Wednesday, July 27, 2016

ಗಿರ್ ಗಿಟ್ಲೆ ಕಣ್ಣಲಿ...

!! ಗಿರ್ ಗಿಟ್ಲೆ ಕಣ್ಣಲಿ, ಗುರುಗುರುನೆ ನೋಡುವೆ
ಕಾರಂಜಿ ಕೈಯಲಿ ಮುಂಗುರುಳ ತೀಡುವೆ !!

ನೀ ಬೇಡದಾಗ ಏಕೆ ಮುಂದೆ ಬಂದು ಹೋಗುವೆ
ಹೇಳು, ಸಂಜೆ ಬಂದು ಮನಸಿನಲ್ಲೆ ವಾರ್ತೆ ಓದುವೆ
ನಾ ನಿನ್ನ ನೋಡದಿದ್ದರೆ ಸಾದ ಆಳಾಗುವೆ
ನೀ ಕಂಡ ಕ್ಷಣದಲಿ ರಾಜನಾಗುವೆ!!
!!ನಾ ರಾಜನಾಗುವೆ!!

ಹಳೆಯ ನೆನೆಪುಗಳ ನೀ ಇಣುಕಿ ತೆರೆಯುವೆ
ಹೃದಯದ ಮಾತನು ನೀ ಹುಡುಕಿ ಹಿಡಿಯುವೆ

ಸೀತಾಳೆ ಸಿಡುಬು ನನ್ನ ಸಿಟ್ಟಲ್ಲಿ ಕುಟುಕ್ಕುವೆ
ಆಮೇಲೆ ಅಕ್ಕರೆಯಿಂದ ಆರೈಕೆ  ಮಾಡುವೆ
ಜೋಡಿಯಾಗು ನೀ ನನಗೆ, ಕೈ ಬೀಸಿ ಏಕೆ ಹೋಗುವೆ?
ಸಾಂಬ್ರಾಣಿ ಹೊಗೆಯಂತೆ ಸುತ್ತಿಸುತ್ತಿ ಮತ್ತೆ ಬರುವೆ!
ನೋಡಬೇಡ ನನ್ನ ಹೀಗೆ...
ನಿನ್ನ ನೋಡಿ ನಾ ಜಾರಲಿ ನಿದಿರೆಗೆ ಹೇಗೆ??

ಚಂದವಾಗಿ ಬಳುಕಿ ನನ್ನ ಹೃದಯಕ್ಕೆ ಚುಚ್ಚುವೆ
ಅಂದವಾಗಿ ನಕ್ಕು ನನ್ನ ಉಸಿರೆ ನಿಲ್ಲಿಸುವೆ!
ತಂಗಾಳಿಯಂತೆ ಬಂದು ಮನದಲ್ಲೆ ಬೀಸುವೆ
ಮುಸ್ಸಂಜೆ ಮಳೆಯಂತೆ ಮುತ್ತನು ಸುರಿಸುವೆ!!
ಕಾಲ ನೇರ ನೋಡದೆಯೆ ಹೇಳುವೆನು ನಿನ್ನ ಹೆಸರೆ
ಕೋಟಿದೇವ್ರ ಮೇಲಾಣೆ, ನೀ ದೇವತೆ ನನ್ನುಸಿರೆ
ತಾಕಬೇಡ ನನ್ನ ಹೀಗೆ..
ನಿನ್ನ ಸ್ಪರ್ಶಿಸಿ ನಾ ಬದುಕಲಿ ಹೇಗೆ??


- ಸುರೇಂದ್ರ ನಾಡಿಗ್