ಯಾರು ಇಲ್ಲದ ಜಗದಲಿ - ಸುರೇಂದ್ರ ನಾಡಿಗ್ ©
All Rights Reserved. Mob:+919964292817
Monday, November 17, 2025
ಶ್ರೀ ಕಿಕ್ಕೇರಮ್ಮ ಸ್ತುತಿ
Tuesday, October 7, 2025
ಶ್ರೀ ಪರಶುರಾಮ ಸ್ತೋತ್ರ
ಧ್ಯಾನಂ
ಲೋಹಿತಾಂಬರಧರಂ ಘೋರಂ ರುದ್ರಮೂರ್ತಿಂ ಸುಭೀಷಣಮ್ |
ಪರಶುಖಡ್ಗಚಾಪಬಾಣಧಾರಿಣಂ ತೇಜೋರಾಶಿಮ್ ||
ರಕ್ತಚಂದನಲಿಪ್ತಾಂಗಂ ರಕ್ತಹಾರವಿಭೂಷಿತಮ್ |
ರೌದ್ರಭಾವಂ ಸ್ಮಿತಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ |
ಸ್ತೋತ್ರಂ
ಜಯ ಜಯ ಹೇ ಭಾರ್ಗವ ಶ್ರೇಷ್ಠಾ ಜಯ ಜಮದಗ್ನಿ ನಂದನ |
ಜಯ ರೇಣುಕಾ ಸುತ ರಮಣೀಯ ಜಯ ಜಯ ರುದ್ರಾವತಾರ ||
ಓಂ ಕ್ಷಾತ್ರದರ್ಪ ಹರಣಾಯ ನಮಃ
ಓಂ ಬ್ರಹ್ಮತೇಜೋ ವಿಭಾವಸವೇ ನಮಃ
ಓಂ ರೇಣುಕಾ ಹೃದಯಾನಂದಾಯ ನಮಃ
ಓಂ ಪಿತೃಭಕ್ತಿ ಪರಾಯಣಾಯ ನಮಃ ||
ಏಕವಿಂಶತಿ ಸಂಹಾರ ಕ್ರೋಧಾಗ್ನೇ ಸರ್ವದಾ ಜಯ |
ಸಪ್ತಾರ್ಣವ ಪರಿಕ್ಷಿಪ್ತ ಕ್ಷಿತಿಮಂಡಲ ಧಾರಕ ||
ಓಂ ರಣಧೂರಂಧರಾಯ ನಮಃ
ಓಂ ರೌದ್ರಮೂರ್ತಯೇ ನಮಃ
ಓಂ ರಕ್ತಾಂಬರಧರಾಯ ನಮಃ
ಓಂ ರಕ್ಷಿತ ಧರ್ಮ ಸಂಸ್ಥಾಪನಾಯ ನಮಃ ||
ಕಲ್ಪಾಂತ ಸಮಯ ಪ್ರಖ್ಯ ಭೀಮ ಪರಶು ಧಾರಿಣೇ |
ತ್ವದ್ಭಕ್ತಾನಾಂ ಭಯಂ ಹರ್ತ್ರೇ ಭವಬಂಧ ವಿಮೋಚನ ||
ಓಂ ರಾಮ ರಾಮೇತಿ ಗೀಯಮಾನ ನಾಮನೇ ನಮಃ
ಓಂ ರಾಘವ ಗುರುವೇ ನಮಃ
ಓಂ ಚಿರಂಜೀವಿನೇ ನಮಃ
ಓಂ ಪರಮ ಬ್ರಹ್ಮವಿತ್ಪರಾಯ ನಮಃ ||
ಫಲಶ್ರುತಿ
ಯಃ ಪಠೇತ್ ಪ್ರಾತರುತ್ಥಾಯ ಭಕ್ತಿಮಾನ್ ಸಂಯತೇಂದ್ರಿಯಃ |
ತಸ್ಯ ವೀರ್ಯಂ ಯಶೋ ಲಕ್ಷ್ಮೀರ್ಜ್ಞಾನಂ ವಿಜಯತೇ ಧ್ರುವಮ್ ||
ರಾಜಭಯಂ ನ ಭವೇತ್ ತಸ್ಯ ನ ದಾರಿದ್ರ್ಯಂ ಕದಾಚನ |
ಸರ್ವಪಾಪ ವಿನಿರ್ಮುಕ್ತಃ ಸ ಯಾತಿ ಪರಮಾಂ ಗತಿಮ್ |
ಶ್ರೀ ಪರಶುರಾಮ ಪ್ರಸಾದೇನೇತಿ ಶ್ರುತಿಃ ||
ಇತಿ ಶ್ರೀ ಪರಶುರಾಮ ಸ್ತೋತ್ರಂ ಸಂಪೂರ್ಣಂ |
Thursday, October 2, 2025
ಕನ್ನಡ ಹೃದಯಗೀತೆ
ಶಾರದಾರವಿಂದ ವನ ವಿಹಾರಿಣಿ
ಕರ್ನಾಟಕ ದೇವಿ ಭವತಾರಿಣಿ
ಕನ್ನಡ ತನುವಿಗೆ ಜೀವನದಾಯಿನಿ
ಕನ್ನಡಿಗರ ಗರ್ವದ ಭಾವನಾಯಿನಿ
ಜಯ ಜಯ ಹೇ ಮಾತಾ, ಜಯ ಜಯ ಹೇ ಧಾತ್ರಿ
ಹೊಯ್ಸಳ ಶಿಲ್ಪ ಲಲಿತೇ
ವಿಜಯನಗರ ಗರ್ಜಿತೇ
ಬಾದಾಮಿ ಪಟ್ಟದಕಲ್ ಶಾಸನ ನಿಜವಾಣಿ
ಶ್ರುತಿ ಸ್ಮೃತಿ ಪುರಾಣ ಸಂಗೀತ ಕಲಾನಿಧಾನಿ
ಜಯ ಜಯ ಹೇ ಮಾತಾ, ಜಯ ಜಯ ಹೇ ಧಾತ್ರಿ
ರನ್ನ ಪಂಪರ ಕಾವ್ಯಭಾರ
ಕುಮಾರವ್ಯಾಸನ ಭಾರತ ರಸಧಾರ
ಹರಿದಾಸರ ದಿವ್ಯ ಸಂಗೀತ ಸಾಗರ
ಬಸವಣ್ಣರ ವಚನ ವೇದ ಸಾರ
ಮಂಕುತಿಮ್ಮನ ತತ್ವ ರಥ
ಅಕ್ಕಮಹಾದೇವಿಯ ತ್ಯಾಗ ಗಾಥ
ಕನಕದಾಸರ ಭಕ್ತಿ ಪಥ
ಶಿವಯೋಗಿಗಳ ಯೋಗ ಸಾಕ್ಷ್ಯ
ಕನ್ನಡ ಸಾಹಿತ್ಯದ ಸುವರ್ಣ ಧಾರ
ಕನ್ನಡಿಗರ ಆತ್ಮದ ಅಮರ ಆಧಾರ
ತುಂಗಭದ್ರೆಯ ಪುಣ್ಯ ನದಿ ಸ್ರೋತ
ಕಾವೇರಿಯ ಅಮೃತ ಜಲ ಗೀತ
ಮಲೆನಾಡ ಹಸಿರಿನ ವನ ಮಾಲೆ
ಕೊಡಗಿನ ಸುವರ್ಣ ಭೂಮಿ ಲೀಲೆ
ಗೋಕರ್ಣದ ರುದ್ರ ಧ್ಯಾನ
ಶ್ರವಣಬೆಳಗೊಳದ ಜಿನ ಧರ್ಮ ಜ್ಞಾನ
ಉಡುಪಿಯ ಶ್ರೀಕೃಷ್ಣ ಪಾದ ಪೂಜ್ಯ
ಮಧ್ವಾಚಾರ್ಯರ ತತ್ತ್ವ ಸಿದ್ಧಾಂತ ರಾಜ್ಯ
ವಿದ್ಯಾರಣ್ಯರ ಜ್ಞಾನ ವೇದಿಕೆ
ಪುಲಿಕೇಶಿಯ ವೀರ ಪ್ರತಿಜ್ಞೆ
ರಾಷ್ಟ್ರಕೂಟರ ಶಿಲ್ಪ ಲಾಸ್ಯ
ಚಾಲುಕ್ಯರ ವಾಸ್ತು ವಿಲಾಸ
ಬಲ್ಲಾಳನ ಪ್ರಜಾಪಾಲನೆ
ಕಿತ್ತೂರು ಚೆನ್ನಮ್ಮನ ಧೈರ್ಯಭಾಷಣೆ
ಕೆಂಪೇಗೌಡರ ನಗರ ಕಲ್ಪನೆ
ಕರಗದ ಪವಿತ್ರ ನೃತ್ಯ ರಚನೆ
ಇತಿಹಾಸದ ಈ ಮಹಾನ್ ವೈಭವ
ನಮ್ಮ ಕರುನಾಡಿನ ಅಮರ ಗರ್ವ
ಕನ್ನಡವೇ ಉಸಿರ ಕುಣಿತದ ಹಾಡು
ಕನ್ನಡವೇ ರಕ್ತದ ಅಲೆಗಳ ನೀರಡು
ಕನ್ನಡವೇ ಇತಿಹಾಸದ ಮಹಾಗರ್ಜನೆ
ಕನ್ನಡವೇ ಭವಿಷ್ಯದ ಕ್ರಿಯಾಯೋಜನೆ
ಕರ್ನಾಟಕವೇ ಜನ್ಮದ ಪುಣ್ಯಪ್ರದೇಶ
ಕನ್ನಡವೇ ಆತ್ಮದ ಧರ್ಮೋಪದೇಶ
ಕನ್ನಡತನವೇ ನಿತ್ಯಜಪದ ಮಂತ್ರ
ಕನ್ನಡವೇ ನಾಡಿಯ ಹರಿವಿನ ಯಂತ್ರ
ಈ ಹೊನ್ನನಾಡಿಗೆ ನಿಮ್ಮಡಿ ಬಾಗುವೆನು
ಈ ಹೃದಯನುಡಿಗೆ ಶಿರವನು ಓರುವೆನು
ಕನ್ನಡವೇ ಜೀವನದ ಪೂರ್ಣಾಧಾರ
ಕನ್ನಡವೇ ಅಸ್ತಿತ್ವದ ಅಖಂಡ ಸಾರ
ಕನ್ನಡಾಂಬೆ ದರ್ಶನವೇ ನನ್ನ ಮೋಕ್ಷ
ಕನ್ನಡವೇ ನನ್ನ ಜೀವನದ ಉತ್ಕರ್ಷ
ಜಯ ಕನ್ನಡ ಮಾತೆ! ಜಯ ಕರ್ನಾಟಕ ದೇವಿ!
ನಿನಗಾಗಿ ಜೀವ! ನಿನಗಾಗಿ ಪ್ರಾಣ!
ಕನ್ನಡವೇ ಜೀವನ! ಕನ್ನಡವೇ ಪ್ರಾಣ!
ಜಯ ಜಯ ಹೇ ಮಾತಾ, ಜಯ ಜಯ ಹೇ ಧಾತ್ರಿ
ಶ್ರೀ ಕನ್ನಡಮಾತೆ ಭುವನೇಶ್ವರಿ ಸ್ತೋತ್ರ
ಭವಾನೀ ಭುವನೇಶ್ವರಿ ಭುವನಾಧಾರಾ,
ಕಾವೇರಿ ತೀರಸುಂದರಿ ಪರಮೇಶ್ವರಿ ।
ಕರ್ನಾಟಕ ಮಾತೆ, ದಿವ್ಯಾ ವಿದ್ಯಾನಿಧಿ,
ನಮನಾರ್ಹಾ ನಿತ್ಯೇ ನಮಾಮಿ ಭುವನೇಶ್ವರಿ ॥ 1 ॥
ನೀಲಮಣಿವಿಲಾಸಿತ ತಾಜಸವಾ,
ಚಂದ್ರಕಲಾಸ್ಮಿತಿಮದನಮುಖವಾ ।
ಭಕ್ತಜನಪರಿಪಾಲಿನೀ ಪ್ರಿಯಾ,
ಕಲ್ಯಾಣಮಯಿ ಕರುಣಾಸಾಗರಾ ॥ 2 ॥
ಜ್ಞಾನಮಯೀ ಜಯಕರೂಪಾ ಕಲ್ಪವೃಕ್ಷಾ,
ಶಕ್ತಿ ಪರಮೇಶ್ವರೀ ಚಿರಂತನಾ ।
ತಾಯಿತಾಯಿ ಕರ್ನಾಟಕ ನಾಡಿನ,
ಭುವನೇಶ್ವರಿ ಗೌರಿ ನಮೋ ನಮಃ ॥ 3 ॥
ಶಿವಸಹಜ ಶಕ್ತಿಧಾರಿಣಿ ಸದಾ,
ಧರ್ಮಪರಾಯಣೀ ಪರಮಾರ್ಥಮಮ ।
ಭಕ್ತರಕ್ಷಕಾ ಭುವನೇಶ್ವರಿ ದೇವಿ,
ಜಯಮಾಲೆಯ ತಾರೆ ಸದಾ ಭಕ್ತಮನಃ ॥ 4 ॥
ಶ್ರೀ ಸುರೇಂದ್ರ ಸಂಕಲಿತಂ ಸ್ತೋತ್ರಮಿದಂ ಭುವನೇಶ್ವರ್ಯೈ,
ಯಃ ಪಠೇತ್ ಭಕ್ತ್ಯಾ ವಿನಯಾ ಸಂಯುಕ್ತಂ ಭಜತಾಂಕರೋತ್ಕಟಂ ।
ದುಃಖನಿವಾರದಂ ಕೃಪಾಸಾಗರಂ ಪಾಪದೂರಣಕಾರಿಣೀಂ,
ಕನ್ನಡಾಂಬೆ ಪರಮೇಶ್ವರಿ ಶರಣ್ಯಾ ಯಜ್ಞಫಲದಾತ್ರೀಂ ॥
ಜಗತ್ ಕಲ್ಯಾಣಮಯೀ ದೇವೀ ಭಕ್ತವತ್ಸಲಾ ಚ ಮಹತಾ,
ನಮಾಮಿ ನಿತ್ಯಂ ಭುವನೇಶ್ವರಿ ತಾಯಿತಾಯಿ ಕರುಣಾಕರಿ॥
Sunday, September 21, 2025
ಶ್ರೀಕಾಲಭೈರವಸ್ತುತಿಃ
ಧ್ಯಾನಮ್
ದಿಗಂಬರಂ ಶೂಲಕಪಾಲಹಸ್ತಂ,
ಜಟಾಜೂಟಜ್ವಾಲಾಮಾಲಿನಂ ಪ್ರಭುಮ್ ।
ನೀಲಕಂಠಂ ಲೋಕಪಾಲಂ ವರದಂ,
ಧ್ಯಾಯೇ ಭೈರವಂ ಕಾಲವಶ್ಯಕಾರಿಣಮ್ ॥
ಕಾಸೀವಾಸಿನಂ ಭಯನಾಶಕಂ ಹರಮ್,
ಭಕ್ತಾನುಕಂಪಿನಂ ಉಗ್ರತೇಜೋಮಯಮ್ ।
ಪ್ರಪಂಚನಾಶಕಂ ಪರಮಾಧಿದೇವಂ,
ವಂದೇ ಸದಾ ಕಾಲಭೈರವಂ ಶಾಂತಮೂರ್ತಿಮ್ ॥
ಸ್ತೋತ್ರಂ
ಓಂ ಭಂ ಕಾಲಭೈರವಂ ವಂದೇ, ಕಾಶೀ ಕ್ಷೇತ್ರಪಾಲಕಮ್ ।
ಸರ್ವರೋಗವಿನಾಶಾರ್ಥಂ ಭಕ್ತಾನಾಂ ಸುಖದಾಯಕಮ್ ॥ 1 ॥
ಓಂ ಭಂ ಉಗ್ರತೇಜಸ್ಸಂಪನ್ನಂ ಭೀಷಣಂ ಭಕ್ತಪೋಷಕಮ್,
ಶ್ಮಶಾನವಾಸಿನಂ ಧೀರಂ ದಿಗ್ವಿಜಯೀಶ್ವರಂ ಹರಿಮ್ ॥ 2 ॥
ಓಂ ಭಂ ಶೂಲಖಡ್ಗಗದಾಧಾರಂ ಕುಕ್ಕುರವಾಹನಂ ಗುರೂम्,
ಮೋಕ್ಷದಂ ಭೋಗದಂ ನಿತ್ಯಂ ಭೈರವಂ ಭಕ್ತವತ್ಸಲಮ್ ॥ 3 ॥
ಓಂ ಭಂ ತ್ರಿಪುರಾಂತಕಂ ದೇವಂ ಪಾಪತಾರಣ ಪಾರಗಮ್,
ಅಘೋರರೂಪಧರಂ ನಿತ್ಯಂ ಶರಣಾಗತಪೋಷಕಮ್ ॥ 4 ॥
ಓಂ ಭಂ ದಂಡಪಾಣಿ ದುಷ್ಟಸಂಘವಿಧ್ವಂಸಕಂ ಹರಿ,
ಅನ್ನಪೂರ್ಣಾಪ್ರಿಯಂ ದೇವಂ ಲೋಕನಾಥಂ ನಮಾಮ್ಯಹಮ್ ॥ 5 ॥
ಫಲಶ್ರುತಿ
ಯಃ ಪಠೇದಿದಂ ಭೈರವರಾಜಸ್ತುತಿಮನ್ವಹಮ್,
ಸರ್ವಪಾಪವಿನಾಶಃ ಸ್ಯಾತ್ ಸರ್ವಕರ್ಮಸು ಸಿದ್ಧಿದಃ ।
ಕಾಶೀ ಕ್ಷೇತ್ರಪತೇರ್ಭೈರವಾನುಗ್ರಹಮವಾಪ್ಯ ಸಃ,
ಧನಂ ಧಾನ್ಯಂ ಸ್ತ್ರೀಯಂ ಪುತ್ರಂ ವಿಜಯಂ ಚ ನ ಲಭ್ಯತೆ ॥
ಅಂತಕಾಲಮಪಿ ಪ್ರಾಪ್ಯ ಮಹಾನಂದಪದಂ ಲಭೇತ್,
ಭಕ್ತೈಕವಶ್ಯಂ ಭೈರವಂ ಪ್ರೀತಿಂ ಕರೋತಿ ಮಾಮಕಮ್ ॥
॥ ಇತಿ ಶ್ರೀಸುರೇಂದ್ರವಿರಚಿತಾಂ ಶ್ರೀಕಾಲಭೈರವಸ್ತುತಿಃ ಸಂಪೂರ್ಣಾ ॥
Saturday, September 20, 2025
ಶ್ರೀನರಸಿಂಹಸ್ತುತಿಃ
ಶ್ರೀಲಲಿತಾ ಸ್ತುತಿಃ
ಶ್ರೀ ದುರ್ಗಾಸ್ತುತಿಃ
ಶ್ರೀ ಶಿವಸ್ತುತಿಃ
Wednesday, September 17, 2025
ಶ್ರೀ ಗಾಯತ್ರೀಸ್ತುತಿಃ
ಶ್ರೀ ಗಣೇಶಸ್ತುತಿಃ
ಆ ನೆನಪಿದೆ...!
Tuesday, September 16, 2025
ಶ್ರೀ ಸೂರ್ಯಸ್ತುತಿಃ
ಶ್ರೀ ಹನುಮಸ್ತುತಿಃ
Sunday, September 14, 2025
ಶ್ರೀ ಸುಬ್ರಹ್ಮಣ್ಯ ಸ್ತುತಿ
ಮಹಾ ಸ್ಫೋಟ ಸಿದ್ಧಾಂತ!
Saturday, July 10, 2021
ಒಂದೇ ಒಂದು ಲೋಕ ನೀನೇ
Saturday, March 20, 2021
ನಾ ಬುದ್ಧನಾಗಿರುವೆ!
Monday, November 16, 2020
ಗುಪ್ತ ಗಾಮಿನಿ ಮನಸು
ಏನು ಇಲ್ಲದ ಊರಿನಲ್ಲಿ
ನಾ ಎಂತ?!
ನಾನೊಬ್ಬ ಪರಕೀಯ, ಪರರಿಲ್ಲದ ಜಗದೊಡಯ
Monday, December 23, 2019
ಅಂತರಂಗದಲ್ಲಿ
Wednesday, July 27, 2016
ಗಿರ್ ಗಿಟ್ಲೆ ಕಣ್ಣಲಿ...
Monday, October 13, 2014
ಮುಗಿಯದಿರು ದಾರಿ...
ಮುಗಿಯದಿರು ದಾರಿ, ನಿನ್ನ ಮೇಲೆ ಹೊಂಟಿಹೆನು ಸವಾರಿ
ಬೆಟ್ಟಗುಡ್ಡಗಳ ಏರಿ, ಇಳಿ ಬಂಡೆಗಳ ಜಾರಿ
ಹೊಂಬಿಸಿಲ ಬುಟ್ಟಿಯಲಿ ನಾ ನೆಡೆದದೆ ದಾರಿ!!
ಮಾಯ ಮರ್ಕಟವೇರಿ, ಹಸಿರು ಕಾನನವ ಹಾರಿ
ನೀಲಿ ಸಾಗರ ಪಾರಿ, ಮರುಭೂಮಿಯ ಸವರಿ
ನಾನು ನನ್ನಿಚ್ಚೆಯಲಿ ಗಮ್ಯ ತಿಳಿಯದ ಅಲೆಮಾರಿ!!
ಯಾರು ಇಲ್ಲದ ಜಗದಲಿ, ನನ್ನನ್ನಾಳುವ ನನ್ನಲಿ
ಉಪ್ಪಿರಲಿ, ಸೊಪ್ಪಿರಲಿ, ಅನುಭವಿಸೊ ರುಚಿಯಿರಲಿ!!
ಜೊತೆಗೆ ಬಂದವರಿರಲಿ, ಎಲ್ಲೊ ನಿಂತವರಿರಲಿ
ಚಳಿಯಿರಲಿ, ಮಳೆಯಿರಲಿ, ತೊಯ್ಯದಿರು ಕಡೆಯಲಿ
ಬಿಸಿಲಿರಲಿ, ಬಿರುಗಾಳಿ ಬರಲಿ, ತಳ್ಳದಿರು ಜವರಲಿ!!
ಕನಸುಗಳ ಸಂತೆಯಿದೆ, ಕಟ್ಟುಪಾಡುಗಳ ಚಿತೆಯಿದೆ
ತಣಿವಿದೆ, ತ್ರುಷೆಯಿದೆ ಕನಸಿನ ಹಿಂದೆ
ನಿಂತ ಅರಿವಿದೆ, ಕೊಳ್ಳಿಹಿಡಿದಿದೆ, ಚಿತೆಯೇರಿದೆ!!
ಹೊಸ ಹುರುಪಿದೆ, ಯುಗಳ ಚಿಮ್ಮಿದೆ
ನ್ಯೂನ್ನತೆಯ ಲಕ್ಷ್ಯವಿದೆ, ಅಜ್ಞಾತ ತತ್ತ್ವವಿದೆ
ಎಲ್ಲ ತಿಳಿವಿದೆ ಮುಂದೆ ಮುಗಿಯದ ದಾರಿಯಿದೆ!!
-ಸುರೇಂದ್ರ ನಾಡಿಗ್
Tuesday, May 13, 2014
ಎಲ್ಲಿ ಹೋದೆ ಇಂದು?
ಕೇಳಲಿಲ್ಲ ಇಂದು ನಿನ್ನ ಪಿಸುಮಾತು
ನಿನ್ನ ನೋಡದೇನೆ ಒಂದು ಸಂಜೆಯಾಯ್ತು
ನಿನ್ನ ದನಿಗೆ ನಾ ಮನಸೋತು
ಕಾದಿರುವೆ ನಿನಗೆ ಇಲ್ಲೆ ಕೂತು ಕೂತು
ಊರು ಕೇರಿ ತಿರುಗಿ ಬಂದೆ ನೀ ಸಿಗುವೆ ಎಂದು
ಅಜ್ಜಿ ಅಂಗಡಿಲಿ ಬತ್ತಾಸು ಕೊಂಡುಕೊಂಡು
ಬಾವಿ ಕಟ್ಟೆ ಮೇಲೆ ಕುಂತೆ, ಕೊಡವ ಹಿಡಿದು ಕೊಂಡು
ಎಲ್ಲಿ ಹೋದೆ ಇಂದು? ಬೇಗ ಬಂದು ನೋಡುಮಲಗಿರುವೆಯ ನೀನು? ಜ್ವರ ಬಂದು?
ತಪ್ಪು ಮಾಡಿದೆ ಏನು? ಅಪ್ಪ ಸಿಡುಕಿದರೇನು?
ತಾಳಲರೆ ಇನ್ನು! ನಿನ್ನ ಮನೆಗೆ ಹೊರಟೆ ನಾನು!
ತಾಳು, ತಾಳು! ನಿನ್ನಮ್ಮ ಕೇಳಿದರೆ ನಾ ಉತ್ತರಿಸಲೇನು?
ಮೂಲೆ ಬೀದಿ ಮಾರಮ್ಮನ ಗುಡಿಗೆ ಕೈ ಮುಗಿದು
ಕೋಟೆ ಆಂಜನೇಯನಿಗೆ ಕಾಯಿ ಒಡೆದು
ನಮ್ಮಪ್ಪ ಗಣಪನಿಗೆ ಹರಕೆ ಕಟ್ಟಿಕೊಂಡು
ಹೆಜ್ಜೆ ಹೆಜ್ಜೆಗೂ ಹೆದರಿಕೊಂಡು, ನಿನ್ನ ಮನೆಗೆ ಬಂದೆ ನೋಡು
ಏಕೆ ಇಷ್ಟು ಜನರು? ಮನೆಯಲಿ ಹಬ್ಬವೇನು?
ನಮ್ಮಪ್ಪ ನಿಂತಿಹರು ಹೊಗೆ ಸರಿಸಿಕೊಂಡು
ಅಲ್ಲಿ, ಮಧ್ಯದಲಿ ಮಲಗಿರುವುದು ನೀನೇನು?
ನಿನ್ನುಸಿರು ಇರದೆ.... ನಿಂತಿತು ನನ್ನೆದೆಯ ಗೂಡು
-ಸುರೇಂದ್ರ ನಾಡಿಗ್
ಎಲ್ಲಿ ಹೋದೆ ಇಂದು? (Female Version)
Sunday, October 13, 2013
ಪ್ರೀತಿಸುವೆಯ ನೀನು? ಒಮ್ಮೆ ಕೇಳಿಬಿಡಲೇನು??
ಕಣ್ಣಲಿ ಕನಸು, ನಿನ್ನಲ್ಲೆ ಮನಸು
ಏನಿಂತ ಸೊಗಸು, ನನ್ನನೆ ರಮಿಸು
ನಿನ್ನ ಕಂಡ ದಾರಿಯಲ್ಲೆ ನಾನು ಕಳೆದುಹೋದೆನು
ಬೇಡಿದೆ ವಯಸು, ಕಾಡಿದೆ ಉರುಸು
ನನ್ನೆ ವರಿಸು, ಇಲ್ಲ ಮರೆಸು
ನಿನ್ನ ಕಂಡ ಕ್ಷಣದಲೆ ನಾ ಉಳಿದುಹೋದೆನು
ಪ್ರೀತಿಸುವೆಯ ನೀನು????
ಒಮ್ಮೆ ಕೇಳಿಬಿಡಲೇನು?
ಪ್ರೀತಿಸುವೆಯ ನೀನು????
ಒಮ್ಮೆ ಕೇಳಿಬಿಡಲೇನು..?
ಪ್ರೀತಿಸುವೆಯ ನೀನು..????
ನಿನ್ನೆ ಕೇಳಿಬಿಡಲೇನು......?
ನನ್ನ ಮನಸು ಒಂಥರ ಮರುಭೂಮಿಯಂತೆ
ನಿನ್ನ ಒಂದು ನಗುವಿಗೆ ಹಸಿರಹಾಸಿತಂತೆ
ನೀ ಯಾವ ಊರ ರಾಜಕುಮಾರಿ?ಕೊಳ್ಳೆಹೊಡೆದು ಹೋದೆ ನನ್ನೆದೆಯ ಕೇರಿ
ಏಲ್ಲ ಮರೆತು ನಾ ನಿನ್ನ ಹಿಂದೆ ಬಂದೆನು
ಏನು.. ಮಾಡಲಿ ಈಗ.. ತಿಳಿಯದಾದೆನು !
ಪ್ರೀತಿಸುವೆಯ ನೀನು????
ಒಮ್ಮೆ ಕೇಳಿಬಿಡಲೇನು?
ಪ್ರೀತಿಸುವೆಯ ನೀನು????
ಒಮ್ಮೆ ಕೇಳಿಬಿಡಲೇನು..?
ಪ್ರೀತಿಸುವೆಯ ನೀನು..????
ನಿನ್ನೆ ಕೇಳಿಬಿಡಲೇನು......?
ಕತ್ತಲಲಿ ಕನವರಿಸಿ, ನಿನಗಾಗಿ ಹಪಹಪಿಸಿ
ಮನದಲೆ ಆದರಿಸಿ, ನಿನ್ನ ಹಬ್ಬ ಆಚರಿಸಿ
ಬಂದೆ ಈಗ ನಾನು, ಮುಂದೆ ಮಾಡಲೇನು?
ನಿನ್ನನೆ ಧ್ಯಾನಿಸಿ, ಪೂಜಿಸಿ ಪರವಶಿಸಿ
ನೀ ನನ್ನನು ಆವರಿಸಿ, ಆಳಿಬಿಡು ನನ್ನರಸಿ...
ಪ್ರೀತಿಸುವೆಯ ನೀನು????
ಒಮ್ಮೆ ಕೇಳಿಬಿಡಲೇನು?
ಪ್ರೀತಿಸುವೆಯ ನೀನು????
ಒಮ್ಮೆ ಕೇಳಿಬಿಡಲೇನು..?
ಪ್ರೀತಿಸುವೆಯ ನೀನು..????
ನಿನ್ನೆ ಕೇಳಿಬಿಡಲೇನು......?
-ಸುರೇಂದ್ರ ನಾಡಿಗ್
Monday, June 24, 2013
ಒಲವೆ ನೀ ದೇವರ ವರವ? ಸೋಜಿಗ.... ಅಲ್ಲವ ??
ಮೊದಮೊದಲ ಮೋಹದ ನೋಟ
ಕಣ್ಣಲ್ಲೆ ನೀ ಮಾಡಿದೆ ಮಾಟ
ಒಲವೆ ನೀ ದೇವರ ವರವಸೋಜಿಗ.... ಅಲ್ಲವ ??
ಇದು ತುಂತುರು ಹನಿಗಳ ಲೋಕ
ಹನಿ ಹನಿಯಲ್ಲು ನಿನ್ನದೆ ಶ್ಲೋಕ
ಒಲವೆ ನೀ ತೋರಿದೆ ಜಗವ
ಒಡ್ಡೋಲಗ.... ಅಲ್ಲವ ??
ಮುಂಜಾವಲಿ ನಿನ್ನದೆ ಕನಸು
ಮುಸ್ಸಂಜೆಗೆ ಕಾದಿದೆ ಮನಸು
ಇದು ಸಾವಿರ ದೇವರ ಕೊಸರು
ನೀನಿದ್ದರೆ ಕೋಟಿ ನೆಸರು
ನಿನ್ನ ನಗುವಿಗೆ ಮರೆತೆನು ಕ್ಷಣವ
ವ್ಯಪಕ.... ಅಲ್ಲವ ??
ಕಿವಿ ತುಂಬಿದೆ ನಿನ್ನದೆ ಮಾತು
ಕಣ್ಣಲ್ಲಿ ನಿನದೇ ಜಾಹಿರಾತು
ಮನಸಲ್ಲಿ ಏನಿದು ಕದನ
ನಾಚಿಕೆ ಬಿಟ್ಟಾಗಿದೆ ಸದನ
ನೀ ಹೂಬುಗ್ಗೆಯಲಿ ಚಿಮ್ಮಿ ಬರುವ
ಅಚ್ಚರಿ.... ಅಲ್ಲವ ??
-ಸುರೇಂದ್ರ ನಾಡಿಗ್
Wednesday, July 4, 2012
ಮಗುವಂತ ಮನಸೀಗು ಮಕ್ಕ್ಳಾಗಿದೆ !!
Monday, April 16, 2012
ಹಸಿವು
Saturday, March 3, 2012
ನಿನ್ನ ಭಾಷೆಯು ಬಾ ಎಂದು ಕರೆದಿದೆ ಬಾ ಕನ್ನಡಿಗ..!!
ಆಚೆ ಎಲ್ಲೊ ದೂರದಲಿ,
ಈ ಕೂಗು ಕೆಳದ ನಿನಗೀಗಾ..??
ನಿನ್ನ ಭಾಷೆಯು ಬಾ ಎಂದು ಕರೆದಿದೆ ಕೇಳೋ ಕನ್ನಡಿಗ
ನಿನ್ನ ಭಾಷೆಯು ಬಾ ಎಂದು ಕರೆದಿದೆ ಬಾ ಕನ್ನಡಿಗ"
ಈ ನಾಡಿದು ನಿನ್ನಿಂದ
ಸವಿ ಸಂಪಿಗೆ ಪದದಿಂದ
ಕೋಂಚವು ನಿನಗೆ ನೆನಪಿಗೆ ಬರದ??
ಇದು ಸಾವಿನ ಆಚೆಗು ಬಿಡಿಸಲಾಗದ ಬಂಧ
ಮರೆವೆನೆಂದರು ಆಗದೆಯೆ
ಇರಲಾಗದು ಕನ್ನಡ ನುಡಿಯದೆ
ಜಗವನ್ನೆ ಗೆದ್ದರು ನೀನು, ಕರುನಾಡೇ ನಿನ್ನ ತಾಯಿನಾಡು
ಎಲ್ಲಿ ಹೇಗೆ ಇದ್ದರು ನೀನು
ಕನ್ನಡಾಂಬೆ ಕಾಯುವಳು
ಪುಣ್ಯಭೂಮಿ ಈ ಮಣ್ಣು, ಕಣ್ಣು ಮುಚ್ಚಿ ಮರೆವುದೇನು??
"ನಿನ್ನ ಪುಟ್ಟ ಮನದಲ್ಲಿ,
ಆಚೆ ಎಲ್ಲೊ ದೂರದಲಿ,
ಈ ಕೂಗು ಕೆಳದ ನಿನಗೀಗಾ..??
ನಿನ್ನ ಭಾಷೆಯು ಬಾ ಎಂದು ಕರೆದಿದೆ ಕೇಳೋ ಕನ್ನಡಿಗ
ನಿನ್ನ ಭಾಷೆಯು ಬಾ ಎಂದು ಕರೆದಿದೆ ಬಾ ಕನ್ನಡಿಗ"
ಕಾವೇರಿ ಇಲ್ಲಿ ಹರಿದಿಹಳು
ತುಂಗೆ ನಿನ್ನ ತೊಳೆದಿಹಳು
ಸಹ್ಯಾದ್ರಿ ಹಸಿರು ತುಂಬಿಹುದು
ಪ್ರತಿದಿನವು ನುಡಿಜಾತ್ರೆ ನೆಡೆದಿಹುದು
ನೀ ಕಣ್ಣಾಮುಚ್ಚೆ ಆಟ ಕಲಿತು
ಟಪ್ಪಂಗುಚ್ಚಿ ಆಡಿ ನಲಿದು
ಮರಕೋತಿಯಾಡಿ ಕಾಲು ಮುರಿದು
ಏನು ತಿಳಿಯದಂತೆ ಎಲ್ಲ ಮರೆತು
ಈಗ ಎನೊ ತಿಂದು, ಎಲ್ಲೊ ಮಲಗುವುದು ಒಂದು ಬದುಕ...???
"ನಿನ್ನ ಪುಟ್ಟ ಮನದಲ್ಲಿ,
ಆಚೆ ಎಲ್ಲೊ ದೂರದಲಿ,
ಈ ಕೂಗು ಕೆಳದ ನಿನಗೀಗಾ..??
ನಿನ್ನ ಭಾಷೆಯು ಬಾ ಎಂದು ಕರೆದಿದೆ ಕೇಳೋ ಕನ್ನಡಿಗ
ನಿನ್ನ ಭಾಷೆಯು ಬಾ ಎಂದು ಕರೆದಿದೆ ಬಾ ಕನ್ನಡಿಗ"
ಕೇಳು ನಿನ್ನ ಹೃದಯವನು,
ಕನ್ನಡವು ನಿನ್ನ ಕರೆದಿಹುದು
ಆಡಲು ಸಾವಿರ ಭಾಷೆಗಳಿರಬಹುದು
ನಿನ್ನ ಮನಸಿನ ಕನ್ನಡ ಭಾಷೆಯಿದು
ಕನ್ನಡಾಂಬೆ ಕಣ್ಣೀರೊರೆಸೊ ಕೈಗಳಾಗು
ಎದುರು ಬಂದವರ ಮೆಟ್ಟೊ ಶಕ್ತಿಯಾಗು
ಕನ್ನಡಕ್ಕೆ ಕೈಯೆತ್ತಿ ನೀ ಮುನ್ನೆಡೆ
ಈ ನಾಡು ಬರುವುದು ನಿನ್ನಾ ಹಿಂದೆ
ಈ ತಾಯಿನಾಡು ನಿನ್ನ ಕರೆದಿದೆ... ಕನ್ನಡಿಗ
"ನಿನ್ನ ಪುಟ್ಟ ಮನದಲ್ಲಿ,
Monday, February 13, 2012
ಒಲವು ಅತಿಯಾಗಿ ಮಿತಿಮೀರಿದೆ..
ಸವಿ ಕನಸು ಮೂಡಿದ ಗಳಿಗೆ ಇದಾಗಿದೆ
ನಿನ್ನ ನಗುವ ನೋಡಿ ಮನಸಿಗೆ ಹಾಯಾಗಿದೆ
ಏನಾಗಿದೆ? ಏನೋ ಆಗಿದೆ...
ನಿನ್ನ ಹೆಸರು ಕೂಗೊ ಬಯಕೆ ಮನಕೆ
ಮಿತಿ ಮೀರಿ ಅತಿಯಾಗಿದೆ
ಹೇಗೊ ಆಗಿದೆ.. ಹೇಗೇಗೊ ಆಗಿದೆ
ನಿನ್ನದೆನೊ ಸೆಳೆವು, ಬಾರಿ ಒಲವು ಮನದಿ
ಅತಿಯಾಗಿ ಮಿತಿಮೀರಿದೆ
ಯಾವ ಸೀಮೆ ದೇವತೆ ನೀನು, ಒಲವ ವರ್ಷ ಸುರಿಸಿದೆ
ಢವ ಢವ ಹೃದಯಕೆ ಇನ್ನು ಸಾಲದೆಂದು ನಾ ಬೇಡಲು ಬಂದೆ
ಕೋವಿಯನ್ನು ಮುಂದೆ ಇರಿಸಿ ಸುಡುವುದೇನು ಪ್ರೇಮವೆಂದೆ
ಸಾವಿಗು ಮಂಪರು ಬಡಿದು ಪೀತಿಗೆ ಪರವಶನಾದೆ
ಏನಾಗಿದೆ? ಏನೋ ಆಗಿದೆ...
ನಿನ್ನ ಜೊತೆಗೆ ಗಳಿಗೆ ಕಳೆಯೋ ಹರಕೆ ಮನಕೆ
ಮಿತಿ ಮೀರಿ ಅತಿಯಾಗಿದೆ
ಹೇಗೊ ಆಗಿದೆ.. ಹೇಗೇಗೊ ಆಗಿದೆ
ನಿನ್ನದೆ ಹರೆಯ ಕರೆಯ ಕೇಳೊ ಆಸೆ ಮನದಿ
ಅತಿಯಾಗಿ ಮಿತಿಮೀರಿದೆ
ನನ್ನೋಲವು ಊರಿದು ಗೆಳತಿ, ನೀ ಏಂದೊ ಇದರ ರಾಣಿಯಾದೆ
ಪ್ರತಿ ಅಣುವಿನಲ್ಲು ನಾ ಬರೆದ ಹೆಸರು ನಿಂದೆ
ಸುಡುಗಾಡು ಮರಳುಗಾಡು ಮಲೆನಾಡಗಿದೆ
ನೀ ಎರೆದ ಒಲವಲಿ ಬೆರೆತು ನಾನೇ ಕಡಲಾದೆ
ಏನಾಗಿದೆ? ಏನೋ ಆಗಿದೆ...
ನಿನ್ನನೆ ಸೇರೊ ಬಯಕೆ ಮನಕೆ
ಮಿತಿ ಮೀರಿ ಅತಿಯಾಗಿದೆ
ಹೇಗೊ ಆಗಿದೆ.. ಹೇಗೇಗೊ ಆಗಿದೆ
ನಿನ್ನದೆ ನಗುವು, ಮನದಿ ನಲಿವ ಒಲವು
ಅತಿಯಾಗಿ ಮಿತಿಮೀರಿದೆ
-ಸುರೇಂದ್ರ ನಾಡಿಗ್
Wednesday, January 18, 2012
ಅಕಾರ ವಿಕಾರ ನನ್ನಂತರಾಳ
ಕನಸು ಕಾಣುವ ಕರ್ಮ
ಸಾವು ತಿಳಿದು ಬಾಳುವ ಜನ್ಮ
ಅಕಾರ ವಿಕಾರ ನನ್ನಂತರಾಳ
ಕುದಿಸಿದ ಹಾಲು ಕಳೆದು ಹುಳುವಾದಂತೆ
ದಿನಗಳೆದಂತೆ ನನ್ನ ಮನಸು ಹೊಲಸು
ಕಾಯಿಸಿದ ಕಬ್ಬಿಣವು ಕಳೆಗುಂದಿದಂತೆ
ಚೂರು ಚೂರು ನನ್ನಿ ಬಿರುಸು ಕನಸು
ಯಾರು ಅರಿಯದ ಮರ್ಮ, ತಿಳಿಯಲಾಗದ ತರ್ಕ
ಬದುಕ ಬಂಡಿಯು ತೆವಳೊ ಪರದೇಶಿ ಪರ್ವ
ಸಾಧನೆಗೂ ಸಂಧಾನ, ಮನಸಿಗೋ ಮಂಥನ
ನೋವು ನಲಿವಿದು ಇಲ್ಲಿ ನಿರಾಳ ನರಕ..!!
ಸರಿ ಕ್ಷಣವು ಏಕೆ ದೇವರನಾಮ, ಹೇಜ್ಜೆಗೊ ಓಮ್ಮೆ ರಾಮ ರಾಮ
ಸ್ಮ್ರುತಿಪಟಲ ಸಖಿಧಾಮ, ಜೊಳ್ಳು ತುಂಬಿದ ದೇಹದಿ ಸತ್ಯಕಾಮ
ತೊರೆಬಡಿದ ತೀರದಲಿ, ತೆರೆಯೆಳೆದ ಮಂಟಪದಿ
ಕುಂದದಾ ಕಂಬನಿಗೆ ಇಲ್ಲ ಕ್ಷಾಮ..!!
ನಶ್ವರತೆಯ ಕಾವಲೇ ಧರ್ಮ?
ಸುರಸ್ಪರ್ಶ ಸಡಿಲಿಪುದೆ ಸಂಘರ್ಷ?
ಅಕಾರ ವಿಕಾರ ನನ್ನಂತರಾಳ
- ಸುರೇಂದ್ರ ನಾಡಿಗ್
Monday, December 19, 2011
ನೀ ಕಾಮನಬಿಲ್ಲು, ಯಾವ ಬಣ್ಣವಾಗಲಿ ನಾನು
ಮುಗಿಯದ ಮಳೆ ನೀನು ಯಾವ ಹನಿಯನು ಸೇರಲಿ ನಾನು
ನೀ ಬರೆದ ಕವಿತೆಯಲಿ ಯಾವ ಪದವಾಗಲಿ ನಾನು
ನಿನ್ನನೆ ನೋಡುತ ಮಾತು ಮರೆತ ಮೌನಿ ನಾನು
ನಿನ್ನ ನೆನೆದರೆ ಸಾವಿರ ಬಣ್ಣದ ಹೋಲಿ
ನೀ ನಕ್ಕರೆ ಕಣ್ಣಿಗೆ ಬೆಳಕಿನ ದಿವಲಿ
ಹೇಳಬೇಕು ಇದನು ನಿನ್ನ ಕಿವಿಯಲಿ
ನಾ ಮುಳುಗಿರುವ ಪಾಪಿ ನಿನ್ನ ಪ್ರೀತಿಯಲ್ಲಿ
ಯಾವ ಪರಿ ನೀನು ತುಂಬಿರುವೆ ಹೃದಯವನು
ನನ್ನ ಕಲ್ಪನೆ ನೀನು ಕನಸು ನೀನು
ನಿನಗಾಗೆ ಕಾದು ಕುಳಿತ ನಾನು
ಪದಗಳನೆ ಮರೆತ ಕವಿಯಾದೆನು
Monday, October 31, 2011
ಪರಿ ಕಬ್ಬಿಗರುಳಿಸಿದ ಪಸಿರು
ಜುಮ್ಮೆನಿಸುವ ರಾಜರ ಕೊಸರು
ಜೇನಲೆಗಳು ಮೂಡಿದ ಕೆಸರು
ಸುಯ್ದಾಡಿದ ದಾಸರ ಕಂಠದ ನೆಸರು
ಕನ್ನಡದೋಕುಳಿ ಮಿಯ್ಯುವ ಸೂರು
ಕನ್ನಡ ಕರಿಮಣಿ ಹೆಮ್ಮೆಯ ಸಾರು
ಅರಿಶಿಣ-ಕುಂಕುಮ ಬಾವುಟ ಎತ್ತರದಲಿ ಹಾರು
ನೀ ಎಲ್ಲಿದ್ದರು ಹೇಗಿದ್ದರು ಕನ್ನಡವನೆ ಸೇರು
Tuesday, April 19, 2011
ಕಾಣದ ಕನ್ನಿಕೆ ನಲ್ಮೆಯ ನಲ್ಲೆ..!!
ಕಾಣದ ಕನ್ನಿಕೆ ನಲ್ಮೆಯ ನಲ್ಲೆ
ನೀ ಬರುವೆ ಎಂದೆ ಕಾದಿರುವೆ
ಮಳೆಯು ಸೋನೆ ಸುರಿಸಿದೆ ಇಲ್ಲೆ
ನೀ ಏಲ್ಲಿಹೆ ಹೇಳು ನಾ ಬರುವೆ
ಮುಚ್ಚಿದ ಚಿಪ್ಪಲಿ ಮುತ್ತಿಡುವಂತೆ
ನನ್ನಿ ಬಂಧದಿ ಬೆಚ್ಚನೆ ಇಡುವೆ
ಇರಚಲು ಹೊಡೆದಿದೆ ತೆಂಕಣದಿಂದ
ಮೇಘವು ಹೊರಳಿದೆ ಬಡಗಣದಿಂದ
ಅರಳಿ ಮರದಡಿ ನಿಂತುಬಿಡು
ನನಗೆಂದು ಸ್ವಲ್ಪವೇ ಜಾಗವಿಡು
ಬೇಗನೆ ಬರುವೆ ನೋಡೊ ಆತುರವಿಹುದು
ಕೈಯಲಿ ಕೆಂಪನೆ ಗುಲಾಬಿಯಿಹುದು
ಕೆರೆಯು ತುಂಬಿದೆ ನಿನಗೇಳಲೆ ಬೇಕು
ಕೋಡಿಯ ಮಧ್ಯಕೆ ನಿನ್ನ ಕರೆತರಬೇಕು
ಬೆದರಿದ ಬೊಂಬೆ ಕಣ್ಮುಚ್ಚುವೆ ನೀನು
ಕಾಲು ನಡುಗಿಸಿ ಜಾರಿಸುವೆನು ನಾನು
ಕೋಟೆ ಮಾರುತಿಯ ನೆನೆದು ನೀನು
ಹಿಡಿದಪ್ಪುವೆ ತೋಳನು, ನನ್ನನ್ನು
ಕಾಣದ ಕನ್ನಿಕೆ ನಲ್ಮೆಯ ನಲ್ಲೆ
ನೀ ಎಲ್ಲೆ ಇರುವೆ ನಾ ಬಂದಿರುವೆ
ಪೇಟೆಬೀದಿಯಲಿ ಮದುವೆಯ ದಿಬ್ಬಣ ಒಂದಿದೆ
ನಾ ಅದನು ದಾಟಿ ಬರುತಿರುವೆ
ನನಗ್ ತಿಳಿಯದ ಮದುವೆ ಯಾವುದೋ ಕಾಣುವೆ
ನೀ ಮಧುಮಗಳಾಗಿ ಕುಂತಿರುವೆ
ನೀ ಮಧುಮಗಳಾಗಿ ಕುಂತಿರುವೆ...
ಕೂಡಕುಂತು ಎದೆಯಲಿ
ಚಲುವಿನ ಅಂಗಳದಲಿ
ನೀ ನನ್ನ ಜೊತೆಯಲಿ
ಕೂತಿರಲು ಕೊನಯಲಿ
ನಗುನಗುತಲಿ
ನಗುತಿರುವೆ ಪಕ್ಕದಿ
ಕೂಡಕುಂತು ಎದೆಯಲಿ
ಮುತ್ತಿಡುವ ಆಸೆಯ
ಬಚ್ಚಿಡುವೆ ಒಡಲಲಿ
ನಿನ್ನ ಉಸಿರು ಬಂದಿದೆ
ನನ್ನ ಸೇರಲೇಂದಿದೆ
ಬೇಡೆನ್ನಲಾರದೆ
ಏನೇನು ತಿಳಿಯದೆ ಸ್ವೀಕರಿಸಿಹೆ
ಏಲ್ಲಿ ಕಳೆದು ಹೋಗುವೆ
ನಾ ಇಲ್ಲೆ ಕುಳಿತು ಕಾಯುವೆ
ನೀ ಎಲ್ಲೆ ಹೋದರು
ಭೂಮಿ ದುಂಡಗಿರುವುದೆ
ನೀನಿರದ ಇರುಳು
ಸುಡುಬಿಸಿಲ ಮಧ್ಯನ್ಹ
ನಿನ್ನದೆ ಕನವು
ಸುಡುತಿಹುದು ಏದೆಯ
ನೇತ್ತರಲ್ಲಿ ಬರೆಯ ಹೋದೆ
ನೆನೆದು ನೆನೆದು ನಿನ್ನ ಹೆಸರ
ಕಂಬನಿಯಲ್ಲಿ ಬೆರೆಸಿ ಬರೆದೆ
ನಿನ್ನ ಚಿತ್ರವ
ಸಿಗಳು ಅವಳು ಎಂದು
ತಿಳಿದು ತಿಳಿದು ಪ್ರೀತಿಸಿಹೆನು
ಏಲ್ಲೊ ದೂರ ಬರುವುದೆಂದು
ಬೆಳ್ಳಿಬೆಳಕೆಂಬ ಭ್ರಮೆಯು
ಕಡಲೊಂದು ನಡುಗಿದೆ
ಒಲವ ಮುತ್ತು ಒಡಲೊಳಗೆ
ಅರಳದಂತೆ ಬಾಡಿತು ಕೊನೆಗು
ನಗುವ ಕೇಳಿಗೆ
ನೀ ಗುನುಗುತಿರುವೆ ಏನು?
ನೀ ಗುನುಗುತಿರುವೆ ಏನು? ನಾ ನುಡಿಯುತಿರುವೆ ನಿನ್ನ ಹೆಸರನು
ನೀ ನೋಡುತಿರುವೆ ಏನು? ನಾ ನಿನ್ನೆ ನೋಡುತಿರುವೆನು
ಹೇಗೆ ಇರಲಿ ಸುಮ್ಮನೆ; ಏದುರು ನಿನ್ನ ನೊಡದೆ
ಏನೊ ಮಾಡಬೇಕಿದೆ; ತಿಳಿಯದಾಗಿದೆ
ಕಣ್ಣು ಮುಚ್ಚಲಾರೆ ನಾನು, ನೀ ಎದುರು ಬಂದರೆ
ಕಣ್ಣ ಮುಚ್ಚಿಬಿಟ್ಟರೆ ಕ್ಷಣಕೆ ಕಾಣದಾಗುವೆ
ಹೇಗೆ ಶುರು ಮಾಡಲಿ? ಮಾತನಾಡಬೇಕಿದೆ
ನಿನ್ನ ನಗುವ ನೋಡಲೆ ಹಂಬಲಿಸಿರುವೆ
ಮೆಟ್ಟಿಲೇರಿ ಬರುವೆ ನಾನು, ಮುಸ್ಸಂಜೆಯಲ್ಲಿ ಬೆಟ್ಟಕೆ
ಕೊಡಲು ಎದೆಯ ಕಟ್ಟೆಯೋಡೆದು ಚೆಲ್ಲುವ ಪ್ರೀತಿ ನಿನಗೆ
ನಿನ್ನ ಹೆಸರ ನೀರ ಮೇಲೆ ಬರೆಯಲಾಗದೆ
ಎದೆಯ ಒಳಗೆ ಅಚ್ಚೆಹುಯ್ದು ಮುಚ್ಚಿಟ್ಟಿರುವೆ
ಬೀಸೊ ತಂಗಾಳಿ ನೀನು, ಸ್ತಭ್ದನಾಗಿ ಹೋದೆನು ನಾನು
ಒಲವನು ನಿನ್ನ ಬಳಿಗೆ ಓಯ್ದು ತರುವೆನು
ನನ್ನ ಪ್ರೇಮ ದೇವತೆ, ವರವ ನೀಡು ಬೇಗನೆ
ಏನು ಮಾಯೆ ಮಾಡಿಹೆ, ಈ ಪಾಪಿಗೆ
Sunday, February 27, 2011
ಮೇಘದ ಮೇಲೇರಿ ಬರುತಾಳೆ ನನ್ನೋಳು..
ಮೇಘದ ಮೇಲೇರಿ ಬರುತಾಳೆ ನನ್ನೋಳು
ಮಾಗಿಯ ಕಾಲದ ಸವಿಜೇನು
ಶ್ರಾವಣದ ಕೋಗಿಲೆಯ ಕಂಠದ ಸಿರಿಯಿವಳು
ನನ್ನಿ ಹೃದಯವೆ ನಿಂಗೆ ಉಡುಗೊರೆಯು
ಸ್ವಾಗತಕೆ ನೂರು ಜನಪದರ ಹಾಡು
ನೀ ನನ್ನ ಮನದ ಲಾಲಿ ಹಾಡು
ನೀಲಿ ಬಾನಲ್ಲಿ, ಹೊಂಗಿರಣದ ರಥದಲ್ಲಿ
ನನ್ನನ್ನೆ ನೋಡುತ್ತ ನಗುತಿಹಳು
ಚೈತ್ರಾದ ಚಿಲುಮೆಯೆ ಸ್ಪೂರ್ತಿಯ ಸೆಲೆಯೆ
ಬಾ ಬೆಳ್ಳಿ ಬಾನ ಸಾಗರಿಯೆ
ರವಿಯ ರಥದಿ ಚಂದ್ರನ ಸಾರಥಿ
ಬಾ ಬೇಗ ನಿನಗಾಗಿ ನಾ ಕಾಯುತ್ತಿಹೆನೆ
ಹಸಿರ ಕಣಿವೆ ನೀಲಿ ಸಾಗರದ ಮೇಲೆ
ಬೆಳದಿಂಗಳ ತಂಪಾಗಿ ಬಾ ಮಡಿಲಿಗೆ
ನನ್ನ ಉಸಿರಿಗೆ ಉಸಿರಾಗಿ, ಜೀವಕ್ಕೆ ಜೊತೆಯಾಗಿ
ಸೇರುಬಾ ನನ್ನ ಹಂಸಕುಲೆ..
ಸುರೇಂದ್ರ ನಾಡಿಗ್ ಹೆಚ್. ಎಮ್
ಮನ ಕತ್ತಲೆಗೆ ಲಗ್ಗೆ
ಮರುಗಿದ ಮನ ಕತ್ತಲೆಗೆ ಲಗ್ಗೆ
ಬೆಳಕ ಕಂಡರೆ ಅದೇ ಸಿಹಿನೀರ ಬುಗ್ಗೆ
ದೀಪ ಬೆಳಗಿದರೆ ಸುತ್ತಲು ಬೆಳಕು
ಆತ್ಮ ಬೆಳಗಿದರೆ ಲೋಕಕೇ ಹುರುಪು
ಗತಕಾಲಗಳ ವೈಭವವ ನನೆದು ನೆನೆದು
ಮುಂದಿರುವ ಕತ್ತೆಲೆಯ ದಾರಿಗೆ
ದೀಪ ಹಚ್ಚುವುದೆ ಮರೆತೆವು
ಧರ್ಮಗ್ರಂಥಗಳ ಲೋಕ ತರ್ಕಗಳ
ಪಠಿಸುವುದ ಈ ಜೀವನ
ವೇದ ಘೋಷದ ನಡುವೆ
ಉಪನಿಷತ್ತುಗಳ ಗೊಡವೆ ಬೇಡ ಬೇಡ
ನಮ್ಮತನವೆಂಬ ಓಡವೆಯ ಮುಚ್ಚಿಡದೆ
ಧರಿಸಿದರೆ ನೀನೆ ಜನನಾಯಕ
Friday, February 25, 2011
ತಿಳಿದಿರುವುದೊಂದೆ.. ಅದು ನೀನೆ..!!
ಇನ್ನು ನೋಡಬೇಕು ನಿನ್ನ
ನೋಡುತಲೆ ಇರುವೆನು ಚಿನ್ನ
ಈ ದೇಹ ಕರಗಿಹೋದರು..
ಕಣ್ಣೊಂದು ಇರಲಿ ನಿನ್ನ ನೋಡಲೇಂದು
ನೀ ನಗುವೆ ಸುಮ್ಮನೆ ಕುಳಿತು
ನಾ ನಿನ್ನ ನೋಡದ ಹೊರತು
ಇರಲಾರೆ ಇನ್ನು ಸಾಕು ಸಾಕು
ಒಲವ ಸೋನೆ ಸುರಿದಿದೆ ಇಂದು
ಪ್ರೀತಿಸುವೆನು ನಿನ್ನನೆ ಎಂದು
ದೂರ ಎಲ್ಲೂ ಓಡದಿರು
ನಿನ್ನ ಪ್ರೇಮ ಬಿಕ್ಷುಕ ನಾನು
ಸಾವಿರಾರು ಮೈಲಿ ದೂರ
ಈಜಿ, ಓಡಿ ಬಂದು ನೇರ
ನಿನ್ನ ಅಪ್ಪಿ ಹೇಳುವೆ ಮಾತೊಂದ..
ಸಾವಿರಾರು ಜನಗಳ ನಡುವೆ
ನೀನು ಮಾತ್ರ ಕಾಣುವೆ ಏಕೆ?
ಏನು ಎಂದು ತಿಳಿಯದು ನಾಳೆ
ತಿಳಿದಿರುವುದೊಂದೆ.. ಅದು ನೀನೆ..!!
ಸುರೇಂದ್ರ ನಾಡಿಗ್ ಹೆಚ್ ಎಂ
Thursday, February 24, 2011
ಕದ್ದು ನಿನ್ನ ಕಡೆ ನೋಡುವಾಗಲೇ..
Wednesday, February 23, 2011
ಪದಗಳ ಮರೆತ ಕವಿಯಾದೆನು ನಾ..!!
ಕಡಲ ಅಲೆಯ ಏಣಿಸುತ ತೀರದಿ ಬಿಡರ ಹೂಡಿರುವೆ
ಹೃದಯ ಹುಚ್ಚು ಕುದುರೆಯಂತೆ, ಸಾಗಿದೆ ಸಾಗರದಾಚೆ
ಕಚ್ಚಿದೆ ಒಲವು ಹೃದಯಕ್ಕೆ, ಮಂಪರು ಬಡಿದಿದೆ ಮನಸಿಗೆ
ಚಂದಿರನಿಗೆ ಊಟವ ಉಣಬಡಿಸಿ, ಕಟ್ಟಿರುವೆ ಕಡಲ ತಡಿಯಲ್ಲಿ
ಬಂದು ಕೂರು ಜೊತೆಯಲ್ಲಿ, ಖುಷಿಪಡುವೆನು ನಾನು ನಿನ್ನ ನೋಡಿ
ಹೇಗೆಂದು ಹೇಳಲೆ ಈ ಕ್ಷಣದಲ್ಲಿ
ಒಲವೆ ತುಂಬಿದೆ ಕಣಕಣದಲ್ಲಿ
ಕೋಟಿ ಜನರ ಊರಲಿ, ಏಲ್ಲೆಲ್ಲೂ ನೀನೆ
ಕಾಣದಾದೆ ಏನನು, ನೀ ನನ್ನ ಕಂಡ ಕ್ಷಣದಲೆ
ಮಾಟಗಾತಿ ನೀನು, ಜಗವನ್ನೆ ಮರೆಸಿರುವೆ ನನಗೆ
ನೀ ನೆಡೆದು ಬಂದ ನಿಮಿಷ ನಾ ಮರುಳನಾಗಿಹೇ
ಒಲವ ಬೇಲಿ ಹಾಕಿ ನಿನ್ನ ಹೃದಯ ಕೂಡಿಹಾಕಿದೆ
ಹೋರಗೆ ಬಿಡಲಾರೆ ಏಂದು ಈ ಜೀವ ನಶಿಸುವರೆಗೆ
ನೀರವ ಮೌನ ಜಗದಲ್ಲಿ, ಕೇಳಿದೆ ಎಲ್ಲ ನಿನ್ನ ದನಿಯಾಗಿ
ಸುಮ್ಮನೆ ಏನು ಹಾಡಲಿ ನಾ
ಪದಗಳ ಮರೆತ ಕವಿಯಾದೆನು ನಾ
ಕೇಳದ ಒಂದು ಮಾತಿನಲಿ ಎಲ್ಲ ಹೇಳುವೆ ಕೇಳುವೆಯ..?
ತಂಗಾಳಿ ಬೀಸಿದೆ ಹಿತವಾಗಿ, ಬಿಸಿಯೇರುತ ಎದೆಯ ಒಲವಾಗಿ
ಕಣ್ಣ ಮುಂದೆ ಮಂಜಾಗಿ, ಕರಗಿ ಹೂದೆ ನೀರಗಿ
ಹಿಂದೆ ಹಿಂದೆ ಬಂದರೆ ನಾ, ಮರೀಚಿಕೆ ನೀ ಮರೆಯಾದೆ
ಹೇಗೆಂದು ಹೇಳಲಿ ಒಲವನ್ನು ನಾನು
ಎದೆಯೊಳಗಡೆ ಹೊರಗಡೆ ಎಲ್ಲೇಲು ನೀನು
ಸುರೇಂದ್ರ ನಾಡಿಗ್ ಹೆಚ್.ಎಂ








