Saturday, July 10, 2021

ಒಂದೇ ಒಂದು ಲೋಕ ನೀನೇ

¶ನನ್ನ ಒಂದೇ ಒಂದು ಲೋಕ ನೀನೇ
ಲೋಕಕೆಲ್ಲ ಅಂದ ನೀನೇ
ಅಂದಕ್ಕೆಲ್ಲ ಹೃದಯ ನೀನೇ
ನೀ ನನಗೆ ಸ್ವಂತನೆ!?

ಚಂದದ ಮುಂಗೋಪ ನೀನೇ
ಕೋಪತಂದ ದೀಪ ನೀನೇ
ದೀಪದ ಹೊಳಪು ನೀನೇ
ನನ್ನ ಪ್ರಾಣನ ಬೆಳಗಿಸಿದೆ

ನಿನ್ನ ನಿನ್ನಂತೆ ಪ್ರೀತಿಸಲಾ?
ನನ್ನ ನಿನಗಾಗಿ ಅರ್ಪಿಸಲಾ?
ಪ್ರತಿಕ್ಷಣದಲ್ಲೂ ನಿನ್ನ ಕೂಡಿರಲಾ?
ಜನ್ಮ ಜನ್ಮಕು ಜೊತೆಯಾಗಲಾ?¶

ಕಣ್ಣಿನಲ್ಲೇ ನಿತ್ಯವೂ ನಿನ್ನೆ ಅಪ್ಪಿಕೊಳ್ಳಲ?
ಕಾಲವೆಲ್ಲ ನಾನು ನಿನಗೆ ಕಾವಲಾಗಲ?
ನೀ ಮರೆತ ಸಂತೋಷವ ನಾ ಮತ್ತೆ ಹಂಚಲ?
ಎಂದೆಂದಿಗೂ ನೆನೆವಂತೆ ಸಂತೋಷದಿ ಮುಳುಗಿಸಲ?
ಕಿರುನಗೆಯನ್ನೇ ಕಾಲ್ಗೆಜ್ಜೆಮಾಡಿ ಕಟ್ಟಲ?

ಕ್ಷಣಕೆ ನೀನು ಕಾಣದಿದ್ದರು ನಾನು ತಡೆಯೆನೆ
ಒಂದು ಹೆಜ್ಜೆ ದೂರಹೋದರು ನನ್ನುಸಿರಾಡದೆ
ಬಿಸಿಲು ನಿನ್ನ  ಸ್ಪರ್ಶಿಸಿದರೆ ನಾ ಬೆವರುವೆ
ಚಳಿ ನಿನ್ನು ತಾಕಿದರೆ, ನನ್ನಲಿ ನಡುಕವೇ
ದೇಹ ನಿನದೆ, ನಿನ್ನ ಪ್ರಾಣ ನಾನೇನೆ

-ಸುರೇಂದ್ರ ನಾಡಿಗ್

ಹಾಡು: ಒಕೆ ಒಕ ಲೋಕಮ್ (ಶಶಿ)
ತೆಲುಗು ಸಾಹಿತ್ಯ: ಚಂದ್ರ ಬೋಸ್

Saturday, March 20, 2021

ನಾ ಬುದ್ಧನಾಗಿರುವೆ!

ಬರೆಯದಾದೆ ನಾನು ಬದುಕು ಏನೆಂದು
ತಿಳಿದಿರುವತನಕ ಸಾವು ಮುಂದೆಂದು
ಯಕ್ಷಪ್ರಶ್ನೆ ನಾನು ನನಗೆಂದು
ಉತ್ತರವೇ ಇಲ್ಲದ ಜಗನಂದು 

ಈ ಕ್ಷಣಕೆ ಏಕೋ ಕೋಪ ಪ್ರತಾಪ
ಮರುಕ್ಷಣಕೆ ಬದಲಾದ ರೂಪ
ಜೀವನವು ಸುಖವ ಹುಡುಕುವ ನಿಕ್ಷೇಪ
ಆದಿಯಲೇ ನೆಡೆಯುವ ಸಮಾರೋಪ

ಬಗೆದಷ್ಟೂ ಆಳಕೆ ಇಳಿಯುವ ಒಲವೇ
ನೀ ಧೃತಿಚಿತ್ತವೇ? ನನ್ನ ಆತ್ಮಬಲವೇ?
ದೂರ ಸರಿದರು ಕಾಡಲೇಕೆ ಬರುವೆ
ನಿನ್ನ ಮೀರಿ ನಾ ಬುದ್ಧನಾಗಿರುವೆ!

-ಸುರೇಂದ್ರ