Wednesday, September 17, 2025

ಆ ನೆನಪಿದೆ...!

ನಿನ್ನ ಮರೇವೇನೆಂದು ಟೊಂಕ ಕಟ್ಟಿ
ನಾ ನಿನ್ನ ನೆನಪನೆಲ್ಲ ಬುತ್ತಿ ಕಟ್ಟಿ
ನನ್ನ ಮನದ ಹಿತ್ತಲಿನಲ್ಲಿ
ಗುಂಡಿತೋಡಿ ಕತ್ತಲಿನಲ್ಲಿ 
ಬಚ್ಚಿ ಇರಿಸಿ, ಮುಚ್ಚಿಬಿಟ್ಟೆ ನೋವಿನಲ್ಲಿ

ಈ ಬರಡು ಹೃದಯದಲ್ಲಿ
ಕಣ್ಣೀರಿಗೆ ಬೆಳೆಯದು ಹಸಿರಿಲ್ಲಿ
ಸ್ವಲ್ಪ ಕೇಳಿ ಎಂದು ಹೇಳಿ 
ಎದ್ದು ನೆಡೆದೆ ಅನಂತದಲ್ಲಿ

ನಿನ್ನ ಸ್ಮೃತಿಯೆ ಸಂಸ್ಕೃತಿ ನನಗೆ
ನೆನಪಿನ ಬುತ್ತಿಯೆ ಬಿತ್ತಿದ ಹಾಗೆ
ಏಕಾಂತ ಏರೆಹುಳುವಾಗಿ, ನೋವೇ ನೀರಾಗಿ
ಬಂಜರಲಿ ಮೌನ ಮಳೆಯಾಗಿ
ಕಾಲ ಕಳೆದು, ಬಳ್ಳಿಯೋಡೆದು
ಹೆಮ್ಮರವಾಗಿದೆ, ಆಕಾಶ ಮುಟ್ಟಿದೆ
ಆ ನೆನಪಿದೆ... ನಿನ್ನದೆ...!

- ಹಂsa 

No comments:

Post a Comment