Tuesday, April 19, 2011

ಕಾಣದ ಕನ್ನಿಕೆ ನಲ್ಮೆಯ ನಲ್ಲೆ..!!


ಕಾಣದ ಕನ್ನಿಕೆ ನಲ್ಮೆಯ ನಲ್ಲೆ
ನೀ ಬರುವೆ ಎಂದೆ ಕಾದಿರುವೆ
ಮಳೆಯು ಸೋನೆ ಸುರಿಸಿದೆ ಇಲ್ಲೆ
ನೀ ಏಲ್ಲಿಹೆ ಹೇಳು ನಾ ಬರುವೆ
ಮುಚ್ಚಿದ ಚಿಪ್ಪಲಿ ಮುತ್ತಿಡುವಂತೆ
ನನ್ನಿ ಬಂಧದಿ ಬೆಚ್ಚನೆ ಇಡುವೆ


ಇರಚಲು ಹೊಡೆದಿದೆ ತೆಂಕಣದಿಂದ
ಮೇಘವು ಹೊರಳಿದೆ ಬಡಗಣದಿಂದ
ಅರಳಿ ಮರದಡಿ ನಿಂತುಬಿಡು
ನನಗೆಂದು ಸ್ವಲ್ಪವೇ ಜಾಗವಿಡು
ಬೇಗನೆ ಬರುವೆ ನೋಡೊ ಆತುರವಿಹುದು
ಕೈಯಲಿ ಕೆಂಪನೆ ಗುಲಾಬಿಯಿಹುದು


ಕೆರೆಯು ತುಂಬಿದೆ ನಿನಗೇಳಲೆ ಬೇಕು
ಕೋಡಿಯ ಮಧ್ಯಕೆ ನಿನ್ನ ಕರೆತರಬೇಕು
ಬೆದರಿದ ಬೊಂಬೆ ಕಣ್ಮುಚ್ಚುವೆ ನೀನು
ಕಾಲು ನಡುಗಿಸಿ ಜಾರಿಸುವೆನು ನಾನು
ಕೋಟೆ ಮಾರುತಿಯ ನೆನೆದು ನೀನು
ಹಿಡಿದಪ್ಪುವೆ ತೋಳನು, ನನ್ನನ್ನು


ಕಾಣದ ಕನ್ನಿಕೆ ನಲ್ಮೆಯ ನಲ್ಲೆ
ನೀ ಎಲ್ಲೆ ಇರುವೆ ನಾ ಬಂದಿರುವೆ
ಪೇಟೆಬೀದಿಯಲಿ ಮದುವೆಯ ದಿಬ್ಬಣ ಒಂದಿದೆ
ನಾ ಅದನು ದಾಟಿ ಬರುತಿರುವೆ
ನನಗ್ ತಿಳಿಯದ ಮದುವೆ ಯಾವುದೋ ಕಾಣುವೆ
ನೀ ಮಧುಮಗಳಾಗಿ ಕುಂತಿರುವೆ
ನೀ ಮಧುಮಗಳಾಗಿ ಕುಂತಿರುವೆ...

ಕೂಡಕುಂತು ಎದೆಯಲಿ



ಚಲುವಿನ ಅಂಗಳದಲಿ
ನೀ ನನ್ನ ಜೊತೆಯಲಿ
ಕೂತಿರಲು ಕೊನಯಲಿ
ನಗುನಗುತಲಿ


ನಗುತಿರುವೆ ಪಕ್ಕದಿ
ಕೂಡಕುಂತು ಎದೆಯಲಿ
ಮುತ್ತಿಡುವ ಆಸೆಯ
ಬಚ್ಚಿಡುವೆ ಒಡಲಲಿ


ನಿನ್ನ ಉಸಿರು ಬಂದಿದೆ
ನನ್ನ ಸೇರಲೇಂದಿದೆ
ಬೇಡೆನ್ನಲಾರದೆ
ಏನೇನು ತಿಳಿಯದೆ ಸ್ವೀಕರಿಸಿಹೆ


ಏಲ್ಲಿ ಕಳೆದು ಹೋಗುವೆ
ನಾ ಇಲ್ಲೆ ಕುಳಿತು ಕಾಯುವೆ
ನೀ ಎಲ್ಲೆ ಹೋದರು
ಭೂಮಿ ದುಂಡಗಿರುವುದೆ


ನೀನಿರದ ಇರುಳು
ಸುಡುಬಿಸಿಲ ಮಧ್ಯನ್ಹ
ನಿನ್ನದೆ ಕನವು
ಸುಡುತಿಹುದು ಏದೆಯ


ನೇತ್ತರಲ್ಲಿ ಬರೆಯ ಹೋದೆ
ನೆನೆದು ನೆನೆದು ನಿನ್ನ ಹೆಸರ
ಕಂಬನಿಯಲ್ಲಿ ಬೆರೆಸಿ ಬರೆದೆ
ನಿನ್ನ ಚಿತ್ರವ


ಸಿಗಳು ಅವಳು ಎಂದು
ತಿಳಿದು ತಿಳಿದು ಪ್ರೀತಿಸಿಹೆನು
ಏಲ್ಲೊ ದೂರ ಬರುವುದೆಂದು
ಬೆಳ್ಳಿಬೆಳಕೆಂಬ ಭ್ರಮೆಯು


ಕಡಲೊಂದು ನಡುಗಿದೆ
ಒಲವ ಮುತ್ತು ಒಡಲೊಳಗೆ
ಅರಳದಂತೆ ಬಾಡಿತು ಕೊನೆಗು
ನಗುವ ಕೇಳಿಗೆ

ನೀ ಗುನುಗುತಿರುವೆ ಏನು?



ನೀ ಗುನುಗುತಿರುವೆ ಏನು? ನಾ ನುಡಿಯುತಿರುವೆ ನಿನ್ನ ಹೆಸರನು
ನೀ ನೋಡುತಿರುವೆ ಏನು? ನಾ ನಿನ್ನೆ ನೋಡುತಿರುವೆನು
ಹೇಗೆ ಇರಲಿ ಸುಮ್ಮನೆ; ಏದುರು ನಿನ್ನ ನೊಡದೆ
ಏನೊ ಮಾಡಬೇಕಿದೆ; ತಿಳಿಯದಾಗಿದೆ


ಕಣ್ಣು ಮುಚ್ಚಲಾರೆ ನಾನು, ನೀ ಎದುರು ಬಂದರೆ
ಕಣ್ಣ ಮುಚ್ಚಿಬಿಟ್ಟರೆ ಕ್ಷಣಕೆ ಕಾಣದಾಗುವೆ
ಹೇಗೆ ಶುರು ಮಾಡಲಿ? ಮಾತನಾಡಬೇಕಿದೆ
ನಿನ್ನ ನಗುವ ನೋಡಲೆ ಹಂಬಲಿಸಿರುವೆ


ಮೆಟ್ಟಿಲೇರಿ ಬರುವೆ ನಾನು, ಮುಸ್ಸಂಜೆಯಲ್ಲಿ ಬೆಟ್ಟಕೆ
ಕೊಡಲು ಎದೆಯ ಕಟ್ಟೆಯೋಡೆದು ಚೆಲ್ಲುವ ಪ್ರೀತಿ ನಿನಗೆ
ನಿನ್ನ ಹೆಸರ ನೀರ ಮೇಲೆ ಬರೆಯಲಾಗದೆ
ಎದೆಯ ಒಳಗೆ ಅಚ್ಚೆಹುಯ್ದು ಮುಚ್ಚಿಟ್ಟಿರುವೆ


ಬೀಸೊ ತಂಗಾಳಿ ನೀನು, ಸ್ತಭ್ದನಾಗಿ ಹೋದೆನು ನಾನು
ಒಲವನು ನಿನ್ನ ಬಳಿಗೆ ಓಯ್ದು ತರುವೆನು
ನನ್ನ ಪ್ರೇಮ ದೇವತೆ, ವರವ ನೀಡು ಬೇಗನೆ
ಏನು ಮಾಯೆ ಮಾಡಿಹೆ, ಈ ಪಾಪಿಗೆ