ತುಳಿಯೋರ ಮುಂದೆ ಬಾಗೊರು
ಹಸಿದೊರ ಮುಂದೆ ಬೇಡೋರು
ಮರ್ಯದೆಗಂಜಿ ಬದುಕೋರು
ಬದುಕೊಕ್ಕೆ ಬರದ ನಾವ್ ಬಡಜನರು
ಎರೆಡೊತ್ತು ಉಂಡು ಮಲಗೋರು
ಅಲೆಮಾರಿಯಂತೆ ತಿರುಗೋರು
ಹಸಿವನ್ನೆ ಹೆತ್ತು ಹೊತ್ತೋರು
ಬದುಕೊಕ್ಕೆ ಬರದ ನಾವ್ ಬಡಜನರು
ಕನಸಲ್ಲೇ ಜೀವನ ಕಾಣೋರು
ಎಚ್ಚೆತ್ತು ನಿಲ್ಲದೆ ಮಲಗೋರು
ಕಿಚ್ಚೆದ್ದು ಸಿಡಿಯದೆ ಮುಲುಗೋರು
ಬದುಕೊಕ್ಕೆ ಬರದ ನಾವ್ ಬಡಜನರು
ಕಂಡೂ ಕಾಣಾದ ಕುರುಡರು
ಹೆದರಿ ಹೆದರಿ ಸಾಯೋರು
ಗೆಲ್ಲೊ ಆಸೆಯ ಮರೆತೋರು
ಬದುಕೊಕ್ಕು ಬರದ ನಾವ್ ಬಡಜನರು
No comments:
Post a Comment