ಸವಿ ಕನಸು ಮೂಡಿದ ಗಳಿಗೆ ಇದಾಗಿದೆ
ನಿನ್ನ ನಗುವ ನೋಡಿ ಮನಸಿಗೆ ಹಾಯಾಗಿದೆ
ಏನಾಗಿದೆ? ಏನೋ ಆಗಿದೆ...
ನಿನ್ನ ಹೆಸರು ಕೂಗೊ ಬಯಕೆ ಮನಕೆ
ಮಿತಿ ಮೀರಿ ಅತಿಯಾಗಿದೆ
ಹೇಗೊ ಆಗಿದೆ.. ಹೇಗೇಗೊ ಆಗಿದೆ
ನಿನ್ನದೆನೊ ಸೆಳೆವು, ಬಾರಿ ಒಲವು ಮನದಿ
ಅತಿಯಾಗಿ ಮಿತಿಮೀರಿದೆ
ಯಾವ ಸೀಮೆ ದೇವತೆ ನೀನು, ಒಲವ ವರ್ಷ ಸುರಿಸಿದೆ
ಢವ ಢವ ಹೃದಯಕೆ ಇನ್ನು ಸಾಲದೆಂದು ನಾ ಬೇಡಲು ಬಂದೆ
ಕೋವಿಯನ್ನು ಮುಂದೆ ಇರಿಸಿ ಸುಡುವುದೇನು ಪ್ರೇಮವೆಂದೆ
ಸಾವಿಗು ಮಂಪರು ಬಡಿದು ಪೀತಿಗೆ ಪರವಶನಾದೆ
ಏನಾಗಿದೆ? ಏನೋ ಆಗಿದೆ...
ನಿನ್ನ ಜೊತೆಗೆ ಗಳಿಗೆ ಕಳೆಯೋ ಹರಕೆ ಮನಕೆ
ಮಿತಿ ಮೀರಿ ಅತಿಯಾಗಿದೆ
ಹೇಗೊ ಆಗಿದೆ.. ಹೇಗೇಗೊ ಆಗಿದೆ
ನಿನ್ನದೆ ಹರೆಯ ಕರೆಯ ಕೇಳೊ ಆಸೆ ಮನದಿ
ಅತಿಯಾಗಿ ಮಿತಿಮೀರಿದೆ
ನನ್ನೋಲವು ಊರಿದು ಗೆಳತಿ, ನೀ ಏಂದೊ ಇದರ ರಾಣಿಯಾದೆ
ಪ್ರತಿ ಅಣುವಿನಲ್ಲು ನಾ ಬರೆದ ಹೆಸರು ನಿಂದೆ
ಸುಡುಗಾಡು ಮರಳುಗಾಡು ಮಲೆನಾಡಗಿದೆ
ನೀ ಎರೆದ ಒಲವಲಿ ಬೆರೆತು ನಾನೇ ಕಡಲಾದೆ
ಏನಾಗಿದೆ? ಏನೋ ಆಗಿದೆ...
ನಿನ್ನನೆ ಸೇರೊ ಬಯಕೆ ಮನಕೆ
ಮಿತಿ ಮೀರಿ ಅತಿಯಾಗಿದೆ
ಹೇಗೊ ಆಗಿದೆ.. ಹೇಗೇಗೊ ಆಗಿದೆ
ನಿನ್ನದೆ ನಗುವು, ಮನದಿ ನಲಿವ ಒಲವು
ಅತಿಯಾಗಿ ಮಿತಿಮೀರಿದೆ
-ಸುರೇಂದ್ರ ನಾಡಿಗ್