Wednesday, July 4, 2012

ಮಗುವಂತ ಮನಸೀಗು ಮಕ್ಕ್ಳಾಗಿದೆ !!


ಪರಪಂಚ ಇಂದೇಕೊ ಹಾಳಾಗಿದೆ
ಮೆಷೀನು ಲೈಫು ಬಾಳಾಗಿದೆ
ಈಗೀಗ ಲವ್ವು ಓಲ್ಡಾಗಿದೆ
ನನ್ನ ಮಗುವಂತ ಮನಸೀಗು ಮಕ್ಕ್ಳಾಗಿದೆ !!
ಹುಡುಕಿದರು ಇಷ್ಕು ಇಲ್ಲವಾಗಿದೆ
ಮಗುವಂತ ಮನಸೀಗು ಮಕ್ಕ್ಳಾಗಿದೆ !!

ಹೆಣ್ಮಕ್ಕ್ಳ ವಿಚಾರ ಬೋರಾಗಿದೆ
ಗಂಡೈಕ್ಳ ಸಹವಾಸ ಸಾಕಾಗಿದೆ
ಒಬ್ಬೋಬ್ಬನೆ ಕೂತಾಗ ಸಾವಾಗಿದೆ
ನನ್ನ ಮಗುವಂತ ಮನಸೀಗು ಮಕ್ಕ್ಳಾಗಿದೆ !!
ಗೆಲುವೆಂಬ ಕುದುರೆ ಕನಸಾಗಿದೆ
ಮಗುವಂತ ಮನಸೀಗು ಮಕ್ಕ್ಳಾಗಿದೆ !!

ಯಾವನೊ ಬೇಡಿದಾ ಅಂತ ಮತಹಾಕಿದೆ
ನೋಡೊಕ್ಕೆ ಹಾನೆಸ್ಟು ಎಂದೆನಿಸಿದೆ
ಗೆದ್ದೆತ್ತು ಕೂಡ ಗೆಲುವಾಗಿದೆ
ಹಿಂಡಿ ಹಾಕ್ದೋರ ಮರೆತೋಗಿದೆ
ಈಗ ವೋಟಿಗೊಂದರಂತೆ ಸ್ಕ್ಯಂಡಲ್ ಇದೆ
ಮಗುವಂತ ಮನಸೀಗು ಮಕ್ಕ್ಳಾಗಿದೆ !!

ಮದುವೆಗೆ ಮೂರ್ ತಿಂಗಳ ಡೈವೊರ್ಸಿದೆ
ಕ್ರೆಡಿಟ್ ಕಾರ್ಡ್ ಗೆ ಇ.ಮ್.ಐ ಆಫರ್ ಇದೆ
ಲಿವ್-ಇನ್ನು, ನೈಟ್-ಸ್ಟ್ಯಂಡು ಕಾಮನ್ನಾಗಿದೆ
ನನ್ನ ಮಗುವಂತ ಮನಸೀಗು ಮಕ್ಕ್ಳಾಗಿದೆ !!
ಕಲ್ಚರ್ರು ಬುಕ್ಕಲ್ಲಿ ಸೇಫಾಗಿದೆ
ಮಗುವಂತ ಮನಸೀಗು ಮಕ್ಕ್ಳಾಗಿದೆ !!

ಶಾಂತಿನ ಸೇಲ್ ಮಾಡೋ ಸ್ಕೂಲು ಇದೆ
ಸೆಮಿಸ್ಟ್ರು ಜ್ಞಾನನ ನೂಂಗಾಕಿದೆ
ಹಿಸ್ಟರಿ ಬರೆದೋಂದೆ ಫ಼ೇಲ್ ಆಗಿದೆ
ನನ್ನ ಮಗುವಂತ ಮನಸೀಗು ಮಕ್ಕ್ಳಾಗಿದೆ !!
ಸಾಕಾಯ್ತು ಈ ಚೇಂಜು ಎಂದೆನಿಸಿದೆ
ಮಗುವಂತ ಮನಸೀಗು ಮಕ್ಕ್ಳಾಗಿದೆ !!

                             -ಸುರೇಂದ್ರ ನಾಡಿಗ್

Monday, April 16, 2012

ಹಸಿವು


ಯಾರೊ ಕರೆದ ಕರೆ ನಿನಗೆ ಕೇಳಿತೆ? 
ಹಸಿದು ಕೂಗುತಿರುವುದು ನನಗೆ ಕೇಳಿತೆ...
ಹುಟ್ಟಿಸಿದ ದೈವವು ಹುಲ್ಲನ್ನು ಕೊಡದೆ
ಹಸಿವಾಗಿ ಬಂದು ಕಾಡುತಿಹನೆ

ತಿಳಿದಿರುವೆಯ ನೀನು ಹಸಿವಿನ ನೋವನು?
ನೂರಂತಸ್ತಿನ ಮಹಡಿಯಲ್ಲಿ ಕುಳಿತ ನಿನಗೆ ಹೇಗೆ ತಿಳಿವುದು..
ಕಿತ್ತು ತಿನ್ನೊ ಬಡತನ, ಅದಕು ನಿನ್ನ ಒಡೆತನ
ಪ್ರೀತಿಯ ಆತ್ಮಾಹುತಿಗೆ ನಿನ್ನ ಸಿರಿವಂತಿಯೆ ಸೋಪಾನ

ಸೂರು ನೆರಳಿಲ್ಲದೆ ನರಳಿ ನಡುಗುತಿಹರು
ಹುಟ್ಟಿನಿಂದ ಸಾವಿನೊರೆಗು ನಲಿವೆ ಕಾಣರು
ಗಂಧದ ಕೊರಡಂತೆ ತೆಯ್ಯುವೆ ನೀನು
ಅವರ ಪ್ರತಿ ಬೆವರ ಹನಿ ಸುಮ್ಮನೆ ಬಿಡದು

ನಿನ್ನ ಕಣ್ಣಮುಂದೆಯೆ ನೆತ್ತರು ಹರಿವುದು
ಅವರ ಜೀವ ತಿನ್ನುವ ನಿನಗೆ ಹಸಿವು ತಿಳಿಯದು
ಹಸಿವನು ಹಸಿ-ಹಸಿಯಾಗಿ ಕಂಡಿರುವರು ಅವರು
ಸಿರಿಯ ಮೆಟ್ಟಿ ನಿಲ್ಲೊ ಶಕ್ತಿ ಹಸಿವಿಗಿರುವುದು

                                     -ಸುರೇಂದ್ರ ನಾಡಿಗ್ ೨೦೦೨

Saturday, March 3, 2012

ನಿನ್ನ ಭಾಷೆಯು ಬಾ ಎಂದು ಕರೆದಿದೆ ಬಾ ಕನ್ನಡಿಗ..!!

"ನಿನ್ನ ಪುಟ್ಟ ಮನದಲ್ಲಿ,
ಆಚೆ ಎಲ್ಲೊ ದೂರದಲಿ,
ಈ ಕೂಗು ಕೆಳದ ನಿನಗೀಗಾ..??
ನಿನ್ನ ಭಾಷೆಯು ಬಾ ಎಂದು ಕರೆದಿದೆ ಕೇಳೋ ಕನ್ನಡಿಗ
ನಿನ್ನ ಭಾಷೆಯು ಬಾ ಎಂದು ಕರೆದಿದೆ ಬಾ ಕನ್ನಡಿಗ"


ಈ ನಾಡಿದು ನಿನ್ನಿಂದ
ಸವಿ ಸಂಪಿಗೆ ಪದದಿಂದ
ಕೋಂಚವು ನಿನಗೆ ನೆನಪಿಗೆ ಬರದ??
ಇದು ಸಾವಿನ ಆಚೆಗು ಬಿಡಿಸಲಾಗದ ಬಂಧ


ಮರೆವೆನೆಂದರು ಆಗದೆಯೆ
ಇರಲಾಗದು ಕನ್ನಡ ನುಡಿಯದೆ
ಜಗವನ್ನೆ ಗೆದ್ದರು ನೀನು, ಕರುನಾಡೇ ನಿನ್ನ ತಾಯಿನಾಡು
ಎಲ್ಲಿ ಹೇಗೆ ಇದ್ದರು ನೀನು
ಕನ್ನಡಾಂಬೆ ಕಾಯುವಳು
ಪುಣ್ಯಭೂಮಿ ಈ ಮಣ್ಣು, ಕಣ್ಣು ಮುಚ್ಚಿ ಮರೆವುದೇನು??


"ನಿನ್ನ ಪುಟ್ಟ ಮನದಲ್ಲಿ,
ಆಚೆ ಎಲ್ಲೊ ದೂರದಲಿ,
ಈ ಕೂಗು ಕೆಳದ ನಿನಗೀಗಾ..??
ನಿನ್ನ ಭಾಷೆಯು ಬಾ ಎಂದು ಕರೆದಿದೆ ಕೇಳೋ ಕನ್ನಡಿಗ
ನಿನ್ನ ಭಾಷೆಯು ಬಾ ಎಂದು ಕರೆದಿದೆ ಬಾ ಕನ್ನಡಿಗ"


ಕಾವೇರಿ ಇಲ್ಲಿ ಹರಿದಿಹಳು
ತುಂಗೆ ನಿನ್ನ ತೊಳೆದಿಹಳು
ಸಹ್ಯಾದ್ರಿ ಹಸಿರು ತುಂಬಿಹುದು
ಪ್ರತಿದಿನವು ನುಡಿಜಾತ್ರೆ ನೆಡೆದಿಹುದು
ನೀ ಕಣ್ಣಾಮುಚ್ಚೆ ಆಟ ಕಲಿತು
ಟಪ್ಪಂಗುಚ್ಚಿ ಆಡಿ ನಲಿದು
ಮರಕೋತಿಯಾಡಿ ಕಾಲು ಮುರಿದು
ಏನು ತಿಳಿಯದಂತೆ ಎಲ್ಲ ಮರೆತು
ಈಗ ಎನೊ ತಿಂದು, ಎಲ್ಲೊ ಮಲಗುವುದು ಒಂದು ಬದುಕ...???


"ನಿನ್ನ ಪುಟ್ಟ ಮನದಲ್ಲಿ,
ಆಚೆ ಎಲ್ಲೊ ದೂರದಲಿ,
ಈ ಕೂಗು ಕೆಳದ ನಿನಗೀಗಾ..??
ನಿನ್ನ ಭಾಷೆಯು ಬಾ ಎಂದು ಕರೆದಿದೆ ಕೇಳೋ ಕನ್ನಡಿಗ
ನಿನ್ನ ಭಾಷೆಯು ಬಾ ಎಂದು ಕರೆದಿದೆ ಬಾ ಕನ್ನಡಿಗ"


ಕೇಳು ನಿನ್ನ ಹೃದಯವನು,
ಕನ್ನಡವು ನಿನ್ನ ಕರೆದಿಹುದು
ಆಡಲು ಸಾವಿರ ಭಾಷೆಗಳಿರಬಹುದು
ನಿನ್ನ ಮನಸಿನ ಕನ್ನಡ ಭಾಷೆಯಿದು
ಕನ್ನಡಾಂಬೆ ಕಣ್ಣೀರೊರೆಸೊ ಕೈಗಳಾಗು
ಎದುರು ಬಂದವರ ಮೆಟ್ಟೊ ಶಕ್ತಿಯಾಗು
ಕನ್ನಡಕ್ಕೆ ಕೈಯೆತ್ತಿ ನೀ ಮುನ್ನೆಡೆ
ಈ ನಾಡು ಬರುವುದು ನಿನ್ನಾ ಹಿಂದೆ
ಈ ತಾಯಿನಾಡು ನಿನ್ನ ಕರೆದಿದೆ... ಕನ್ನಡಿಗ


"ನಿನ್ನ ಪುಟ್ಟ ಮನದಲ್ಲಿ,
ಆಚೆ ಎಲ್ಲೊ ದೂರದಲಿ,
ಈ ಕೂಗು ಕೆಳದ ನಿನಗೀಗಾ..??
ನಿನ್ನ ಭಾಷೆಯು ಬಾ ಎಂದು ಕರೆದಿದೆ ಕೇಳೋ ಕನ್ನಡಿಗ
ನಿನ್ನ ಭಾಷೆಯು ಬಾ ಎಂದು ಕರೆದಿದೆ ಬಾ ಕನ್ನಡಿಗ"

                                                       -ಸುರೇಂದ್ರ ನಾಡಿಗ್

Monday, February 13, 2012

ಒಲವು ಅತಿಯಾಗಿ ಮಿತಿಮೀರಿದೆ..


ಸವಿ ಕನಸು ಮೂಡಿದ ಗಳಿಗೆ ಇದಾಗಿದೆ
ನಿನ್ನ ನಗುವ ನೋಡಿ ಮನಸಿಗೆ ಹಾಯಾಗಿದೆ
ಏನಾಗಿದೆ? ಏನೋ ಆಗಿದೆ...
ನಿನ್ನ ಹೆಸರು ಕೂಗೊ ಬಯಕೆ ಮನಕೆ
ಮಿತಿ ಮೀರಿ ಅತಿಯಾಗಿದೆ
ಹೇಗೊ ಆಗಿದೆ.. ಹೇಗೇಗೊ ಆಗಿದೆ
ನಿನ್ನದೆನೊ ಸೆಳೆವು, ಬಾರಿ ಒಲವು ಮನದಿ
ಅತಿಯಾಗಿ ಮಿತಿಮೀರಿದೆ


ಯಾವ ಸೀಮೆ ದೇವತೆ ನೀನು, ಒಲವ ವರ್ಷ ಸುರಿಸಿದೆ
ಢವ ಢವ ಹೃದಯಕೆ ಇನ್ನು ಸಾಲದೆಂದು ನಾ ಬೇಡಲು ಬಂದೆ
ಕೋವಿಯನ್ನು ಮುಂದೆ ಇರಿಸಿ ಸುಡುವುದೇನು ಪ್ರೇಮವೆಂದೆ
ಸಾವಿಗು ಮಂಪರು ಬಡಿದು ಪೀತಿಗೆ ಪರವಶನಾದೆ
ಏನಾಗಿದೆ? ಏನೋ ಆಗಿದೆ...
ನಿನ್ನ ಜೊತೆಗೆ ಗಳಿಗೆ ಕಳೆಯೋ ಹರಕೆ ಮನಕೆ
ಮಿತಿ ಮೀರಿ ಅತಿಯಾಗಿದೆ
ಹೇಗೊ ಆಗಿದೆ.. ಹೇಗೇಗೊ ಆಗಿದೆ
ನಿನ್ನದೆ ಹರೆಯ ಕರೆಯ ಕೇಳೊ ಆಸೆ ಮನದಿ
ಅತಿಯಾಗಿ ಮಿತಿಮೀರಿದೆ


ನನ್ನೋಲವು ಊರಿದು ಗೆಳತಿ, ನೀ ಏಂದೊ ಇದರ ರಾಣಿಯಾದೆ
ಪ್ರತಿ ಅಣುವಿನಲ್ಲು ನಾ ಬರೆದ ಹೆಸರು ನಿಂದೆ
ಸುಡುಗಾಡು ಮರಳುಗಾಡು ಮಲೆನಾಡಗಿದೆ
ನೀ ಎರೆದ ಒಲವಲಿ ಬೆರೆತು ನಾನೇ ಕಡಲಾದೆ
ಏನಾಗಿದೆ? ಏನೋ ಆಗಿದೆ...
ನಿನ್ನನೆ ಸೇರೊ ಬಯಕೆ ಮನಕೆ
ಮಿತಿ ಮೀರಿ ಅತಿಯಾಗಿದೆ
ಹೇಗೊ ಆಗಿದೆ.. ಹೇಗೇಗೊ ಆಗಿದೆ
ನಿನ್ನದೆ ನಗುವು, ಮನದಿ ನಲಿವ ಒಲವು
ಅತಿಯಾಗಿ ಮಿತಿಮೀರಿದೆ


                                   -ಸುರೇಂದ್ರ ನಾಡಿಗ್

Wednesday, January 18, 2012

ಅಕಾರ ವಿಕಾರ ನನ್ನಂತರಾಳ


ಕನಸು ಕಾಣುವ ಕರ್ಮ
ಸಾವು ತಿಳಿದು ಬಾಳುವ ಜನ್ಮ
ಅಕಾರ ವಿಕಾರ ನನ್ನಂತರಾಳ


ಕುದಿಸಿದ ಹಾಲು ಕಳೆದು ಹುಳುವಾದಂತೆ
ದಿನಗಳೆದಂತೆ ನನ್ನ ಮನಸು ಹೊಲಸು
ಕಾಯಿಸಿದ ಕಬ್ಬಿಣವು ಕಳೆಗುಂದಿದಂತೆ
ಚೂರು ಚೂರು ನನ್ನಿ ಬಿರುಸು ಕನಸು


ಯಾರು ಅರಿಯದ ಮರ್ಮ, ತಿಳಿಯಲಾಗದ ತರ್ಕ
ಬದುಕ ಬಂಡಿಯು ತೆವಳೊ ಪರದೇಶಿ ಪರ್ವ
ಸಾಧನೆಗೂ ಸಂಧಾನ, ಮನಸಿಗೋ ಮಂಥನ
ನೋವು ನಲಿವಿದು ಇಲ್ಲಿ ನಿರಾಳ ನರಕ..!!


ಸರಿ ಕ್ಷಣವು ಏಕೆ ದೇವರನಾಮ, ಹೇಜ್ಜೆಗೊ ಓಮ್ಮೆ ರಾಮ ರಾಮ
ಸ್ಮ್ರುತಿಪಟಲ ಸಖಿಧಾಮ, ಜೊಳ್ಳು ತುಂಬಿದ ದೇಹದಿ ಸತ್ಯಕಾಮ
ತೊರೆಬಡಿದ ತೀರದಲಿ, ತೆರೆಯೆಳೆದ ಮಂಟಪದಿ
ಕುಂದದಾ ಕಂಬನಿಗೆ ಇಲ್ಲ ಕ್ಷಾಮ..!!


ನಶ್ವರತೆಯ ಕಾವಲೇ ಧರ್ಮ?
ಸುರಸ್ಪರ್ಶ ಸಡಿಲಿಪುದೆ ಸಂಘರ್ಷ?
ಅಕಾರ ವಿಕಾರ ನನ್ನಂತರಾಳ


                  - ಸುರೇಂದ್ರ ನಾಡಿಗ್