ಮೊದಮೊದಲ ಮೋಹದ ನೋಟ
ಕಣ್ಣಲ್ಲೆ ನೀ ಮಾಡಿದೆ ಮಾಟ
ಒಲವೆ ನೀ ದೇವರ ವರವ
ಸೋಜಿಗ.... ಅಲ್ಲವ ??
ಇದು ತುಂತುರು ಹನಿಗಳ ಲೋಕ
ಹನಿ ಹನಿಯಲ್ಲು ನಿನ್ನದೆ ಶ್ಲೋಕ
ಒಲವೆ ನೀ ತೋರಿದೆ ಜಗವ
ಒಡ್ಡೋಲಗ.... ಅಲ್ಲವ ??
ಮುಂಜಾವಲಿ ನಿನ್ನದೆ ಕನಸು
ಮುಸ್ಸಂಜೆಗೆ ಕಾದಿದೆ ಮನಸು
ಇದು ಸಾವಿರ ದೇವರ ಕೊಸರು
ನೀನಿದ್ದರೆ ಕೋಟಿ ನೆಸರು
ನಿನ್ನ ನಗುವಿಗೆ ಮರೆತೆನು ಕ್ಷಣವ
ವ್ಯಪಕ.... ಅಲ್ಲವ ??
ಕಿವಿ ತುಂಬಿದೆ ನಿನ್ನದೆ ಮಾತು
ಕಣ್ಣಲ್ಲಿ ನಿನದೇ ಜಾಹಿರಾತು
ಮನಸಲ್ಲಿ ಏನಿದು ಕದನ
ನಾಚಿಕೆ ಬಿಟ್ಟಾಗಿದೆ ಸದನ
ನೀ ಹೂಬುಗ್ಗೆಯಲಿ ಚಿಮ್ಮಿ ಬರುವ
ಅಚ್ಚರಿ.... ಅಲ್ಲವ ??
-ಸುರೇಂದ್ರ ನಾಡಿಗ್