ಕನಸು ಕಾಣುವ ಕರ್ಮ
ಸಾವು ತಿಳಿದು ಬಾಳುವ ಜನ್ಮ
ಅಕಾರ ವಿಕಾರ ನನ್ನಂತರಾಳ
ಕುದಿಸಿದ ಹಾಲು ಕಳೆದು ಹುಳುವಾದಂತೆ
ದಿನಗಳೆದಂತೆ ನನ್ನ ಮನಸು ಹೊಲಸು
ಕಾಯಿಸಿದ ಕಬ್ಬಿಣವು ಕಳೆಗುಂದಿದಂತೆ
ಚೂರು ಚೂರು ನನ್ನಿ ಬಿರುಸು ಕನಸು
ಯಾರು ಅರಿಯದ ಮರ್ಮ, ತಿಳಿಯಲಾಗದ ತರ್ಕ
ಬದುಕ ಬಂಡಿಯು ತೆವಳೊ ಪರದೇಶಿ ಪರ್ವ
ಸಾಧನೆಗೂ ಸಂಧಾನ, ಮನಸಿಗೋ ಮಂಥನ
ನೋವು ನಲಿವಿದು ಇಲ್ಲಿ ನಿರಾಳ ನರಕ..!!
ಸರಿ ಕ್ಷಣವು ಏಕೆ ದೇವರನಾಮ, ಹೇಜ್ಜೆಗೊ ಓಮ್ಮೆ ರಾಮ ರಾಮ
ಸ್ಮ್ರುತಿಪಟಲ ಸಖಿಧಾಮ, ಜೊಳ್ಳು ತುಂಬಿದ ದೇಹದಿ ಸತ್ಯಕಾಮ
ತೊರೆಬಡಿದ ತೀರದಲಿ, ತೆರೆಯೆಳೆದ ಮಂಟಪದಿ
ಕುಂದದಾ ಕಂಬನಿಗೆ ಇಲ್ಲ ಕ್ಷಾಮ..!!
ನಶ್ವರತೆಯ ಕಾವಲೇ ಧರ್ಮ?
ಸುರಸ್ಪರ್ಶ ಸಡಿಲಿಪುದೆ ಸಂಘರ್ಷ?
ಅಕಾರ ವಿಕಾರ ನನ್ನಂತರಾಳ
- ಸುರೇಂದ್ರ ನಾಡಿಗ್