Sunday, February 27, 2011

ಮೇಘದ ಮೇಲೇರಿ ಬರುತಾಳೆ ನನ್ನೋಳು..



ಮೇಘದ ಮೇಲೇರಿ ಬರುತಾಳೆ ನನ್ನೋಳು
ಮಾಗಿಯ ಕಾಲದ ಸವಿಜೇನು
ಶ್ರಾವಣದ ಕೋಗಿಲೆಯ ಕಂಠದ ಸಿರಿಯಿವಳು
ನನ್ನಿ ಹೃದಯವೆ ನಿಂಗೆ ಉಡುಗೊರೆಯು


ಸ್ವಾಗತಕೆ ನೂರು ಜನಪದರ ಹಾಡು
ನೀ ನನ್ನ ಮನದ ಲಾಲಿ ಹಾಡು
ನೀಲಿ ಬಾನಲ್ಲಿ, ಹೊಂಗಿರಣದ ರಥದಲ್ಲಿ
ನನ್ನನ್ನೆ ನೋಡುತ್ತ ನಗುತಿಹಳು


ಚೈತ್ರಾದ ಚಿಲುಮೆಯೆ ಸ್ಪೂರ್ತಿಯ ಸೆಲೆಯೆ
ಬಾ ಬೆಳ್ಳಿ ಬಾನ ಸಾಗರಿಯೆ
ರವಿಯ ರಥದಿ ಚಂದ್ರನ ಸಾರಥಿ
ಬಾ ಬೇಗ ನಿನಗಾಗಿ ನಾ ಕಾಯುತ್ತಿಹೆನೆ


ಹಸಿರ ಕಣಿವೆ ನೀಲಿ ಸಾಗರದ ಮೇಲೆ
ಬೆಳದಿಂಗಳ ತಂಪಾಗಿ ಬಾ ಮಡಿಲಿಗೆ
ನನ್ನ ಉಸಿರಿಗೆ ಉಸಿರಾಗಿ, ಜೀವಕ್ಕೆ ಜೊತೆಯಾಗಿ
ಸೇರುಬಾ ನನ್ನ ಹಂಸಕುಲೆ..


                    ಸುರೇಂದ್ರ ನಾಡಿಗ್ ಹೆಚ್. ಎಮ್

ಮದುವೆ



ಮದುವೆಯ ಬಂಧನ
ಹೃದಯಗಳ ಸಂಗಮ
ಜೀವನದ ಗೀತೆಗೆ
ಪ್ರೀತಿಯ ಸರಿಗಮ


ದೂರದ ದಿನಗಳ ಹಿಂದಿಕ್ಕಿ
ಜೊತೆಗೆ ಸಾಗಿವೆ ಜೋಡಿ ಹಕ್ಕಿ
ಸಂಸ್ಕೃತಿ ಸಂಬಂಧ ಬೆಳೆಸುವ ಬಂಧ
ಸಂಸಾರ ಗೀತೆಯ ಸಂಗೀತ ನಾದ


ಓಡೋ ಜೀವಗಳ ಜೋಡಿ ಮಾಡಿ
ಕೋಡುವ ಲೋಕಕೆ ಕೋಡುಗೆಯ..
ಪ್ರೀತಿಯ..

ಮನ ಕತ್ತಲೆಗೆ ಲಗ್ಗೆ




ಮರುಗಿದ ಮನ ಕತ್ತಲೆಗೆ ಲಗ್ಗೆ
ಬೆಳಕ ಕಂಡರೆ ಅದೇ ಸಿಹಿನೀರ ಬುಗ್ಗೆ
ದೀಪ ಬೆಳಗಿದರೆ ಸುತ್ತಲು ಬೆಳಕು
ಆತ್ಮ ಬೆಳಗಿದರೆ ಲೋಕಕೇ ಹುರುಪು

ಗತಕಾಲಗಳ ವೈಭವವ ನನೆದು ನೆನೆದು
ಮುಂದಿರುವ ಕತ್ತೆಲೆಯ ದಾರಿಗೆ
ದೀಪ ಹಚ್ಚುವುದೆ ಮರೆತೆವು

ಧರ್ಮಗ್ರಂಥಗಳ ಲೋಕ ತರ್ಕಗಳ
ಪಠಿಸುವುದ ಈ ಜೀವನ
ವೇದ ಘೋಷದ ನಡುವೆ
ಉಪನಿಷತ್ತುಗಳ ಗೊಡವೆ ಬೇಡ ಬೇಡ

ನಮ್ಮತನವೆಂಬ ಓಡವೆಯ ಮುಚ್ಚಿಡದೆ
ಧರಿಸಿದರೆ ನೀನೆ ಜನನಾಯಕ


Friday, February 25, 2011

ತಿಳಿದಿರುವುದೊಂದೆ.. ಅದು ನೀನೆ..!!



ಇನ್ನು ನೋಡಬೇಕು ನಿನ್ನ
ನೋಡುತಲೆ ಇರುವೆನು ಚಿನ್ನ
ಈ ದೇಹ ಕರಗಿಹೋದರು..
ಕಣ್ಣೊಂದು ಇರಲಿ ನಿನ್ನ ನೋಡಲೇಂದು

ನೀ ನಗುವೆ ಸುಮ್ಮನೆ ಕುಳಿತು
ನಾ ನಿನ್ನ ನೋಡದ ಹೊರತು
ಇರಲಾರೆ ಇನ್ನು ಸಾಕು ಸಾಕು

ಒಲವ ಸೋನೆ ಸುರಿದಿದೆ ಇಂದು
ಪ್ರೀತಿಸುವೆನು ನಿನ್ನನೆ ಎಂದು
ದೂರ ಎಲ್ಲೂ ಓಡದಿರು
ನಿನ್ನ ಪ್ರೇಮ ಬಿಕ್ಷುಕ ನಾನು

ಸಾವಿರಾರು ಮೈಲಿ ದೂರ
ಈಜಿ, ಓಡಿ ಬಂದು ನೇರ
ನಿನ್ನ ಅಪ್ಪಿ ಹೇಳುವೆ ಮಾತೊಂದ..
ಸಾವಿರಾರು ಜನಗಳ ನಡುವೆ
ನೀನು ಮಾತ್ರ ಕಾಣುವೆ ಏಕೆ?
ಏನು ಎಂದು ತಿಳಿಯದು ನಾಳೆ
ತಿಳಿದಿರುವುದೊಂದೆ.. ಅದು ನೀನೆ..!!

                         ಸುರೇಂದ್ರ ನಾಡಿಗ್ ಹೆಚ್ ಎಂ

Thursday, February 24, 2011

ಕದ್ದು ನಿನ್ನ ಕಡೆ ನೋಡುವಾಗಲೇ..

ನೆಡೆ ನೆಡೆ ನೆಡೆದು, ತುಡಿ ತುಡಿ ತುಡಿದು
ತಡವರಿಸಿತು ಹೃದಯ, ನಿನ್ನ ನೋಡಿದಾಗ
ನುಸು ನುಸು ಕನಸು, ಕ್ಷಣ ಕ್ಷಣಕು
ತೇವಗೊಂದಿದೆ ತನುವು, ಈಗ ಜೊತೆಯಾಗು
ಕಾಡಿದೆ ಮತ್ತೆ ಕಾಡಿದೆ, ಪ್ರೀತಿಯು ಶುರುವಾಗಿದೆ
ಕದ್ದು ನಿನ್ನ ಕಡೆ ನೋಡುವಾಗಲೇ, ಏನೊ ಒಂಥರ ಆಗಿದೆ

ಕೆಂದಾವರೆ ತೋಟದ ಒಡೆಯ ನಾನು ಇಲ್ಲಿಹೆ
ಮುದ್ದು ಗುಮ್ಮನಂತೆ ಬಂದು ನೀ ಹೃದಯ ಕದ್ದು ಒಯ್ದಿಹೆ
ಮುಂಜಾವೆದ್ದು ನಿನ್ನ ನನೆದು ನಿದಿರೆಗೆ ಮತ್ತೆ ಜಾರಿದೆ
ಕಣ್ಣಮುಚ್ಚಿ ತೆರೆಯುವ ತನಕ ನಿನ್ನ ಕನಸೆ ತುಂಬಿದೆ
ಮುಗಿಯದ ಮಾಯೆಯಿದು, ಪ್ರೇಮದ ಆಟವಿದು
ನೀ ಯಾರೆಂದು ಕೇಳಿದರೆ ಹೆಸರು ಹೇಳಲಾಗದು

ರಚ್ಚೆ ಹಿಡಿದೆ ನಿನಗಾಗಿ, ಕಚ್ಚಿದೆ ಒಲವು ಹಿತವಾಗಿ
ಮೆಚ್ಚಿರುವ ಮನಸೆ ನಿನ್ನ ನೆಚ್ಚಿರುವೆ ಕನಸೆ
ಕೂಗಿ ಹೇಳಬೇಕೆ ನಾನು? ಈ ಮೌನ ತಿಳಿಸದೇನು?
ನಿನ್ನ ನೆನೆದ ಕತ್ತಲು ಕೂಡ ಹಾಗೆಯೆ ಬೆಳಕಾಯ್ತು
ಗಡಿಯಾರ ನೆಡೆಯದೆ ನಿಂತು, ನೀ ಏಲ್ಲಿ ಏನು ಏಂತು?
ಹೇಳಿದೆ ನನ್ನಲಿ ಬಂದು, ನನ್ನ ಉಸಿರು ನೀನು ಏಂದು

ತಂಗಾಳಿ ನನ್ನ ಮನಸಿಂದು, ಬಿರುಗಾಳಿ ತಂದೆ ನೀನು
ಶಾಂತ ಕಡಲಂತೆ ನಾನು, ಸುನಾಮಿತಂತು ಒಲವು
ಸುಳಿಗೆ ಸಿಕ್ಕ ನಾವಿಕ ನಾನು, ಬದುಕೊ ಆಸೆ ನೀನು
ಪ್ರೇಮವೇ ಜೀವನದ ಮೊದಲ ಪಾಠವೊ..?

ಸುರೇಂದ್ರ ನಾಡಿಗ್ ಹೆಚ್ ಏಂ

Wednesday, February 23, 2011

ಪದಗಳ ಮರೆತ ಕವಿಯಾದೆನು ನಾ..!!

ನಿನ್ನ ಬರುವಿಕೆಗೆ ಕಾದಿರುವೆ, ಕ್ಷಣವು ಪರಿತಪಿಸಿರುವೆ
ಕಡಲ ಅಲೆಯ ಏಣಿಸುತ ತೀರದಿ ಬಿಡರ ಹೂಡಿರುವೆ
ಹೃದಯ ಹುಚ್ಚು ಕುದುರೆಯಂತೆ, ಸಾಗಿದೆ ಸಾಗರದಾಚೆ
ಕಚ್ಚಿದೆ ಒಲವು ಹೃದಯಕ್ಕೆ, ಮಂಪರು ಬಡಿದಿದೆ ಮನಸಿಗೆ

ಚಂದಿರನಿಗೆ ಊಟವ ಉಣಬಡಿಸಿ, ಕಟ್ಟಿರುವೆ ಕಡಲ ತಡಿಯಲ್ಲಿ
ಬಂದು ಕೂರು ಜೊತೆಯಲ್ಲಿ, ಖುಷಿಪಡುವೆನು ನಾನು ನಿನ್ನ ನೋಡಿ
ಹೇಗೆಂದು ಹೇಳಲೆ ಈ ಕ್ಷಣದಲ್ಲಿ
ಒಲವೆ ತುಂಬಿದೆ ಕಣಕಣದಲ್ಲಿ

ಕೋಟಿ ಜನರ ಊರಲಿ, ಏಲ್ಲೆಲ್ಲೂ ನೀನೆ
ಕಾಣದಾದೆ ಏನನು, ನೀ ನನ್ನ ಕಂಡ ಕ್ಷಣದಲೆ
ಮಾಟಗಾತಿ ನೀನು, ಜಗವನ್ನೆ ಮರೆಸಿರುವೆ ನನಗೆ
ನೀ ನೆಡೆದು ಬಂದ ನಿಮಿಷ ನಾ ಮರುಳನಾಗಿಹೇ
ಒಲವ ಬೇಲಿ ಹಾಕಿ ನಿನ್ನ ಹೃದಯ ಕೂಡಿಹಾಕಿದೆ
ಹೋರಗೆ ಬಿಡಲಾರೆ ಏಂದು ಈ ಜೀವ ನಶಿಸುವರೆಗೆ

ನೀರವ ಮೌನ ಜಗದಲ್ಲಿ, ಕೇಳಿದೆ ಎಲ್ಲ ನಿನ್ನ ದನಿಯಾಗಿ
ಸುಮ್ಮನೆ ಏನು ಹಾಡಲಿ ನಾ
ಪದಗಳ ಮರೆತ ಕವಿಯಾದೆನು ನಾ
ಕೇಳದ ಒಂದು ಮಾತಿನಲಿ ಎಲ್ಲ ಹೇಳುವೆ ಕೇಳುವೆಯ..?

ತಂಗಾಳಿ ಬೀಸಿದೆ ಹಿತವಾಗಿ, ಬಿಸಿಯೇರುತ ಎದೆಯ ಒಲವಾಗಿ
ಕಣ್ಣ ಮುಂದೆ ಮಂಜಾಗಿ, ಕರಗಿ ಹೂದೆ ನೀರಗಿ
ಹಿಂದೆ ಹಿಂದೆ ಬಂದರೆ ನಾ, ಮರೀಚಿಕೆ ನೀ ಮರೆಯಾದೆ
ಹೇಗೆಂದು ಹೇಳಲಿ ಒಲವನ್ನು ನಾನು
ಎದೆಯೊಳಗಡೆ ಹೊರಗಡೆ ಎಲ್ಲೇಲು ನೀನು

ಸುರೇಂದ್ರ ನಾಡಿಗ್ ಹೆಚ್.ಎಂ

ಚುಂಬಕ ಚಲುವೆ ಚುಂಬಿಸಲೆ..?

ಚುಂಬಕ ಚಲುವೆ ಚುಂಬಿಸಲೆ..?
ಕರೆಯೊಂದ ನೀಡು.. ನಾ ಬರುವೆ
ಹಗಲೊ ಇರುಳೊ ಆದರೇನು
ನಿನ್ನ ಏದುರು ಬಂದು ನಿಲ್ಲುವೇ
ಏನು ಮಾತನಾಡದೆ ತಬ್ಬಿಹಿಡಿಯುವೆ

ಹೆಚ್ಚು ಕಡಿಮೆ ದಿನ ಪೂರ ಒಂಟಿಯಾಗೆ ಕಳೆದೆನು
ನಿನ್ನ ನೆನಪಿನಲ್ಲಿ ನನ್ನೆ ನಾನು ಮರೆತೆನು
ತಿಳಿದು ತಿಳಿದು ತಿಳಿಯದ ಬುದ್ದಿಮಾಂದ್ಯ ನಾನು
ಏನೆಂದು ಹೇಳಲಿ? ನಿನ್ನದೆ ಹುಚ್ಚು
ನಿನ್ನ ಕೆನ್ನೆ ಗುಳಿಯ ಒಳಗೆ ಏಳೆದು
ನನ್ನ ಕೊಲ್ಲದಿರು

ಬದುಕೆಲ್ಲ ನಿನ್ನ ಮುದ್ದಾಡಲೆಂಬ ಬಯಕೆ
ಬಂದಿರುವುದೇಕೊ ಮನಕೆ, ತಡೆಯಲಾರೆನೆ..
ಅಚ್ಚೆ ಹಾಕಿ ಹೃದಯದ ಮೇಲೆ
ನಿನ್ನ ಹೆಸರೆ ಬರೆದೆ ಕಾರಣವೇನೆ?
ಸ್ವಚ್ಚ ಪ್ರೇಮಿ ನಾನಿರುವೆನು ನಿನಗೆ
ಏಂದೂ ಇರುವೆ ಹೀಗೆ...

ಸುರೇಂದ್ರ ನಾಡಿಗ್ ಹೆಚ್.ಏಂ