪರಪಂಚ ಇಂದೇಕೊ ಹಾಳಾಗಿದೆ
ಮೆಷೀನು ಲೈಫು ಬಾಳಾಗಿದೆ
ಈಗೀಗ ಲವ್ವು ಓಲ್ಡಾಗಿದೆ
ನನ್ನ ಮಗುವಂತ ಮನಸೀಗು ಮಕ್ಕ್ಳಾಗಿದೆ !!
ಹುಡುಕಿದರು ಇಷ್ಕು ಇಲ್ಲವಾಗಿದೆ
ಮಗುವಂತ ಮನಸೀಗು ಮಕ್ಕ್ಳಾಗಿದೆ !!

ಹೆಣ್ಮಕ್ಕ್ಳ ವಿಚಾರ ಬೋರಾಗಿದೆ
ಗಂಡೈಕ್ಳ ಸಹವಾಸ ಸಾಕಾಗಿದೆ
ಒಬ್ಬೋಬ್ಬನೆ ಕೂತಾಗ ಸಾವಾಗಿದೆ
ನನ್ನ ಮಗುವಂತ ಮನಸೀಗು ಮಕ್ಕ್ಳಾಗಿದೆ !!
ಗೆಲುವೆಂಬ ಕುದುರೆ ಕನಸಾಗಿದೆ
ಮಗುವಂತ ಮನಸೀಗು ಮಕ್ಕ್ಳಾಗಿದೆ !!

ಯಾವನೊ ಬೇಡಿದಾ ಅಂತ ಮತಹಾಕಿದೆ
ನೋಡೊಕ್ಕೆ ಹಾನೆಸ್ಟು ಎಂದೆನಿಸಿದೆ
ಗೆದ್ದೆತ್ತು ಕೂಡ ಗೆಲುವಾಗಿದೆ
ಹಿಂಡಿ ಹಾಕ್ದೋರ ಮರೆತೋಗಿದೆ
ಈಗ ವೋಟಿಗೊಂದರಂತೆ ಸ್ಕ್ಯಂಡಲ್ ಇದೆ
ಮಗುವಂತ ಮನಸೀಗು ಮಕ್ಕ್ಳಾಗಿದೆ !!

ಮದುವೆಗೆ ಮೂರ್ ತಿಂಗಳ ಡೈವೊರ್ಸಿದೆ
ಕ್ರೆಡಿಟ್ ಕಾರ್ಡ್ ಗೆ ಇ.ಮ್.ಐ ಆಫರ್ ಇದೆ
ಲಿವ್-ಇನ್ನು, ನೈಟ್-ಸ್ಟ್ಯಂಡು ಕಾಮನ್ನಾಗಿದೆ
ನನ್ನ ಮಗುವಂತ ಮನಸೀಗು ಮಕ್ಕ್ಳಾಗಿದೆ !!
ಕಲ್ಚರ್ರು ಬುಕ್ಕಲ್ಲಿ ಸೇಫಾಗಿದೆ
ಮಗುವಂತ ಮನಸೀಗು ಮಕ್ಕ್ಳಾಗಿದೆ !!

ಶಾಂತಿನ ಸೇಲ್ ಮಾಡೋ ಸ್ಕೂಲು ಇದೆ
ಸೆಮಿಸ್ಟ್ರು ಜ್ಞಾನನ ನೂಂಗಾಕಿದೆ
ಹಿಸ್ಟರಿ ಬರೆದೋಂದೆ ಫ಼ೇಲ್ ಆಗಿದೆ
ನನ್ನ ಮಗುವಂತ ಮನಸೀಗು ಮಕ್ಕ್ಳಾಗಿದೆ !!
ಸಾಕಾಯ್ತು ಈ ಚೇಂಜು ಎಂದೆನಿಸಿದೆ
ಮಗುವಂತ ಮನಸೀಗು ಮಕ್ಕ್ಳಾಗಿದೆ !!

                             -ಸುರೇಂದ್ರ ನಾಡಿಗ್

No comments:

Post a Comment